ಸಿಂಚನಾಳಿಗೆ 18 ಅಂತಾರಾಷ್ಟ್ರೀಯ ದಾಖಲೆಗಳ ಗರಿ

ಮೂರು ವಿಭಿನ್ನ ಯೋಗಾಸನಗಳ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಸ್ಗೆ ಸೇರ್ಪಡೆದ ಮದೆನಾಡಿನ ವಿದ್ಯಾರ್ಥಿನಿ ಸಿಂಚನಾಳಿಗೆ ಯೋಗ ದಾಖಲೆಗಳ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಾಯಿತು. ಡಾ. ಮನೀಷ್ ವಿಷ್ಣೋಯಿ, ಕೆ.ಜಿ. ಬೋಪಯ್ಯ, ಎಚ್.ಟಿ. ಅನಿಲ್, ಅಗೋಳಿಕಜೆ ಪಿ. ಧನಂಜ ರೇಣುಕಾ ಕೀರ್ತಿ ಮತ್ತಿತರರು ಇದ್ದರು.
ಮೂರು ವಿಭಿನ್ನ ಯೋಗಾಸನಗಳ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಸ್ಗೆ ಸೇರ್ಪಡೆದ ಮದೆನಾಡಿನ ವಿದ್ಯಾರ್ಥಿನಿ ಸಿಂಚನಾಳಿಗೆ ಯೋಗ ದಾಖಲೆಗಳ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಾಯಿತು. ಡಾ. ಮನೀಷ್ ವಿಷ್ಣೋಯಿ, ಕೆ.ಜಿ. ಬೋಪಯ್ಯ, ಎಚ್.ಟಿ. ಅನಿಲ್, ಅಗೋಳಿಕಜೆ ಪಿ. ಧನಂಜ ರೇಣುಕಾ ಕೀರ್ತಿ ಮತ್ತಿತರರು ಇದ್ದರು.ಸಿಂಚನಾಳಿಗೆ ಗರಿ
Published on: 

ಮಡಿಕೇರಿ

ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮೂರು ವಿಭಿನ್ನ ಯೋಗಾಸನಗಳ ಮೂಲಕ ಮದೆನಾಡಿನ ವಿದ್ಯಾರ್ಥಿನಿ ಸಿಂಚನಾ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಸ್ಗೆ ಸೇರ್ಪಡೆಯಾಗಿದ್ದಾಳೆ. ಇದರೊಂದಿಗೆ ಈಕೆ ಯೋಗ ಪ್ರದರ್ಶನದಲ್ಲಿ ಒಟ್ಟು 18 ಅಂತರರಾಷ್ಟ್ರೀಯ ದಾಖಲೆಗಳನ್ನು ತನ್ನದಾಗಿಸಿಕೊಂಡAತಾಗಿದೆ.

ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮದೆನಾಡಿನ ಬಿಜಿಎಸ್ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಸಿಂಚನಾ ಒಂದೇ ವೇದಿಕೆಯಲ್ಲಿ ಮೂರು ಯೋಗ ಪ್ರದರ್ಶನಗಳನ್ನು ನೀಡುವ ಮೂಲಕ ಈ ವಿಶ್ವದಾಖಲೆ ಬರೆದಿದ್ದಾಳೆ. ಡಿಂಬಾಸನದಲ್ಲಿ 5 ನಿಮಿಷ ಸತತವಾಗಿ ಚಲಿಸುವುದು, ಧನುರಾಸನ ಭಂಗಿಯಲ್ಲಿ ತಿರುಗುವುದು ಹಾಗೂ 1 ನಿಮಿಷದ ಕಾಲ ಸುತ್ತ ಡಿಂಬಾಸನ ಮಾಡುವ ಮೂಲಕ ಮೂರು ಪ್ರದರ್ಶನಗಳಲ್ಲೂ ಸೈ ಎನಿಸಿಕೊಂಡಿದ್ದಾಳೆ.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೇಕಾರ್ಡ್ಸ್ನ ಏಷ್ಯಾದ ತೀರ್ಪುಗಾರರಾದ ಡಾ. ಮನೀಷ್ ವಿಷ್ಣೋಯಿ ಅವರು ಮೂರು ಯೋಗ ದಾಖಲೆಗಳ ಪ್ರಮಾಣ ಪತ್ರವನ್ನು ಸಿಂಚನಾಳಿಗೆ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ 18 ವಿಶ್ವದಾಖಲೆಗಳನ್ನು ಬರೆದಿರುವ ಸಿಂಚನಾಳ ಪ್ರತಿಭೆ ಅನನ್ಯವಾದದ್ದು. ಆಕೆಯ ಯೋಗ ದಾಖಲೆಯನ್ನು ಈವರೆಗೂ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಅಮೆರಿಕ ಮೂಲದ ಈ ಸಂಸ್ಥೆ ಜಗತ್ತಿನಾದ್ಯಂತ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸುತ್ತಿದ್ದು, ಯೋಗದಲ್ಲಿ ಇದುವರೆಗೆ ಸುಮಾರು 1 ಸಾವಿರ ದಾಖಲೆಗಳಷ್ಟೇ ವಿಶ್ವವ್ಯಾಪಿ ನೋಂದಣಿಯಾಗಿವೆ ಎಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಸಿಂಚನಾಳಿಗೆ ಗೌರವ ಸನ್ಮಾನ ನೆರವೇರಿಸಿ ಮಾತನಾಡಿದ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ಪ್ರಧಾನಿ ನರೇಂದ್ರ ಮೋದಿಯವರ ಪರಿಕಲ್ಪನೆಯಿಂದ ಜೂನ್ 21 ರಂದು ವಿಶ್ವ ಯೋಗ ದಿನ ಆಚರಿಸಲಾಗುತ್ತಿದ್ದು, ಭಾರತೀಯ ಯೋಗ ವಿದ್ಯೆ ಜಗತ್ತಿಗೆ ಪರಿಚಿತವಾಗಿದೆ. ಮದೆನಾಡಿನಂಥ ಗ್ರಾಮೀಣ ಪ್ರದೇಶದಲ್ಲಿ ಸಿಂಚನಾ ಸಾಧನೆ ಮಾಡುವ ಮೂಲಕ ಹಳ್ಳಿಯಲ್ಲೂ ಪ್ರತಿಭೆಯಿದೆ ಎಂಬುದನ್ನು ನಿರೂಪಿಸಿದ್ದಾಳೆ ಎಂದರು.

ರೋಟರಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಚ್.ಟಿ. ಅನಿಲ್ ಮಾತನಾಡಿ, ಸಿಂಚನಾಳ ಸಾಧನೆ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಶಾಲಾ ಹಂತದಲ್ಲಿ ಈಕೆಯ ಯೋಗ ಪ್ರದರ್ಶನಕ್ಕೆ ರೋಟರಿ ಸಂಸ್ಥೆಗಳು ಸಹಯೋಗ ನೀಡಲಿವೆ. ಆಕೆಯ ತಾಯಿ ರೇಣುಕಾ ಹಾಗೂ ತಂದೆ ಕೀರ್ತಿಕುಮಾರ್ ನೀಡಿದ ಪ್ರೋತ್ಸಾಹ ಇತರ ಪೋಷಕರಿಗೂ ಮಾದರಿ ಎಂದು ಹೇಳಿದರು.

ಮದೆನಾಡು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಅಗೋಳಿಕಜೆ ಪಿ. ಧನಂಜಯ್ ಮಾತನಾಡಿ, ದೇವರಕೊಲ್ಲಿ ಸನ್ನಿಧಿಯಲ್ಲಿಯೇ ಮೊದಲ ಪ್ರದರ್ಶನ ನೀಡಿದ್ದ ಸಿಂಚನಾ, ಇದೇ ದೇವಾಲಯದಲ್ಲಿ ಮೂರು ವಿಶ್ವದಾಖಲೆ ಮಾಡಿ ಮದೆನಾಡಿನ ಕೀರ್ತಿಯನ್ನು ಜಗತ್ತಿಗೆ ಪಸರಿಸಿದ್ದಾಳೆ ಎಂದರು.

ಹಿರಿಯ ಸಾಹಿತಿ ಬಿ.ಆರ್. ಜೋಯಪ್ಪ, ಯೋಗ ಗುರು ಕೆ.ಕೆ. ಮಹೇಶ್ ಕುಮಾರ್, ದೇವಸ್ಥಾನ ಸಮಿತಿ ಅಧ್ಯಕ್ಷ ಬಿ.ಜೆ. ಯಶೋಧರ ಹಾಗೂ ಬಿಲ್ಲವ ಸಂಘದ ಅಧ್ಯಕ್ಷ ಬಿ. ಪ್ರದೀಪ್ ಮಾತನಾಡಿ ಸಾಧಕಿಯ ಶ್ರಮವನ್ನು ಕೊಂಡಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿಂಚನಾ, ಈ ಮೂರು ವಿಶ್ವದಾಖಲೆಗಳ ಸಾಧನೆ ನನಗೆ ಹೆಮ್ಮೆ ತಂದಿದೆ ಹಾಗೂ ಮತ್ತಷ್ಟು ಸಾಧನೆಗಳನ್ನು ಮಾಡಲು ಸ್ಪೂರ್ತಿ ನೀಡಿದೆ ಎಂದಳು. ತಾಯಿ ರೇಣುಕಾ ಕೀರ್ತಿ ಮಾತನಾಡಿ, ಸಿಂಚನಾಳಿಗೆ 3 ವರ್ಷವಿರುವಾಗಲೇ ಸರಳ ವ್ಯಾಯಾಮ ಕಲಿಸಿ, ಹಂತ ಹಂತವಾಗಿ ಕಠಿಣ ಯೋಗ ತರಬೇತಿ ನೀಡಲಾಯಿತು. ಮುಂದಿನ ದಿನಗಳಲ್ಲಿ ವಿವಿಧ ಶಾಲೆಗಳಲ್ಲಿ ಈಕೆಯಿಂದ ಯೋಗ ಕಾರ್ಯಕ್ರಮ ನೀಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪ್ರಮುಖರಾದ ವಿಠಲ, ಮಾಲಿನಿ, ಶ್ರೀನಿಧಿ ಬಂಟ್ವಾಳ,ಎA.ಎಸ್. ಶಿವರಾಮ್, ಸಿಂಚನಾಳ ತಂದೆ ಕೀರ್ತಿಕುಮಾರ್ ಹಾಗೂ ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net