ಶ್ರೀ ನಾರಾಯಣ ಗುರು ಜಯಂತಿ

ಕಲ್ಲುಕೋರೆ ಇಂಜಿಲಗೆರೆಯ ಅಯ್ಯಪ್ಪ ದೇವಸ್ಥಾನದ ಸಮುದಾಯ ಭವನದಲ್ಲಿ
guru jayanti
ಗೌರಿ ಶಾಖೆ ಹಾಗೂ ವನಿತಾ ಘಟಕದ ವತಿಯಿಂದ ಶ್ರೀ ನಾರಾಯಣ ಗುರುದೇವರ 172ನೇ ಜಯಂತಿಯ ಉದ್ಘಾಟನೆ narayana
Published on: 

ಸಿದ್ದಾಪುರ : ಎಸ್‌ಎನ್‌ಡಿಪಿ ಗೌರಿ ಶಾಖೆ ಹಾಗೂ ವನಿತಾ ಘಟಕದ ವತಿಯಿಂದ ಶ್ರೀ ನಾರಾಯಣ ಗುರುದೇವರ 172ನೇ ಜಯಂತಿಯನ್ನು ಸೆ.27ರಂದು ಕಲ್ಲುಕೋರೆ ಇಂಜಿಲಗೆರೆಯ ಅಯ್ಯಪ್ಪ ದೇವಸ್ಥಾನದ ಸಮುದಾಯ ಭವನದಲ್ಲಿ ಇತೀಚೆಗೆ ಭಕ್ತಿ, ಸಡಗರದಿಂದ ಆಚರಿಸಲಾಯಿತು. ಗೌರಿ ಶಾಖೆಯಲ್ಲಿ ಪ್ರಥಮ ಬಾರಿಗೆ ಗುರು ಜಯಂತಿ ಆಚರಿಸಿರುವುದು ವಿಶೇಷವಾಗಿತ್ತು. ಬೆಳಿಗ್ಗೆ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು, ಗೌರಿ ಶಾಖೆ ಅಧ್ಯಕ್ಷ ಮಣಿಲಾಲ್ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು ಕೊಡಗು ಎಸ್‌ಎನ್‌ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ದೀಪ ಬೆಳಗಿಸಿ ಉದ್ಘಾಟಿಸಿದರು

ವಿ.ಕೆ. ಲೋಕೇಶ್ ಅವರು ಎಸ್‌ಎನ್‌ಡಿಪಿ ಸಂಘಟನೆಯ ಮಹತ್ವ ಹಾಗೂ ನಾರಾಯಣ ಗುರುದೇವರ ಸಂದೇಶಗಳನ್ನು ಸಮಾಜದಲ್ಲಿ ಅಳವಡಿಸಿಕೊಳ್ಳುವ ಅಗತ್ಯವನ್ನು ವಿವರಿಸಿದರು ಮಾಜಿ ಕಾರ್ಯದರ್ಶಿ ಸಜೀವನ್ ಅವರು ಗುರುದೇವರ ಜೀವನ ಚರಿತ್ರೆ, ಎಸ್‌ಎನ್‌ಡಿಪಿ ಸ್ಥಾಪನೆಯ ಹಿನ್ನೆಲೆ ಹಾಗೂ ಶಿಕ್ಷಣಕ್ಕೆ ಅವರು ನೀಡಿದ ಮಹತ್ವದ ಕುರಿತು ಮಾತನಾಡಿದರು

ಭಗವದ್ಗೀತೆ ಪಾರಾಯಣ, ಗುರುದೇವರ ಜೀವನ ಚರಿತ್ರೆ, ಗುರುವಚನ ಹಾಗೂ ದೈವದಶಕಂ ಸ್ಪರ್ಧೆಗಳು ನಡೆದವು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದ ಲಿಖಿತ್‌ಲಾಲ್ ಹಾಗೂ ವಿಷ್ಣು ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಿರಿಯ ಕಾರ್ಯಕರ್ತರಾದ ಪಿ.ಎನ್. ಸಹದೇವನ್ ಹಾಗೂ ದಿವಾಕರನ್ ಸಿ.ಕೆ. ಅವರನ್ನು ಸನ್ಮಾನಿಸಲಾಯಿತು

ಕರಾಟೆ ತರಬೇತುದಾರ್ತಿ, ಸಿಐಎಸ್‌ಸಿಇ ನ್ಯಾಷನಲ್ ಕೋಚ್ ಹಾಗೂ ಕರ್ನಾಟಕ ರಾಜ್ಯ ತಂಡದ ಕೋಚ್ ಶ್ರೀಜಾ ಸುನಿಲ್ ಅವರನ್ನು ಸನ್ಮಾನಿಸಲಾಯಿತು. ತಿರುವಾತಿರ ನೃತ್ಯ, ಗುರುದೇವರ ಕೀರ್ತನೆ, ಓಣಂ ಪೂಕಳಂ ಸ್ಪರ್ಧೆ ಹಾಗೂ ವಿವಿಧ ಮನರಂಜನಾ ಆಟಗಳು ಗಮನ ಸೆಳೆದವು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net