ಮೀಸಲಾತಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆ

ಮೀಸಲಾತಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆ
ಕೊಡಗು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ನೂತನ ಮೀಸಲಾತಿ ಪಟ್ಟಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಹಾಗೂ ನೂತನ ಕುಶಾಲನಗರ ತಾಲೂಕಿಗೆ ತೀವ್ರ ಅನ್ಯಾಯವಾಗಿದ್ದು, ಮರುಪರಿಶೀಲನೆಗೆ ಆಗ್ರಹಿಸಿ ತಹಸೀಲ್ದಾರ್ ಕಚೇರಿಗೆ ಆಕ್ಷೇಪಣೆ ಸಲ್ಲಿಸಲಾಯಿತು. ಚಂದ್ರಶೇಖರ್ ಹೆರೂರು, ಭಾಸ್ಕರ್ ನಾಯಕ್, ಕೆ.ಡಿ. ಪ್ರಶಾಂತ್, ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ಡಿ.ಸಿ. ಮಂಜುನಾಥ್, ರಾಮನಾಥನ್ ಹಾಗೂ ಸುಮನ್ ಗೌಡ ಈ ಸಂದರ್ಭ ಇದ್ದರು.
Published on: 

ಮಡಿಕೇರಿ

ಕೊಡಗು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ನೂತನ ಮೀಸಲಾತಿ ಪಟ್ಟಿಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರ ಹಾಗೂ ನೂತನ ಕುಶಾಲನಗರ ತಾಲೂಕಿಗೆ ತೀವ್ರ ಅನ್ಯಾಯವಾಗಿದ್ದು, ಪ್ರಸ್ತುತ ಪಟ್ಟಿಯನ್ನು ತಕ್ಷಣವೇ ಮರುಪರಿಶೀಲಿಸಬೇಕು ಎಂದು ಆಗ್ರಹಿಸಿ ಸ್ಥಳೀಯ ಪ್ರಮುಖರು ಗುರುವಾರ ತಹಸೀಲ್ದಾರ್ ಕಚೇರಿಗೆ ಆಕ್ಷೇಪಣಾ ಮನವಿ ಸಲ್ಲಿಸಿದ್ದಾರೆ.

ವೀರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ 6 ಸಾಮಾನ್ಯ ಕ್ಷೇತ್ರಗಳನ್ನು ನೀಡಿದ್ದರೆ, ಮಡಿಕೇರಿ ವಿಧಾನಸಭಾ ಕ್ಷೇತ್ರಕ್ಕೆ ಕೇವಲ 2 ಸಾಮಾನ್ಯ ಕ್ಷೇತ್ರಗಳನ್ನು ಮೀಸಲಿಡಲಾಗಿದೆ. ಹೆಚ್ಚುವರಿಯಾಗಿ ಮಡಿಕೇರಿಯಲ್ಲಿ ಹೆಚ್ಚಿನ ಕ್ಷೇತ್ರಗಳನ್ನು ಮಹಿಳಾ ಮೀಸಲಾತಿಗೆ ಒಳಪಡಿಸಿರುವುದರಿಂದ ಸಾಮಾನ್ಯ ವರ್ಗದಿಂದ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳ ಅವಕಾಶಗಳು ಸೀಮಿತವಾಗಿವೆ. ತಾಲೂಕುವಾರು ಹಂಚಿಕೆಯಲ್ಲಿ ಸೋಮವಾರಪೇಟೆ, ಮಡಿಕೇರಿ, ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕುಗಳಿಗೆ ಸಾಮಾನ್ಯ ಕ್ಷೇತ್ರಗಳ ಅವಕಾಶ ಸಿಕ್ಕಿದ್ದರೂ, ಕುಶಾಲನಗರ ತಾಲೂಕಿಗೆ ಕೇವಲ 1 ಮಹಿಳಾ ಸಾಮಾನ್ಯ ಕ್ಷೇತ್ರ ಲಭಿಸಿದೆ. ಒಂದೇ ಒಂದು ಸಾಮಾನ್ಯ ಕ್ಷೇತ್ರ ನೀಡದಿರುವುದು ತಾಲ್ಲೂಕಿನ ಜನಸಂಖ್ಯೆ ಹಾಗೂ ಪ್ರಾತಿನಿಧ್ಯದ ಹಕ್ಕನ್ನು ಕಸಿದುಕೊಂಡAತಾಗಿದೆ.

ಕಳೆದ ನಾಲ್ಕು ಚುನಾವಣೆಗಳ ಇತಿಹಾಸವನ್ನು ಗಮನಿಸಿದರೆ ಸಿದ್ದಾಪುರ, ಮಕ್ಕಂದೂರು ಮತ್ತು ಚೆಯ್ಯಂಡಾಣೆ ಕ್ಷೇತ್ರಗಳು 3 ಬಾರಿ ಸಾಮಾನ್ಯ ವರ್ಗಕ್ಕೆ ನಿಗದಿಯಾಗಿದ್ದರೆ, ಗೋಣಿಕೊಪ್ಪಲು ಹಾಗೂ ಮಾದಾಪುರ ಕ್ಷೇತ್ರಗಳು ಸತತ 4 ಬಾರಿಯೂ ಸಾಮಾನ್ಯ ವರ್ಗಕ್ಕೇ ಲಭಿಸಿವೆ. ನಿಯಮಾನುಸಾರ ರೋಟೇಶನ್ ಪದ್ಧತಿಯನ್ನು ಸರಿಯಾಗಿ ಪಾಲಿಸಲಾಗಿದೆಯೇ ಎಂಬ ಸಂಶಯ ವ್ಯಕ್ತವಾಗಿದೆ.

ಹಾಗಾಗಿ ಪ್ರಸ್ತುತ ಪ್ರಕಟಿಸಲಾಗಿರುವ ಕೊಡಗು ಜಿ.ಪಂ. ಮೀಸಲಾತಿ ಪಟ್ಟಿಯನ್ನು ಸಮಗ್ರವಾಗಿ ಪುನರ್ ಪರಿಶೀಲಿಸಬೇಕು. ಮಡಿಕೇರಿ ಮತ್ತು ವೀರಾಜಪೇಟೆ ವಿಧಾನಸಭಾ ಕ್ಷೇತ್ರಗಳ ನಡುವೆ ಸಮರ್ಪಕ ಮಾನದಂಡಗಳ ಆಧಾರದಲ್ಲಿ ಸಾಮಾನ್ಯ ಕ್ಷೇತ್ರಗಳನ್ನು ಹಂಚಿಕೆ ಮಾಡಬೇಕು. ಕುಶಾಲನಗರ ತಾಲೂಕಿಗೆ ಕಾನೂನುಬದ್ಧವಾಗಿ ಸಾಮಾನ್ಯ ಕ್ಷೇತ್ರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಸಿದ್ದಾಪುರ, ಗೋಣಿಕೊಪ್ಪಲು, ಮಕ್ಕಂದೂರು, ಚೆಯ್ಯಂಡಾಣೆ ಹಾಗೂ ಮಾದಾಪುರ ಕ್ಷೇತ್ರಗಳಲ್ಲಿ ಪದೇಪದೇ ಸಾಮಾನ್ಯ ಮೀಸಲಾತಿ ಬರಲು ಆಧಾರವಾದ ಲೆಕ್ಕಾಚಾರ, ನಿಯಮಗಳು ಹಾಗೂ ದಾಖಲೆಗಳನ್ನು ಸಾರ್ವಜನಿಕರ ಗಮನಕ್ಕೆ ತರಬೇಕು. ಆಕ್ಷೇಪಣೆ ಸಲ್ಲಿಸಿದವರ ವಾದ ಆಲಿಸಲು ಸಮ್ಮುಖ ವಿಚಾರಣೆ ನಡೆಸಿ, ಕೈಗೊಂಡ ಕ್ರಮಗಳ ಕುರಿತು ಅಧಿಕೃತ ಲಿಖಿತ ಉತ್ತರ ನೀಡಬೇಕು.ಸಾರ್ವಜನಿಕರ ಅನುಮಾನಗಳನ್ನು ನಿವಾರಿಸಿ, ಪ್ರಜಾಪ್ರಭುತ್ವದ ಆಶಯದಂತೆ ಪ್ರತಿಯೊಂದು ತಾಲೂಕು ಮತ್ತು ಪ್ರದೇಶದ ಅಭ್ಯರ್ಥಿಗಳಿಗೆ ನ್ಯಾಯಸಮ್ಮತ ಚುನಾವಣಾ ಸ್ಪರ್ಧೆಯ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಲಾಗಿದೆ.

ಚಂದ್ರಶೇಖರ್ ಹೆರೂರು, ಭಾಸ್ಕರ್ ನಾಯಕ್, ಕೆ.ಡಿ. ಪ್ರಶಾಂತ್, ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ಡಿ.ಸಿ. ಮಂಜುನಾಥ್, ರಾಮನಾಥನ್ ಹಾಗೂ ಸುಮನ್ ಗೌಡ ಈ ಸಂದರ್ಭ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net