ಮರಗೋಡುವಿನಲ್ಲಿ ಹುಲಿ ದಾಳಿಗೆ ಕರು ಬಲಿ

ಮತ್ತೊಂದು ಕರುವನ್ನು ಎಳೆದೊಯ್ದ ವ್ಯಾಘ್ರ
ಹುಲಿ ಹೆಜ್ಜೆ ಗುರುತು
ಹುಲಿ ಹೆಜ್ಜೆ ಗುರುತು
Published on: 

ಸಿದ್ದಾಪುರ: ಇಲ್ಲಿನ ಮರಗೋಡು ಗ್ರಾಮದ ಅಯ್ಯಪ್ಪ ಬಡಾವಣೆಯಲ್ಲಿ ಬುಧವಾರ ಹುಲಿ ದಾಳಿ ನಡೆಸಿ ಒಂದು ಕರುವನ್ನು ಬಲಿ ಪಡೆದಿದೆ.

ಅಯ್ಯಪ್ಪ ಬಡಾವಣೆಯ ಪರಿಚನ ಮನೋಜ್ ಅವರ ಕರುಗಳ ಮೇಲೆ ಹುಲಿ ದಾಳಿ ನಡೆಸಿದೆ. ಒಂದು ಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ಕರುವನ್ನು ಕಾಡಿಗೆ ಎಳೆದೊಯ್ದಿದೆ.

ಮರಗೋಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುಲಿ ಸಂಚಾರದ ಸುದ್ದಿ ಹರಡುತ್ತಿದ್ದಂತೆ ಗ್ರಾಮಸ್ಥರು ಭಯಭೀತರಾಗಿದ್ದಾರೆ. ತೋಟದ ಕೆಲಸಗಳಿಗೆ ತೆರಳುವ ಕಾರ್ಮಿಕರು ಹಾಗೂ ಜಾನುವಾರು ಮೇಯಿಸಲು ಕರೆದೊಯ್ಯುವವರಲ್ಲಿ ಆತಂಕ ಮನೆ ಮಾಡಿದೆ.

ಈ ಬಗ್ಗೆ ಮಾಹಿತಿ ಪಡೆದು ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹುಲಿಯನ್ನು ಸೆರೆ ಹಿಡಿಯುವ ಉದ್ದೇಶದಿಂದ ಬೋನು ಅಳವಡಿಸಲು ಅರಣ್ಯ ಇಲಾಖೆ ಮುಂದಾಗಿದೆ.

ಚಿತ್ರ 04ಎಸ್ ಡಿ ಪಿ 01:-ಹುಲಿ ಹೆಜ್ಜೆ ಗುರುತು

ಚಿತ್ರ 04ಎಸ್ ಡಿ ಪಿ 02:-ಮರಗೋಡುವಿನಲ್ಲಿ ಹುಲಿ ದಾಳಿಯಿಂದ ಬಲಿಯಾಗಿರುವ ಹಸು