ಮಡಿಕೇರಿ ದಸರಾಕ್ಕೆ ಪೂವಮ್ಮಗೆ ಆಹ್ವಾನ

ಮಡಿಕೇರಿ ದಸರಾಕ್ಕೆ ಪೂವಮ್ಮಗೆ ಆಹ್ವಾನ
ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಮಾಚೆಟ್ಟಿರ ಪೂವಮ್ಮ ಅವರನ್ನು ಶಾಸಕ ಡಾ. ಮಂತರ್ ಗೌಡ ಅಭಿನಂದಿಸಿದರು. ಪೂವಮ್ಮ ಪಾಲಕರಾದ ರಾಜು, ಜಾಜಿ ಇದ್ದರು.
Published on: 

ಮಡಿಕೇರಿ

ಮಡಿಕೇರಿ ದಸರಾ ಮಹೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸುವಂತೆ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ, ಕೊಡಗಿನ ಹೆಮ್ಮೆಯ ಕ್ರೀಡಾಪಟು ಮಾಚೆಟ್ಟಿರ ಪೂವಮ್ಮ ಅವರಿಗೆ ಶಾಸಕ ಡಾ. ಮಂತರ್ ಗೌಡ ಆಹ್ವಾನ ನೀಡಿದ್ದಾರೆ. ಶುಕ್ರವಾರ ರಾತ್ರಿ ಮಂಗಳೂರಿಗೆ ತೆರಲಿ ಮಾಚೆಟ್ಟಿರ ಪೂವಮ್ಮ ಅವರ ನಿವಾಸಕ್ಕೆ ಭೇಟಿ ನೀಡಿದ ಮಂತರ್ ಗೌಡ ಏಷ್ಯನ್ ಗೇಮ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು ದೇಶ ಹಾಗೂ ಕೊಡಗಿನ ಕೀರ್ತಿಯನ್ನು ಎತ್ತಿಹಿಡಿದ ಅವರ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿ ಗೌರವಿಸಿದರು.

ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ವೀಡಿಯೋ ಕಾಲ್ ಮುಖಾಂತರ ಶುಕ್ರವಾರ ಅಭಿನಂದನೆ ಸಲ್ಲಿಸಿದ್ದರು. ಶನಿವಾರ ದೂರವಾಣಿ ಕರೆ ಮಾಡಿದ್ದ ಕೊಡಗು-ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಚಿನ್ನದ ಪದಕ ಪಡೆದಿರುವ ಪೂವಮ್ಮ ಕೊಡಗಿನ ಹೆಮ್ಮೆ, ಕರ್ನಾಟಕದ ಹೆಮ್ಮೆ ಎಂದು ಬಣ್ಣಿಸಿ, ಅಭಿನಂದನೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net