ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

ಚೆಯ್ಯಂಡಾಣೆ ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷರಾದ ಚೇನಂಡ ಸಂಪತ್ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಉದ್ಘಾಟಿಸಿದರು.
ಚೆಯ್ಯಂಡಾಣೆ ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷರಾದ ಚೇನಂಡ ಸಂಪತ್ ಅವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಉದ್ಘಾಟಿಸಿದರು.
Published on: 

ನಾಪೋಕ್ಲು: ಚೆಯ್ಯಂಡಾಣೆ ಕನ್ನಡ ರಾಜ್ಯೋತ್ಸವ ಕ್ರೀಡಾ ಸಮಿತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನರಿಯಂದಡ ಕೇಂದ್ರ ಪ್ರೌಢಶಾಲೆಯ ಮೈದಾನದಲ್ಲಿ ಮಂಗಳವಾರ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಆಯೋಜಿಸಲಾಗಿತ್ತು.

ಸ್ಪರ್ಧೆಯಲ್ಲಿ 0.22 ಎಂ.ಎಂ. ಹಾಗೂ 12 ಬೋರ್ ಎಂಬ ಎರಡು ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆಗಳನ್ನು ನಡೆಸಲಾಯಿತು. 0.22 ಎಂ.ಎಂ. ವಿಭಾಗದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯ ಬಹುಮಾನ ಪ್ರಾಯೋಜಕರು ಹಾಗೂ ಕ್ರೀಡಾಕೂಟ ಸಮಿತಿ ಅಧ್ಯಕ್ಷರಾದ ಚೇನಂಡ ಸಂಪತ್ ಅವರು ಸ್ಪರ್ಧೆಯನ್ನು ಉದ್ಘಾಟಿಸಿದರು. ಹಾಗೆಯೇ, 12ನೇ ಬೋರ್ ವಿಭಾಗದ ಸ್ಪರ್ಧೆಯ ಬಹುಮಾನ ಪ್ರಾಯೋಜಕರಾದ ಚೇನಂಡ ಸಚಿನ್ ಅಯ್ಯಪ್ಪ ಅವರು ಈ ವಿಭಾಗದ ಸ್ಪರ್ಧೆಗೆ ಚಾಲನೆ ನೀಡಿದರು.

ವಿಜೇತರ ವಿವರ: 0.22 ಎಂ.ಎಂ. ವಿಭಾಗ: ಪ್ರಥಮ ಸ್ಥಾನ: ಬಿದ್ದಂಡ ನಮೂ ಚಿಯಣ್ಣ , ದ್ವಿತೀಯ ಸ್ಥಾನ: ಬಿದ್ದಂಡ ರಾಜೇಶ್ ಅಚ್ಚಯ್ಯ, ತೃತೀಯ ಸ್ಥಾನ: ಚೇನಂಡ ಹರ್ಷ ಅಯ್ಯಣ್ಣ ,

12 ಬೋರ್ ವಿಭಾಗ: ಪ್ರಥಮ ಸ್ಥಾನ: ಚೇನಂಡ ಬೋಪಣ್ಣ, ದ್ವಿತೀಯ ಸ್ಥಾನ: ಚೆಯ್ಞಂಡ ಲವ ಅಪ್ಪುಚ್ಚು , ತೃತೀಯ ಸ್ಥಾನ: ಚೇನಂಡ ಸಚಿನ್ ಅಯ್ಯಪ್ಪ

ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಈ ಕ್ರೀಡಾಕೂಟದಲ್ಲಿ ಕನ್ನಡ ರಾಜ್ಯೋತ್ಸವ ಕ್ರೀಡಾಕೂಟ ಸಮಿತಿಯು ಪದಾಧಿಕಾರಿಗಳು ಸದಸ್ಯರು ಹಾಗೂ ಕ್ರೀಡಾಭಿಮಾನಿಗಳು ಭಾಗವಹಿಸಿದ್ದರು.

ಈ ಸಂದರ್ಭ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಪ್ರಮುಖರು ವಿಜೇತರರಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.