ಜೀವನದಲ್ಲಿ ಗಾಂಧಿ, ಶಾಸ್ತ್ರಿ ತತ್ವ ಅಳವಡಿಸಿಕೊಳ್ಳಿ

ಪ್ರಾಂಶುಪಾಲೆ ಎಂ.ಕೆ.ಪದ್ಮಾ ಸಲಹೆ
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಪ್ರಾಂಶುಪಾಲರಾದ ಡಾ.ಕೆ.ಜಿ.ವೀಣಾ, ಎಂ.ಕೆ.ಪದ್ಮಾ, ಉಪನ್ಯಾಸಕರಾದ ರಾಘವೇಂದ್ರ, ಅಕ್ಷಿತಾ ನಾಯ್ಕ , ಸುನಿಲ್ ಕುಮಾರ್, ಭೋಜಮ್ಮ, ಪವಿತ್ರಾ, ಮಾಣಿಕ್ಯ ಇದ್ದರು.
ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಜಯಂತಿ ಆಚರಿಸಲಾಯಿತು. ಪ್ರಾಂಶುಪಾಲರಾದ ಡಾ.ಕೆ.ಜಿ.ವೀಣಾ, ಎಂ.ಕೆ.ಪದ್ಮಾ, ಉಪನ್ಯಾಸಕರಾದ ರಾಘವೇಂದ್ರ, ಅಕ್ಷಿತಾ ನಾಯ್ಕ , ಸುನಿಲ್ ಕುಮಾರ್, ಭೋಜಮ್ಮ, ಪವಿತ್ರಾ, ಮಾಣಿಕ್ಯ ಇದ್ದರು.
Published on: 

ವಿರಾಜಪೇಟೆ : ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಅವರನ್ನು ಜಯಂತಿಯ ದಿನದಂದು ಮಾತ್ರ ನೆನೆದರೆ ಸಾಲದು. ಅವರ ತತ್ವ, ವಿಚಾರಗಳನ್ನು ಅರ್ಥೈಸಿ ಅಳವಡಿಸಿಕೊಂಡಾಗ ಅವರ ಜಯಂತಿ ಆಚರಣೆ ಅರ್ಥಪೂರ್ಣವಾಗುತ್ತದೆ ಎಂದು ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಎಂ.ಕೆ.ಪದ್ಮಾ ಸಲಹೆ ನೀಡಿದರು.

ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಶುಕ್ರವಾರ ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಘಟಕದ ಸಂಯುಕ್ತ ಆಶ್ರಯದಲ್ಲಿ ಆಚರಿಸಲಾದ ಗಾಂಧಿ ಜಯಂತಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಗಾಂಧಿ ಹಾಗೂ ಶಾಸ್ತ್ರಿಯವರ ವಿಚಾರ ಧಾರೆ ಹಾಗೂ ಮಹತ್ವವನ್ನು ಅರಿತು ಒಂದೊಂದು ತತ್ವವನ್ನು ನಾವು ಅಳವಡಿಸಿಕೊಡರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬಹುದು. ಬಾಹ್ಯ ಸ್ವಚ್ಛತೆಯೊಂದಿಗೆ ಪ್ರತಿಯೊಬ್ಬರೂ ತಮ್ಮ ಆಂತರ್ಯವನ್ನು ಸ್ವಚ್ಛಗೊಳಿಸಿಕೊಳ್ಳಬೇಕು. ಸಮಾನತೆಯಿಂದ ಆ ಮಹನೀಯರು ಕಂಡ ಸದೃಢ ಭಾರತ ನಿರ್ಮಾಣ ಮಾಡೋಣ ಎಂದರು.

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ ಕೆ.ಜಿ.ವೀಣಾ ಗಾಂಧಿ ಅವರ ಅಹಿಂಸೆ, ಗ್ರಾಮ ಸ್ವರಾಜ್ಯ, ಸಮಾನತೆ, ಗುಡಿ ಕೈಗಾರಿಕೆಯ ಅಭಿವೃದ್ಧಿ ಪ್ರಸ್ತುತ ಸಮಾಜಕ್ಕೆ ಮುಖ್ಯವಾದದ್ದು. ಅದೇ ರೀತಿ ಲಾಲ್ ಬಹಾದೂರ್ ಶಾಸ್ತ್ರಿ ಅವರ ಸರಳ ಜೀವನ, ಅಪ್ರತಿಮ ದೇಶಭಕ್ತಿಯನ್ನು ಪ್ರತಿಯೊಬ್ಬರು ಅವರ ಕೆಲವು ಗುಣಗಳನ್ನಾದರೂ ಅಳವಡಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಕಾಲೇಜಿನ ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ ಘಟಕದ ವಿದ್ಯಾರ್ಥಿಗಳು ಶ್ರಮದಾನ ಮಾಡುವ ಮೂಲಕ ಕಾಲೇಜಿನ ಆವರಣ ಹಾಗೂ ಮುಂಭಾಗದ ಹೆದ್ದಾರಿ ಕಸವನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ ಕಾಲೇಜಿನ ಐಕ್ಯೂಎಸಿ ಸಂಯೋಜಕ ಎಲ್. ಆರ್. ರಾಘವೇಂದ್ರ, ಎನ್.ಎಸ್.ಎಸ್ ಯೋಜನಾಧಿಕಾರಿ ಬಿ.ಬಿ. ಸುನಿಲ್ ಕುಮಾರ್, ಎನ್.ಸಿ.ಸಿ ಅಧಿಕಾರಿ ಲೆ.ಬಿ.ಬಿ.ಬೋಜಮ್ಮ, ಉಪನ್ಯಾಸಕರಾದ ಅಕ್ಷಿತಾ ನಾಯ್ಕ, ಮಾಣಿಕ್ಯ , ಪವಿತ್ರಾ , ಬಾಬು , ದಮಯಂತಿ, ಅನುಪಮಾ ಆಡಳಿತಾತ್ಮಕ ಸಿಬ್ಬಂದಿ ಸೋಮನಾಥ್, ಹರೀಶ್, ಸಿಂಧೂ, ದಿನೇಶ್, ಶಶಿಕಲಾ, ಜಯಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net