

ಕುಶಾಲನಗರ
ಗ್ರಾಮ ಪಂಚಾಯತಿ ಆರೋಗ್ಯಕರವಾಗಿ ಮತ್ತು ಮಾದರಿಯಾಗಿ ಅಭಿವೃದ್ಧಿ ಹೊಂದಲು ಸ್ವಚ್ಛತಾಗಾರರ ಪಾತ್ರವೇ ಅತ್ಯಂತ ಪ್ರಮುಖ ಎಂದು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಸಚಿನ್ ಹೇಳಿದರು. ಗುಡ್ಡೆಹೊಸೂರುವಿನ ಮಹಾತ್ಮ ಗಾಂಧಿ ಗ್ರಾಮ ಪಂಚಾಯತಿ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಹೀ ಸೇವಾ ಅಭಿಯಾನದ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮುಂಜಾನೆಯಿAದಲೇ ಊರನ್ನು ಸ್ವಚ್ಛವಾಗಿರಿಸುವ ಸ್ವಚ್ಛತಾ ಕಾರ್ಯಕರ್ತರೇ ಗ್ರಾಮದ ನೈಜ ಬೆನ್ನೆಲುಬು. ಕಳೆದ 15 ದಿನಗಳಿಂದ ಮತದಾರರ ತೀವ್ರ ಪಟ್ಟಿ ಪರಿಷ್ಕರಣೆ ನಿಮಿತ್ತ ಈ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಗುಡ್ಡೆಹೊಸೂರು ಗ್ರಾಮ ಪಂಚಾಯತಿಯ ಕಾರ್ಯವೈಖರಿ ಮತ್ತು ಸಿಬ್ಬಂದಿಯ ಜವಾಬ್ದಾರಿಯುತ ಕೆಲಸದ ಬಗ್ಗೆ ತಮಗೆ ವಿಶೇಷ ಗೌರವ ಮತ್ತು ಅಭಿಮಾನ ಮೂಡಿದೆ ಎಂದು ಶ್ಲಾಘಿಸಿದರು.
ತೊಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜು ಮಾತನಾಡಿ, ಸ್ವಚ್ಛತೆ ಕೇವಲ ಸರ್ಕಾರ ಅಥವಾ ಸ್ವಚ್ಛತಾಗಾರರ ಜವಾಬ್ದಾರಿಯಲ್ಲ. ಪ್ರತಿಯೊಬ್ಬ ನಾಗರಿಕನೂ ತನ್ನ ಸುತ್ತಮುತ್ತಲಿನ ಪರಿಸರವನ್ನು ಹಸಿರು ಹಾಗೂ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಗ್ರಾಮದ ಆರೋಗ್ಯ ಕಾಪಾಡಲು ಕೈಜೋಡಿಸಬೇಕು ಎಂದು ಹೇಳಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಮ್.ಆರ್. ಸುಮೇಶ್ ಮಾತನಾಡಿ, ಗುಡ್ಡೆಹೊಸೂರು ಗ್ರಾ.ಪಂ.ನಲ್ಲಿ ಸ್ವಚ್ಛತಾ ಹೀ ಸೇವಾ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದ್ದು, ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ಮಾಣ ಹಾಗೂ ಹಸಿ-ಒಣ ಕಸ ವಿಂಗಡಣೆಗೆ ಗ್ರಾಮಸ್ಥರು ಪೂರ್ಣ ಸಹಕಾರ ನೀಡಬೇಕಿದೆ ಎಂದರು.
ಪಂಚಾಯತಿ ಡಿ.ಇ.ಒ. ಸುಮಾ, ಕೌಶಿಕ್, ಸಮಂತ್ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಊರಿನ ಪ್ರಮುಖರು ಇದ್ದರು.
ಗ್ರಾಮದ ನೈರ್ಮಲ್ಯಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ನಿಷ್ಠಾವಂತ ಸ್ವಚ್ಛತಾಗಾರರಾದ ವಿಜಯ್, ನಂಜುAಡ ಹಾಗೂ ರಮೇಶ್ ಅವರನ್ನು ಕಾರ್ಯಕ್ರಮದಲ್ಲಿ ಗಣ್ಯರು ಹಾರ ಹಾಕಿ, ಶಾಲು ಹೊದಿಸಿ, ಹಣ್ಣಿನ ಬುಟ್ಟಿಗಳನ್ನು ನೀಡಿ ಆತ್ಮೀಯವಾಗಿ ಗೌರವಿಸಿದರು.