ಕಣಿವೆ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

ಕಣಿವೆ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ
ಗಾಂಧಿ ಜಯಂತಿ ಹಾಗೂ ವಿಖಾಯ ದಿನದ ಪ್ರಯುಕ್ತ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ಆಕ್ಟಿವ್ ವಿಂಗ್ ಕೂಡಿಗೆ ಘಟಕದ ವತಿಯಿಂದ ಕಣಿವೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರಮದಾನ ನಡೆಸಲಾಯಿತು.
Published on: 

ಕುಶಾಲನಗರ

ಗಾಂಧಿ ಜಯಂತಿ ಹಾಗೂ ವಿಖಾಯ ದಿನದ ಪ್ರಯುಕ್ತ ಎಸ್.ಕೆ.ಎಸ್.ಎಸ್.ಎಫ್ ವಿಖಾಯ ಆಕ್ಟಿವ್ ವಿಂಗ್ ಕೂಡಿಗೆ ಘಟಕದ ವತಿಯಿಂದ ಕಣಿವೆ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶುಕ್ರವಾರ ಸ್ವಚ್ಛತಾ ಅಭಿಯಾನ ಹಾಗೂ ಶ್ರಮದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಾಲಾ ಮಕ್ಕಳಿಗೆ ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಕಲಿಕಾ ವಾತಾವರಣವನ್ನು ನಿರ್ಮಿಸುವ ಸದುದ್ದೇಶದಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಸಕ್ರಿಯವಾಗಿ ಭಾಗವಹಿಸಿದರು. ಶಾಲೆಯ ಆವರಣ ಹಾಗೂ ಮುಂಭಾಗದ ರಸ್ತೆ ಬದಿಯಲ್ಲಿದ್ದ ಕಾಡು ಗಿಡಗಂಟಿಗಳನ್ನು ಕಡಿದು ತೆರವುಗೊಳಿಸಿದ ಕಾರ್ಯಕರ್ತರು, ಪ್ಲಾಸ್ಟಿಕ್ ಸೇರಿದಂತೆ ಇತರ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೂಡಿಗೆ ಶಾಖೆಯ ಕೌನ್ಸಿಲರ್ ಎ. ಮಹಮ್ಮದ್, ಸರ್ಕಾರಿ ಶಾಲೆಯ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಅಶುಚಿತ್ವ ಉಂಟಾಗಿತ್ತು. ನಮ್ಮ ಸಂಘಟನೆಯ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಶ್ರಮದಾನದ ಮೂಲಕ ಶಾಲಾ ಆವರಣವನ್ನು ಸ್ವಚ್ಛಗೊಳಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಜನರಲ್ಲಿ ಈ ಕುರಿತು ಅರಿವು ಮೂಡಿಸುವುದು ನಮ್ಮ ಅಭಿಯಾನದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.

ಕೂಡಿಗೆ ಶಾಖೆಯ ಅಧ್ಯಕ್ಷ ಶಂಸುದ್ದೀನ್, ಕಾರ್ಯದರ್ಶಿ ಶಾಫಿ, ಕೋಶಾಧಿಕಾರಿ ರಫೀಕ್, ಉಪಾಧ್ಯಕ್ಷರಾದ ರಿಯಾಜ್, ಹಾಗೂ ಕಾರ್ಯಕರ್ತರಾದ ನಾಸಿರ್ ದಾರಿಮಿ, ಕಲಂದರ್, ಹಸೈನಾರ್, ಮುಸ್ತಫ, ರಾಯಿಫ್, ಹಮೀದ್, ರಫೀಕ್, ಅದ್ದು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net