

ಸಿದ್ದಾಪುರ: ವಿರಾಜಪೇಟೆ ತಾಲೂಕು ಕಕ್ಕಬೆ ಕೇಂದ್ರ ವಿದ್ಯಾಸಂಸ್ಥೆಯ ಶಾಲಾ ರಸ್ತೆಯ ಅಭಿವೃದ್ಧಿ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಅನುದಾನ ಬಿಡುಗಡೆ ಮಾಡುವಂತೆ ಕೋರಿ ಸಂಸ್ಥೆಯ ಆಡಳಿತ ಮಂಡಳಿಯಿಂದ ಶಾಸಕ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಉಪಾಧ್ಯಕ್ಷ ಸುರೇಶ್ ಬೆಳ್ಳಿಯಪ್ಪ, ಕರೆಸ್ಪಾಂಡೆಂಟ್ ರೇಖಾ ಉಲ್ಲಾಸ್, ಕಾರ್ಯದರ್ಶಿ ಬಬಿತಾ ದೇವಯ್ಯ, ದಾನಿ ಕಿಶನ್ ಪೂಣಚ್ಚ, ನಿರ್ದೇಶಕ ಸಚಿನ್ ಅಯ್ಯಪ್ಪ, ಎ. ಉತ್ತಪ್ಪ, ಅಬ್ದುಲ್ ರೆಹಮಾನ್, ಡಿ. ದೇವಯ್ಯ, ಗೌತಮ್ ಚೆಂಗಪ್ಪ, ಕಿರಣ್ ಮಾದಪ್ಪ, ದೇವಯ್ಯ, ಮುಖ್ಯಶಿಕ್ಷಕ ಪ್ರವೀಣ್ ಕಾರ್ಯಪ್ಪ ಇತರರು ಇದ್ದರು.
ಚಿತ್ರ 05ಎಸ್ ಡಿ ಪಿ 04:-