

ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿರುವ ಇಮ್ಯಾನ್‌ವೆಲ್ ದೇವಾಲಯದಲ್ಲಿ ವಾರ್ಷಿಕ ಬೆಳೆ ಹಬ್ಬ ಭಾನುವಾರ ಶ್ರದ್ಧಾ, ಭಕ್ತಿಯಿಂದ ನೆರವೇರಿತು.
ದೇವಾಲಯ ಹಾಗೂ ಆವರಣವನ್ನು ಕಬ್ಬು, ಭತ್ತದ ಪೈರು, ಹೂವು-ಹಣ್ಣುಗಳಿಂದ ಸಿಂಗರಿಸಲಾಗಿತ್ತು. ಸುಂಟಿಕೊಪ್ಪ ಸಭಾಪಾಲಕರಾದ ಜೈಸನ್‌ಗೌಡರ್ ಆಶೀರ್ವಚನ ನೀಡಿದರು.
ಮಂಗಳೂರು ಕೃಷ್ಣಾಪುರದ ಸಿಎಸ್‌ಐ ಕಾರುಣ್ಯ ದೇವಾಲಯದ ಸ್ಟೀವನ್ ಸರ್ವೋತ್ತಮ್ ಮಾತನಾಡಿ, ನಮ್ಮ ದೇವಾಲಯಗಳ ವಾರ್ಷಿಕ ವಿಧಿವಿಧಾನಗಳಲ್ಲಿ ಬೆಳೆ ಹಬ್ಬವು ಪ್ರಮುಖವಾಗಿದೆ. ಬೈಬಲ್ ಪ್ರಕಾರ ಭಕ್ತರು ತಾವು ಬೆಳೆದ ಬೆಳೆಗಳನ್ನು ಮೊದಲ ಕಾಣಿಕೆಯಾಗಿ ದೇವರಿಗೆ ಸರ್ಮಪಿಸುವುದು ಒಂದು ಪದ್ಧತಿ ಎಂದರು.
ಭಕ್ತರು ದೇವಾಲಯಕ್ಕೆ ಕಾಣಿಕೆ ನೀಡಿದ ವಸ್ತುಗಳನ್ನು ಹರಾಜು ಮಾಡಲಾಯಿತು. ಸಾಮೂಹಿಕ ಭೋಜನ, ಆಟೋಟ ಸ್ಪರ್ಧೆಗಳು ನಡೆದವು. ಸ್ಟೀವನ್ ಸರ್ವೋತ್ತಮ್, ಸಭಾಪಾಲಕ ಮಧುಕಿರಣ್ ಇದ್ದರು.