

ಶನಿವಾರಸಂತೆ: ಅರೆಭಾಷೆ ಸಾಹಿತ್ಯ, ಸಂಸ್ಕೃತಿ ಬೆಳೆಸಲು ಅರೆಭಾಷೆ ಗೌಡ ಸಮಾಜದ ಸದಸ್ಯರು ಕೈಜೋಡಿಸಬೇಕು ಎಂದು ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಮನವಿ ಮಾಡಿದರು.
ಸಂಗಯ್ಯನಪುರ ಗ್ರಾಮದಲ್ಲಿರುವ ಅರೆಭಾಷೆ ಗೌಡ ಸಮಾಜದ ಸಮುದಾಯ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಮಾಜದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಅರೆಭಾಷೆ ಸಾಹಿತ್ಯ, ಸಂಸ್ಕೃತಿ, ಸಮುದಾಯ ಬೆಳೆಸಲು ಸಮಾಜವನ್ನು ಹುಟ್ಟು ಹಾಕಿರುವ ನಿಟ್ಟಿನಲ್ಲಿ ಆಲೂರು ಸಿದ್ದಾಪುರ ಅರೆಭಾಷೆ ಗೌಡ ಸಮಾಜದ ವ್ಯಾಪ್ತಿಗೆ 31 ಗ್ರಾಮಗಳು ಒಳಪಟ್ಟಿವೆ. ನಮ್ಮ ಸಮಾಜದಲ್ಲಿ 700 ಸದಸ್ಯರಿದ್ದಾರೆ. ಸದಸ್ಯರು ಮತ್ತು ಸಮುದಾಯದವರು ಸಮಾಜದ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸಮಾಜದ ಪ್ರಧಾನ ಕಾರ್ಯದರ್ಶಿ ಕುಯುಮುಡಿ ಜಯಕುಮಾರ್, ಸಮಾಜದ ಉಪಾಧ್ಯಕ್ಷ ಭಟ್ಯನ ಈರಪ್ಪ, ಪ್ರಧಾನ ಕಾರ್ಯದರ್ಶಿ ಕುಯುಮುಡಿ ಜಯಕುಮಾರ್, ಖಜಾಂಜಿ ಅಜಿರಂಗಲ ರಾಮಣ್ಣ, ಸಹ ಕಾರ್ಯದರ್ಶಿ ಪರ್ಲಕೋಟಿ ಶೈಲಾ ಸತೀಶ್, ಸದಸ್ಯರು ಹಾಜರಿದ್ದರು.