ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಾಂತ್ವನ

ಮಾನವೀಯ ಸ್ಪಂದನೆ
spandane
ಉದ್ಯಮಿ, ಸಮಾಜ ಸೇವಕ ಹಾಗೂ ಬಿಜೆಪಿ ಯುವ ನಾಯಕ ಪ್ರಸನ್ನ ಎಡಿಕೇರಿ ಸಾಂತ್ವನnapoklu
Published on: 

ನಾಪೋಕ್ಲು: ರಾಷ್ಟ್ರೀಯ ಹೆದ್ದಾರಿ 275ರ ಆನೆಕಾಡು ಬಳಿ ಇತ್ತೀಚೆಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ನಿವಾಸಕ್ಕೆ ಬಿಜೆಪಿ ಮುಖಂಡ ಪ್ರಸನ್ನ ಎಡಿಕೇರಿ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮೃತರ ಮನೆಗಳಿಗೆ ಖುದ್ದಾಗಿ ತೆರಳಿದ ಅವರು, ಶೋಕಾರ್ತ ಕುಟುಂಬಸ್ಥರ ನೋವನ್ನು ಆಲಿಸಿ, ಈ ಕಠಿಣ ಹಾಗೂ ದುಃಖದ ಸಮಯದಲ್ಲಿ ಧೈರ್ಯ ತಳೆಯುವಂತೆ ಆತ್ಮಸ್ಥೈರ್ಯ ತುಂಬಿದರು.

ಮಾನವೀಯ ಸ್ಪಂದನೆ: ಈ ಸಂದರ್ಭದಲ್ಲಿ ಮಾತನಾಡಿದ ಪ್ರಸನ್ನ ಎಡಿಕೇರಿ, ಅಪಘಾತದಲ್ಲಿ ಅಮೂಲ್ಯವಾದ ಜೀವಗಳು ಬಲಿಯಾಗಿರುವುದು ಅತ್ಯಂತ ವಿಷಾದಕರ ಹಾಗೂ ನೋವಿನ ಸಂಗತಿ. ಮೃತರ ಕುಟುಂಬಗಳ ಈ ದುಃಖದಲ್ಲಿ ನಾನು ಕೂಡ ಭಾಗಿಯಾಗಿದ್ದು, ಅವರ ನೋವನ್ನು ಹಂಚಿಕೊಳ್ಳುವ ಸಣ್ಣ ಪ್ರಯತ್ನ ಮಾಡಿದ್ದೇನೆ. ಈ ಭಾರೀ ಸಂಕಷ್ಟವನ್ನು ಎದುರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬಸ್ಥರಿಗೆ ನೀಡಲಿ, ಎಂದು ಆಶಿಸಿದರು.

ಇದೇ ವೇಳೆ, ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಶೀಘ್ರವಾಗಿ ಚೇತರಿಸಿಕೊಂಡು ಸಂಪೂರ್ಣ ಆರೋಗ್ಯದಿಂದ ಮನೆಗೆ ಮರಳಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥಿಸಿದರು.

ದುರಂತದ ವೇಳೆಯಲ್ಲಿ ಶೋಕಾರ್ತ ಕುಟುಂಬಗಳ ಬಳಿಗೆ ಧಾವಿಸಿ, ಅವರ ಕಷ್ಟಕ್ಕೆ ಸ್ಪಂದಿಸಿದ ಪ್ರಸನ್ನ ಎಡಿಕೇರಿ ಅವರ ಈ ಮಾನವೀಯ ಹಾಗೂ ಸರಳ ನಡೆಗೆ ಸ್ಥಳೀಯ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net