ಅಕ್ಷರ ದಾಸೋಹ ಕೊಠಡಿಗೆ ಕಾಯಕಲ್ಪ

ಅಕ್ಷರ ದಾಸೋಹ ಕೊಠಡಿಗೆ ಕಾಯಕಲ್ಪ
ಶಿಥಿಲಾವಸ್ಥೆಯಲ್ಲಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಕ್ಷರ ದಾಸೋಹ ಅಡುಗೆ ಮನೆಯನ್ನು ಶ್ರಮದಾನದ ಮೂಲಕ ದುರಸ್ತಿ ಮಾಡಲಾಯಿತು.
Published on: 

ಮಡಿಕೇರಿ

ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿದ್ದ ಶಿಥಿಲಾವಸ್ಥೆಯ ಅಕ್ಷರ ದಾಸೋಹ ಅಡುಗೆ ಮನೆಗೆ ನೇತಾಜಿ ಯುವಕ ಹಾಗೂ ಯುವತಿ ಮಂಡಳಿ ವತಿಯಿಂದ ಮಂಗಳವಾರ ಶ್ರಮದಾನದ ಮೂಲಕ ಕಾಯಕಲ್ಪ ನೀಡಲಾಯಿತು.

ಶಾಲೆಯ ಮಕ್ಕಳಿಗೆ ಅಕ್ಷರ ದಾಸೋಹದ ಅಡುಗೆ ವ್ಯವಸ್ಥೆಗಾಗಿ ಈ ಕಟ್ಟಡದ ಅಗತ್ಯವಿರುವುದನ್ನು ಮನಗಂಡ ತಾಳತ್ತಮನೆಯ ನೇತಾಜಿ ಯುವಕ ಹಾಗೂ ಯುವತಿ ಮಂಡಳಿಯ ಸದಸ್ಯರು ಕಟ್ಟಡವನ್ನು ಕೆಡವುದರ ಬದಲು ಅಗತ್ಯ ದುರಸ್ತಿ ಕಾರ್ಯ ಕೈಗೊಂಡು ಉಳಿಸುವ ನಿರ್ಧಾರ ಕೈಗೊಂಡರು.

ಅದರAತೆ ಮಂಡಳಿಯ ಸದಸ್ಯರು ಶ್ರಮದಾನ ನಡೆಸಿ ಅಡುಗೆ ಮನೆಯ ಶಿಥಿಲಗೊಂಡ ಭಾಗಗಳನ್ನು ದುರಸ್ತಿ ಮಾಡಿದರು. ಇದರಿಂದ ಶಾಲೆಯಲ್ಲಿ ಅಕ್ಷರ ದಾಸೋಹದ ಅಡುಗೆ ವ್ಯವಸ್ಥೆಯನ್ನು ಮುಂದುವರಿಸಲು ಅನುಕೂಲವಾಗಿದ್ದು, ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ.

ನೇತಾಜಿ ಯುವಕ ಹಾಗೂ ಯುವತಿ ಮಂಡಳಿ ವತಿಯಿಂದ ಶ್ರಮದಾನದ ಮೂಲಕ ಕೈಗೊಂಡ ಕಾರ್ಯಕ್ಕೆ ಶಾಲಾ ಶಿಕ್ಷಕರು, ಪೋಷಕರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net