ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ಯೋಗಾಭ್ಯಾಸ

 ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್‌ಎಸ್‌ಎಸ್ ಘಟಕದ ವತಿಯಿಂದ ಆಯೋಜಿಸಲಾಗಿರುವ ವಿಶೇಷ ವಾರ್ಷಿಕ ಶಿಬಿರದದಲ್ಲಿ ಪಾಲ್ಗೊಂಡಿರುವ ಶಿಬಿರಾರ್ಥಿಗಳು. ಚೊಟ್ಟೋಳಿಯಮ್ಮಂಡ ಅಮೃತ್ ರಾಕೇಶ್, ಬಾನಂಗಡ ಅರುಣ, ಮಹಾಬಲ, ಕಳ್ಳೇಂಗಡ ಸುರೇಂದ್ರ, ಬಯವಂಡ ನವೀನ್, ಮಂಡAಗಡ ಯೋಗೇಶ್, ಎಂ. ಎ. ಕುಶಾಲಪ್ಪ, ಪೂಜಾ ಶರಣು ಇದ್ದರು.

Published on
ಮಡಿಕೇರಿ:
ಪೊನ್ನಂಪೇಟೆ ತಾಲೂಕು ಹುದಿಕೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್‌ಎಸ್‌ಎಸ್ ಘಟಕದ ವತಿಯಿಂದ ಆಯೋಜಿಸಲಾಗಿರುವ ವಿಶೇಷ ವಾರ್ಷಿಕ ಶಿಬಿರದ ಎರಡನೇ ದಿನವಾದ ಭಾನುವಾರ ಅಂತಾರಾಷ್ಟ್ರೀಯ ಯೋಗ ಪಟು ಚೊಟ್ಟೋಳಿಯಮ್ಮಂಡ ಅಮೃತ್ ರಾಕೇಶ್ ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಗೆ ಯೋಗಭ್ಯಾಸ ಮಾಡಿಸಿದರು.
ನಂತರ ಶೈಕ್ಷಣಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಪೊನ್ನಂಪೇಟೆ ಹಾಗೂ ವೀರಾಜಪೇಟೆ ತಾಲೂಕು ಎಡಿಎಲ್‌ಆರ್ ಬಾನಂಗಡ ಅರುಣ ವಿದ್ಯಾರ್ಥಿಗಳಿಗೆ ಸರ್ವೆ ಇಲಾಖೆಯ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಸಮಾಜ ಸೇವಕರಾದ ಬಯವಂಡ ಮಹಾಬಲ, ಕಾಫಿ ಬೆಳೆಗಾರ ಕಳ್ಳೇಂಗಡ ಸುರೇಂದ್ರ, ಬಯವಂಡ ನವೀನ್, ಮಂಡAಗಡ ಯೋಗೇಶ್, ಎನ್‌ಎಸ್‌ಎಸ್ ಅಧಿಕಾರಿಗಳಾದ ಎಂ. ಎ. ಕುಶಾಲಪ್ಪ, ಪೂಜಾ ಶರಣು ಇದ್ದರು. ಸಂಜೆ ಗೋಣಿಕೊಪ್ಪಲು ಕಾವೇರಿ ಕಲಾಸಿರಿ ತಂಡ ಹಾಗೂ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net