ಯೋಗ ಒಂದು ಧರ್ಮಕ್ಕೆ ಸೀಮಿತ ಅಲ್ಲ

ಮಡಿಕೇರಿಯ ಯೋಗ ಭಾರತಿ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು. ಜಿ. ಚಿದ್ವಿಲಾಸ್, ಕೆ.ಎಸ್. ದೇವಯ್ಯ, ಡಾ. ಎಂ. ಜಿ. ಪಾಟ್ಕರ್, ಡಾ. ಶೈಲಜಾ, ಜಯಲಕ್ಷಿö್ಮÃ ಪಾಟ್ಕರ್ ಇದ್ದರು.
ಮಡಿಕೇರಿಯ ಯೋಗ ಭಾರತಿ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಗಣ್ಯರು. ಜಿ. ಚಿದ್ವಿಲಾಸ್, ಕೆ.ಎಸ್. ದೇವಯ್ಯ, ಡಾ. ಎಂ. ಜಿ. ಪಾಟ್ಕರ್, ಡಾ. ಶೈಲಜಾ, ಜಯಲಕ್ಷಿö್ಮÃ ಪಾಟ್ಕರ್ ಇದ್ದರು.
Published on
ಮಡಿಕೇರಿ:
ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲದ ಯೋಗ ಮನುಷ್ಯನ ಶಾರೀರಿಕ ಮತ್ತು ಮಾನಸಿಕ ಸಮತೋಲನಕ್ಕೆ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಹಿರಿಯ ಪತ್ರಕರ್ತ ಜಿ. ಚಿದ್ವಿಲಾಸ್ ಹೇಳಿದರು. ಇಲ್ಲಿನ ಖಾಸಗಿ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ಯೋಗ ಭಾರತಿ ಸಂಸ್ಥೆಯ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಯೋಗ ವಿದ್ಯೆಯನ್ನು ಶಾಲಾ-ಕಾಲೇಜುಗಳಲ್ಲಿ ಕಡ್ಡಾಯವಾಗಿ ಕಲಿಸುವಂತಾಗಬೇಕು. ಯೋಗಾಭ್ಯಾಸದಿಂದ ಒಬ್ಬ ವ್ಯಕ್ತಿ ಶಾರೀರಿಕ ದೃಢತೆ ಮತ್ತು ಮಾನಸಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುತ್ತಾನೆ. ನಿರಂತರ ಯೋಗ ಪ್ರಕ್ರಿಯೆಯಿಂದ ವ್ಯಕ್ತಿಯಲ್ಲಿ ತಾಳ್ಮೆ, ಸಹನೆ, ಸಹಾನುಭೂತಿ, ಪ್ರೀತಿ, ವಾತ್ಸಲ್ಯ ಸಹಜವಾಗಿಯೇ ಮೈಗೂಡಿಕೊಳ್ಳುವುದರಿಂದ ಸಮಾಜದ ಆರೋಗ್ಯವೂ ಬಲಗೊಳ್ಳುತ್ತದೆ.
ಭಾರತೀಯ ಪ್ರಾಚೀನ ಶಿಕ್ಷಣದಲ್ಲಿ ಒಂದಾದ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಇವುಗಳು ಒಂದು ಹಂತದಲ್ಲಿ ಮಡಿವಂತಿಕೆಯಿAದ ಕೂಡಿದ್ದು ಇತ್ತೀಚಿನ ವರ್ಷಗಳಲ್ಲಿ ಇಡೀ ವಿಶ್ವವೇ ಅದನ್ನು ಸ್ವೀಕರಿಸಿ ಜೂನ್ 21 ಅನ್ನು ವಿಶ್ವ ಯೋಗ ದಿನ ಎಂದು ಘೋಷಿಸಿರುವುದರ ಹಿಂದೆ ಭಾರತದ ಪ್ರಾಚೀನ ಪದ್ಧತಿ ಮತ್ತು ಪರಂಪರೆಗಳ ಭವ್ಯತೆಯನ್ನು ಕಾಣಬಹುದು.
ಬದಲಾದ ಜೀವನ ಶೈಲಿಯಲ್ಲಿ ಯುವ ಪೀಳಿಗೆಗೆ ಯೋಗ, ಧ್ಯಾನ ಮತ್ತು ಪ್ರಾಣಯಾಮದಂತಹ ನಿತ್ಯ ಅಭ್ಯಾಸ ಅತ್ಯಂತ ಅವಶ್ಯಕ ಎಂದರು.
ಭಾರತೀಯ ವಿದ್ಯಾ ಭವನದ ಕೊಡಗು ಘಟಕದ ಅಧ್ಯಕ್ಷ ಕೆ.ಎಸ್. ದೇವಯ್ಯ ಮಾತನಾಡಿ ಭಾರತದ ಯೋಗ ವಿದ್ಯೆಯನ್ನು ವಿದೇಶಿಯರೂ ಕಲಿತು ಇಂದು ಅವರುಗಳೇ ಯೋಗ ಶಿಕ್ಷಕರಾಗಿ ಸಹಸ್ರಾರು ಮಂದಿಗೆ ಯೋಗವನ್ನು ಬೋಧಿಸುತ್ತಿದ್ದಾರೆ ಎಂದು ಹೇಳಿದರು.
ಯೋಗ ಭಾರತಿ ಸಂಸ್ಥೆಯ ಪೋಷಕ ಡಾ. ಎಂ. ಜಿ. ಪಾಟ್ಕರ್ ಮಾತನಾಡಿ ನಿರಂತರ ಯೋಗ ಅಭ್ಯಾಸ ಮಾಡಬೇಕು. ಮಾನವ ಪ್ರಕೃತಿಯ ಅಂಶವಾಗಿದ್ದು ಪ್ರಕೃತಿ ಮತ್ತು ಪರಮಾತ್ಮನ ಜೋಡಣೆಗೆ ಯೋಗಾಭ್ಯಾಸ ಅತ್ಯಂತ ಸಹಕಾರಿ. ಭಾರತದ ಕೊಡುಗೆಯಾದ ಯೋಗ ವಿದ್ಯೆ ಮನುಷ್ಯನ ಶಾರೀರಿಕ ಮತ್ತು ಆಂತರಿಕ ಬೆಳವಣಿಗೆಗೆ ಅತ್ಯಂತ ಸಹಕಾರಿ ಎಂದರು.
ಯೋಗದಿಂದ ಉತ್ತಮ ಆರೋಗ್ಯ ಪಡೆಯುವ ಬಗ್ಗೆ ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ. ಅರುಣ್ ಮಾಹಿತಿ ನೀಡಿದರು.
ಮಡಿಕೇರಿಯಲ್ಲಿ ಯೋಗಭಾರತಿ ಸಂಸ್ಥೆ ಸ್ಫಾಪಿಸಿ 25 ವರ್ಷಗಳ ಕಾಲ ನಿರಂತರ ಯೋಗಶಿಕ್ಷಣ ನೀಡುತ್ತಾ ಬಂದಿರುವ ಯೋಗ ಭಾರತಿ ಸಂಸ್ಥೆಯ ಪ್ರಾಚಾರ್ಯ ಕೆ.ಕೆ. ಮಹೇಶ್ ಕುಮಾರ್ ಸಂಸ್ಥೆ 25 ವರ್ಷಗಳನ್ನು ಸವೆಸಿದ ಕುರಿತು ಮಾತನಾಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಶೈಲಜಾ ಮಾತನಾಡಿದರು.
ಯೋಗ ಭಾರತಿ ಸಂಸ್ಥೆಯ ಶಿಬಿರಾರ್ಥಿ ಜಿ.ಆರ್. ರವಿಶಂಕರ್, ಜ್ಯೋತಿ, ಸವಿತಾ, ಜಯಲಕ್ಷಿö್ಮÃ ಪಾಟ್ಕರ್ ಇದ್ದರು. ಸಂಸ್ಥೆಯ ಶಿಬಿರಾರ್ಥಿಗಳು ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನದ ಮೂಲಕ ಸಭಿಕರ ಮೆಚ್ಚುಗೆ ಪಡೆದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net