ಇನ್ನು ಪೇರೂರು ಮತ್ತು ಕುಂಜಿಲ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಂಜಿಲ ತಂಡ 4-0 ಅಂತರದಿಂದ ಪೇರೂರು ತಂಡದ ವಿರುದ್ಧ ಜಯ ಸಾಧಿಸಿತು. ಕುಂಜಿಲ ತಂಡದ ಆಟಗಾರರಾದ ನಾಚಪ್ಪ, ಕಾರ್ಯಪ್ಪ, ಕಿರಣ್ ಮತ್ತು ಡಿವಿನ್ ತಲಾ ಒಂದು ಗೋಲು ಗಳಿಸಿದರು. ಬಲ್ಲಮಾವಟಿ ವೈಟ್ ಮತ್ತು ನಾಪೋಕ್ಲು (ಬ್ಲೂ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪೋಕ್ಲು ಎ ತಂಡ ಭರ್ಜರಿ ಏಳು ಗೋಲುಗಳ ಜಯ ಸಾಧಿಸಿತು. ಕಳೆದ ವರ್ಷದ ಚಾಂಪಿಯನ್ ಬಲ್ಲಮಾವಟಿ ವೈಟ್ ತಂಡ ಯಾವುದೇ ಗೋಲು ಗಳಿಸಲು ಶಕ್ತವಾಗಲಿಲ್ಲ. ನಾಪೋಕ್ಲು ಪರವಾಗಿ ಆಕಾಶ್, ಪುನೀತ್, ನಾಚಪ್ಪ, ಅವನಿಶ್, ಕಾಳಪ್ಪ, ಸುಬ್ರಮಣಿ, ಮತ್ತು ನಿರುಪ್ ತಲಾ ಒಂದೊಂದು ಗೋಲು ಪೇರಿಸಿದರು. ಬೇತು ಮತ್ತು ನಾಪೋಕ್ಲು ಬ್ಲೂ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪೋಕ್ಲು ಬ್ಲೂ ತಂಡ ಬೇತು ತಂಡದ ವಿರುದ್ಧ 3 -2 ಅಂತರದಿಂದ ಗೆಲುವು ಸಾಧಿಸಿತು.