ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ. ಕೆ.ಬಿ. ಸೂರ್ಯಕುಮಾರ್ ಅವರಿಗೆ ವೈದ್ಯ ಕಂಡ ವಿಸ್ಮಯ ಕೃತಿಗಾಗಿ ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಕೇಶವ ಕಾಮತ್, ಟಿ.ಪಿ. ರಮೇಶ್, ಜಿ. ರಾಜೇಂದ್ರ, ಹೆಚ್.ಟಿ. ಅನಿಲ್ ಮತ್ತಿತರರು ಇದ್ದರು.
Published on:
Copied
Follow Us
ಮಡಿಕೇರಿ:
ಬರಹಗಾರರನ್ನು ಪ್ರೋತ್ಸಾಹಿಸುವ ಕಾರ್ಯ ನಿರಂತರವಾಗಿ ಕೊಡಗಿನಲ್ಲಿ ನಡೆಯುವ ಮೂಲಕ ಬರಹಗಾರರು ಎಲ್ಲೆಡೆ ಗುರುತಿಸಿಕೊಳ್ಳುವಂತಾಗಬೇಕು ಎಂದು ಹಿರಿಯ ಸಾಹಿತಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಹೇಳಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಗುರುವಾರ ಸಂಜೆ ಇಲ್ಲಿ ಆಯೋಜಿಸಿದ್ದ ಶಕ್ತಿ ಪತ್ರಿಕೆಯ ಸ್ಥಾಪಕ ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಕೆ.ಬಿ. ಸೂರ್ಯಕುಮಾರ್ ಅವರಿಗೆ ವೈದ್ಯ ಕಂಡ ವಿಸ್ಮಯ ಕೃತಿಗಾಗಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಕೃತಿ, ಲೇಖನ ರಚನೆಗೆ ವಯಸ್ಸಿನ ನಿರ್ಬಂಧÀ ಇಲ್ಲ. ಯಾವುದೇ ವಯಸ್ಸಿನಲ್ಲಿಯೂ ಉತ್ತಮ ಲೇಖನ, ಕೃತಿ ರಚನೆ ಸಾಧ್ಯವಿದೆ. ಸೂರ್ಯಕುಮಾರ್ ಅವರೇ ಈ ಮಾತಿಗೆ ಉತ್ತಮ ನಿದರ್ಶನವಾಗಿದ್ದಾರೆ ಎಂದು ಹೇಳಿದರು.
ಹಿರಿಯ ಸಾಹಿತಿ ಬಿ.ಎ. ಷಂಶುದ್ದೀನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಾಟಕ ನಿರ್ದೇಶಕರೂ ಕೊಡಗೈ ದಾನಿಗಳೂ ಆಗಿದ್ದ ಗೋಪಾಲಕೃಷ್ಣ ತಮ್ಮ ನೇರ ಹಾಗೂ ನಿಷ್ಠುರ ಬರಹಗಳ ಮೂಲಕ ಕೊಡಗಿನ ಒಳಿತಿಗಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದರು. ವಾರ ಪತ್ರಿಕೆ, ಸಂಜೆ ಪತ್ರಿಕೆ, ಮಾಸ ಪತ್ರಿಕೆಗಳನ್ನೂ ನಡೆಸಿದ್ದರು. ಕೊಡಗಿನ ಜನರಿಗಾಗಿಯೇ ಪತ್ರಿಕೆ ಮುನ್ನಡೆಸಿದ ಪತ್ರಕರ್ತ ಗೋಪಾಲಕೃಷ್ಣ ಅವರ ಬದುಕು ಈಗಿನ ಪತ್ರಕರ್ತರಿಗೆ ಮಾದರಿ ಎಂದು ಹೇಳಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕೊಡಗಿಗೆ ಮಾರಕವಾಗಬಹುದಾಗಿದ್ದ ಕಂಬದ ಕಡ ಯೋಜನೆ ವಿರುದ್ಧದ ಹೋರಾಟದಲ್ಲಿ ಗೋಪಾಲಕೃಷ್ಣ ಮಹತ್ವದ ಪಾತ್ರ ವಹಿಸಿದ್ದರು. ಕೊಡಗಿನ ಪತ್ರಿಕೋದ್ಯಮದಲ್ಲಿ ಬಿಎಸ್‌ಜಿ ಅವರ ವೃತ್ತಿ ಸೇವೆ ಸದಾ ಸ್ಮರಣೀಯ ಎಂದರು.
ಪ್ರಶಸ್ತಿ ಸ್ವೀಕರಿಸಿದ ಲೇಖಕ ಡಾ. ಕೆ.ಬಿ. ಸೂರ್ಯಕುಮಾರ್ ಮಾತನಾಡಿ ಲೇಖಕನಿಗೆ ಓದುಗರೇ ದೇವರು. ಓದುಗರು ಮೆಚ್ಚಿದರೆ ಮಾತ್ರ ಲೇಖಕ ಬೆಳೆಯಲು ಸಾಧ್ಯ ಎಂದು ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಹೆಚ್.ಡಿ ಅನಿಲ್ ಮಾತನಾಡಿ ಪ್ರತೀ ವೈದ್ಯನಲ್ಲಿಯೂ ಬರಹಗಾರನಿದ್ದಾನೆ. ಆದರೆ ವೈದ್ಯರ ಬರಹದ ಓದುಗ ಔಷಧಿ ವ್ಯಾಪಾರಸ್ಥ ಎಂಬ ಮಾತಿದೆ. ವೈದ್ಯನೋರ್ವ ಲೇಖಕನೂ ಆದಾಗ ಅವರೊಳಗಿನ ಅನೇಕ ವಿಚಾರಗಳ ಜ್ಞಾನ ಓದುಗನಿಗೂ ನಿಲುಕುತ್ತದೆ. ಇದಕ್ಕೆ ಡಾ. ಸೂರ್ಯಕುಮಾರ್ ಅವರ ವೈದ್ಯಕೀಯ ಕ್ಷೇತ್ರದ ಕುರಿತ ಕುತೂಹಲಕಾರಿ ಕೃತಿಗಳೇ ಉದಾಹರಣೆ ಎಂದರು.
ಹಿರಿಯ ಪತ್ರಕರ್ತರಾದ ಜಿ. ರಾಜೇಂದ್ರ, ಬಿ.ಜಿ. ಅನಂತಶಯನ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿದರು.
ಗೀತಾ ಸೂರ್ಯಕುಮಾರ್, ರಾಜಲಕ್ಷಿö್ಮÃ ಗೋಪಾಲಕೃಷ್ಣ, ಜಿ. ಚಿದ್ವಿಲಾಸ್, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ಪುದಿಯನೆರವನ ರೇವತಿ ರಮೇಶ್, ಖಜಾಂಚಿ ಎಸ್.ಎಸ್. ಸಂಪತ್ ಕುಮಾರ್, ಉಜ್ವಲ್ ರಂಜಿತ್, ಸುಬ್ರಾಯ ಸಂಪಾಜೆ, ಪ್ರತಿಮಾಹರೀಶ್ ರೈ, ರಜನಿ ಮತ್ತಿರರು ಇದ್ದರು.