ಸೋಮವಾರಪೇಟೆ: ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಆರ್ಟ್ ಆಫ್ ಲಿವಿಂಗ್‌ನ ಸ್ಥಳೀಯ ಘಟಕ ವತಿಯಿಂದ ಬುಧವಾರ ಪಟ್ಟಣದಲ್ಲಿ ವಿಶ್ವ ಧ್ಯಾನ ದಿನ ಆಯೋಜಿಸಲಾಗಿತ್ತು.
ಪಟ್ಟಣದ ಹನಿ ಸೊಸೈಟಿ ಕಟ್ಟಡದಲ್ಲಿರುವ ಆರ್ಟ್ ಆಫ್ ಲಿವಿಂಗ್ ಸೆಂಟರ್‌ನ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯ ಶಿಕ್ಷಕಿ ರಾಗಿಣಿ ಅವರ ನೇತೃತ್ವದಲ್ಲಿ ಧ್ಯಾನ, ಯೋಗಾಸನ, ಪ್ರಾಣಯಾಮ ನಡೆಯಿತು.
ಸಂಸ್ಥೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಧ್ಯಾನದ ಮಹತ್ವದ ಬಗ್ಗೆ ಶಿಕ್ಷಕಿ ರಾಗಿಣಿ ಮಾಹಿತಿ ನೀಡಿದರು.