ವಿಶೇಷ ಆಹ್ವಾನಿತರಾಗಿ ಮಠದ ಮನೆ ಧನಂಜಯ, ಈರಮಂಡ ವಿಜಯ್, ಪದಾಧಿಕಾರಿಗಳಾದ ರೋಸ್ಲಿ, ಪುದಿಯೊಕ್ಕಡ ರಮ್ಯಾ, ಸದಸ್ಯರಾದ ಮಂಜು, ಭಾರತಿ ಬಿ.ಎಲ್, ಸುಮಯ್ಯ ಮುನೀರ್, ರೋಹಿಣಿ, ರಿತ್ವಿಕ ಪೊನ್ನಮ್ಮ ಉಪಸ್ಥಿತರಿದ್ದರು. ಸಹ ಕಾರ್ಯದರ್ಶಿ ಅಪ್ಪಚಂಡ ಸುಚಿತ ಪ್ರಾರ್ಥಿಸಿ, ಕೋಶಾಧಿಕಾರಿ ಮಡೆಯಂಡ ಸೂರಜ್ ಸ್ವಾಗತಿಸಿದರು. ಕಸಾಪ ಮಹಿಳಾ ಪ್ರತಿನಿಧಿ ಮೀನಾಕ್ಷಿ ಕೇಶವ ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ಕೊಂಪುಳಿರ ಮಮತ ವಂದಿಸಿದರು. ನಂತರ ಕಸಾಪ ತಂಡ ನೀನಾಸಂ, ಚರಕ, ಸಾರ ಸಂಸ್ಥೆ, ಬೇಲೂರು, ಹಳೇಬೀಡು, ಕೆಳದಿ ಇಕ್ಕೇರಿಗಳಿಗೆ ಭೇಟಿ ನೀಡಿತು.