ಕಾರ್ಮಿಕರು ಸಂಘಟಿತರಾಗಬೇಕು

ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿನ ಕರ್ನಾಟಕ ಪಾನೀಯ ನಿಗಮದ ಲೋಡರ್ಸ್ ಮತ್ತು ಅನ್ ಲೋಡರ್ಸ್ ಸಂಘದ ಕಚೇರಿಯನ್ನು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಉದ್ಘಾಟಿಸಿದರು. ಕೆ.ಎಸ್. ಮೂರ್ತಿ, ಪಾಂಡುರAಗ, ಮಂಜುನಾಥ್, ಪರಮೇಶ್, ನಂದೀಶ್ ಮತ್ತಿತರರು ಇದ್ದರು.

Published on
ಕುಶಾಲನಗರ:
ಕಾರ್ಮಿಕರು ಸಂಘಟಿತರಾಗುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕೆಂದು ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್ ಹೇಳಿದರು. ಕೂಡ್ಲೂರು ಕೈಗಾರಿಕಾ ಪ್ರದೇಶದಲ್ಲಿನ ಕರ್ನಾಟಕ ಪಾನೀಯ ನಿಗಮದ ಲೋಡರ್ಸ್ ಮತ್ತು ಅನ್ ಲೋಡರ್ಸ್ ಸಂಘದ ಕಚೇರಿಯನ್ನು ಉದ್ಘಾಟಿಸಿ ಈಚೆಗೆ ಮಾತನಾಡಿದರು.
ಕಾರ್ಮಿಕರಲ್ಲಿ ಪರಸ್ಪರ ಸೌಹಾರ್ದ, ಒಗ್ಗಟ್ಟು ನೆಲೆಗೊಳ್ಳುವ ಮೂಲಕ ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಬಲಗೊಳ್ಳಬೇಕಿದೆ. ಕಾರ್ಮಿಕರ ಇಲಾಖೆಯ ವತಿಯಿಂದ ಕಾರ್ಮಿಕ ಕುಟುಂಬದವರಿಗೆ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುವುದಾಗಿ ಶಶಿಧರ್ ಹೇಳಿದರು.
ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್. ಮೂರ್ತಿ ಮಾತನಾಡಿ, ಕಾರ್ಮಿಕರು ವ್ಯಸನಗಳಿಂದ ಮುಕ್ತರಾಗುವ ಮೂಲಕ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಬೇಕು. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕೆಂದರು.
ಕಾರ್ಮಿಕರ ಸಂಘದ ಅಧ್ಯಕ್ಷ ಪಾಂಡುರAಗ, ಉಪಾಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಪರಮೇಶ್, ಖಜಾಂಚಿ ನಂದೀಶ್, ನಿರ್ದೇಶಕರಾದ ಅನಿಲ್, ಚಂದ್ರ, ಸಂತೋಷ್, ಶಶಿಕುಮಾರ್, ವಿ. ಸಂತೋಷ್, ಚಂದ್ರು, ಕೆ.ಡಿ.ಮಹದೇವ, ಕೊಣಸೂರು ಮಹದೇವ, ಗೋವಿಂದರಾಜ, ನಿತ್ಯಾನಂದ, ಪ್ರದೀಪ್, ಸುನಿಲ್, ಸತೀಶ್, ಚೇತನ, ಗಿರಿಯಪ್ಪ, ಅಭಿ, ರಾಮ್, ಜಾನ್ ಮೊದಲಾದವರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net