ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆ

ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಬಾಳೆಯಡ ದಿವ್ಯಾ ಮಂದಪ್ಪ ಅವರನ್ನು ಸನ್ಮಾನಿಸಲಾಯಿತು. ಸವಿತಾ ಭಟ್, ಶ್ಯಾಮಲಾ ದಿನೇಶ್, ವಸುಂಧರಾ ಪ್ರಸನ್ನ, ಆಯಿಷಾ ಹಮೀದ್, ಉಮಾ ಈಶ್ವರ್, ಪ್ರೇಮಾ ರಾಘವಯ್ಯ, ಜಯಶೀಲಾ ಪ್ರಕಾಶ್ ಮತ್ತಿತರರು ಇದ್ದರು.
ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಮಾಜ ಸೇವಕಿ ಬಾಳೆಯಡ ದಿವ್ಯಾ ಮಂದಪ್ಪ ಅವರನ್ನು ಸನ್ಮಾನಿಸಲಾಯಿತು. ಸವಿತಾ ಭಟ್, ಶ್ಯಾಮಲಾ ದಿನೇಶ್, ವಸುಂಧರಾ ಪ್ರಸನ್ನ, ಆಯಿಷಾ ಹಮೀದ್, ಉಮಾ ಈಶ್ವರ್, ಪ್ರೇಮಾ ರಾಘವಯ್ಯ, ಜಯಶೀಲಾ ಪ್ರಕಾಶ್ ಮತ್ತಿತರರು ಇದ್ದರು.
Published on
ಮಡಿಕೇರಿ:
ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಮಹಿಳಾ ದಿನಾಚರಣೆಯನ್ನು ಸಂಘದ ಅಧ್ಯಕ್ಷೆ ಸವಿತಾ ಭಟ್ ಅಧ್ಯಕ್ಷತೆಯಲ್ಲಿ ಮಂಗಳವಾರ (ಮಾ.10) ಸಂಭ್ರಮದಿAದ ಆಚರಿಸಲಾಯಿತು. ಈ ಸಂದರ್ಭ ಮಾತನಾಡಿದ ಸವಿತಾ ಭಟ್, ಮಹಿಳೆ ಈಗ ಎಲ್ಲಾ ಕ್ಷೇತ್ರಗಳಲ್ಲೂ ಮುಂದಿದ್ದಾಳೆ. ನಮಗೆ ಮಾದರಿಯಾದ ಮಹಿಳೆಯರನ್ನು ದೂರದಲ್ಲಿ ಹುಡುಕಬೇಕಾಗಿಲ್ಲ. ನಮ್ಮ ಸುತ್ತಮುತ್ತಲೇ ಇಂಥ ಅನೇಕ ಮಹಿಳೆಯರಿದ್ದಾರೆ. ಮಹಿಳೆಗೆ ಮುಖ್ಯವಾಗಿ ಬೇಕಾದ್ದು ಸ್ವಾತಂತ್ರ‍್ಯ, ನೆಮ್ಮದಿಯ ಜೀವನ ಹಾಗೂ ಮನೆಯವರಿಂದ ತಾವು ಮಾಡುವ ಕೆಲಸಕ್ಕೆ ಪ್ರೋತ್ಸಾಹ. ಇಷ್ಟಿದ್ದರೆ ಮಹಿಳೆ ಏನು ಬೇಕಾದರೂ ಸಾಧಿಸಬಲ್ಲಳು. ಸಮಾಜಕ್ಕೆ ಕೊಡುಗೆಯನ್ನು ನೀಡಬಲ್ಲಳು. ಈ ಮಹಿಳಾ ದಿನಾಚರಣೆ ಎಂಬುದು ಒಂದು ದಿನದ ಅಥವಾ ಮಾರ್ಚ್ ತಿಂಗಳಿನ ಆಚರಣೆ ಮಾತ್ರ ಆಗಿರದೆ ಮಹಿಳೆಗೆ ವರ್ಷದ ಎಲ್ಲಾ ದಿನಗಳಲ್ಲೂ ಗೌರವ ಮತ್ತು ಒಳ್ಳೆಯ ಸ್ಥಾನಮಾನಗಳು ಸಿಗುವಂತಾಗಬೇಕು ಎಂದರು.
ಇದೇ ಸಂದರ್ಭ ಸಂಘದ ಸದಸ್ಯೆಯರಿಗಾಗಿ ಅಡುಗೆ ಸ್ಪರ್ಧೆ, ಹೂ ಜೋಡಣೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ತೀರ್ಪುಗಾರರಾಗಿ ರಿಶಿಕಾ ಶ್ಯಾಮ್ ಮತ್ತು ಗಾಯತ್ರಿ ಸೋಮಯ್ಯ ಪಾಲ್ಗೊಂಡಿದ್ದರು. ಗಾಯನ ಸ್ಪರ್ಧೆಯನ್ನೂ ನಡೆಸಲಾಯಿತು. ತೀರ್ಪುಗಾರರಾಗಿ ಲಕ್ಷೀ ಈಶ್ವರ ಭಟ್ ಮತ್ತು ಶ್ರೀರಕ್ಷಾ ಕಾರ್ಯನಿರ್ವಹಿಸಿದರು. ಮಧ್ಯಾಹ್ನದ ನಂತರ ಸಂಘದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಂಘದ ಉಪಾಧ್ಯಕ್ಷೆ ಶ್ಯಾಮಲಾ ದಿನೇಶ್, ಆಡಳಿತ ಮಂಡಳಿ ಸದಸ್ಯೆಯರಾದ ವಸುಂಧರಾ ಪ್ರಸನ್ನ, ಆಯಿಷಾ ಹಮೀದ್, ಉಮಾ ಈಶ್ವರ್, ಪ್ರೇಮಾ ರಾಘವಯ್ಯ, ಜಯಶೀಲಾ ಪ್ರಕಾಶ್ ,ವಸಂತಿ ಪೂಣಚ್ಚ, ಸಂಘದ ಪ್ರಮುಖರಾದ ವಿದ್ಯಾ ದೇವರಾಜ್, ಮೇಘಾ ಸುಜಯ್, ಶೈಲಾ ಮಂಜುನಾಥ್, ಭಾರತಿ ರಮೇಶ್ ಮತ್ತಿತರರು ಇದ್ದರು.
ಸಮಾಜ ಸೇವಕಿ ಬಾಳೆಯಡ ದಿವ್ಯಾ ಮಂದಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ದೀಪಾಂಜಲಿ ತಂಡದವರ ಪ್ರಾರ್ಥನೆ ಗಮನ ಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net