ಸಮಾಜ ಬಲವರ್ಧನೆಗೆ ಮಹಿಳೆಯರು ಒಗ್ಗೂಡುವುದು ಅವಶ್ಯ

ನಾಪೋಕ್ಲು ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಕೇಟೋಳಿರ ಶಾರದಾ ಪಳಂಗಪ್ಪ, ಮೂವೇರ ಧರಣಿ ಗಣಪತಿ, ಮಂಡೀರ ವಿಮಲಾ ಸೋಮಣ್ಣ ಇತರರು ಇದ್ದರು.
ನಾಪೋಕ್ಲು ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ಕೇಟೋಳಿರ ಶಾರದಾ ಪಳಂಗಪ್ಪ, ಮೂವೇರ ಧರಣಿ ಗಣಪತಿ, ಮಂಡೀರ ವಿಮಲಾ ಸೋಮಣ್ಣ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅರೆಯಡ ತೇಜ ಮಾದಪ್ಪ ಹೇಳಿಕೆ
  • ವಿಶ್ವ ಮಹಿಳಾ ದಿನಾಚರಣೆ
ನಾಪೋಕ್ಲು: ಎಲ್ಲರ ಸಹಕಾರದಿಂದ ಮಹಿಳಾ ಸಮಾಜ ಸಂಘಟಿತವಾಗಲಿದೆ ಎಂದು ಅರೆಯಡ ತೇಜ ಮಾದಪ್ಪ ಹೇಳಿದರು.
ಮಹಿಳಾ ಸಮಾಜದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದ ಬೆಳವಣಿಗೆಯಲ್ಲಿ ಪುರುಷರಿಗಿಂತ ಮಹಿಳೆಯರು ಒಂದು ಹೆಜ್ಜೆ ಮುಂದೆ ಇದ್ದಾರೆ. ಹಾಗಾಗಿ ಮಹಿಳೆಯರು ಸಂಘಟಿತರಾಗಬೇಕು, ಎಲ್ಲರೂ ಒಟ್ಟಾಗಿ ಸೇರಿ ಸಮಾಜವನ್ನು ಬಲವರ್ಧನೆಗೊಳಿಸಿ ಉತ್ತಮ ಮಟ್ಟಕ್ಕೆ ಕೊಂಡೊಯ್ಯಬೇಕು ಎಂದರು.
ಮಹಿಳೆಯರು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ತಮಗೆ ವಹಿಸಿದ ಎಲ್ಲ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾಳೆ. ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳೆಯರ ಸಾಧನೆ ಶ್ಲಾಘನೀಯ ಎಂದರು.
ಮಹಿಳಾ ಸಮಾಜದ ನೂತನ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಮಾತನಾಡಿ, ಸಮಾಜ, ಸಂಘ-ಸಂಸ್ಥೆಗಳು ಅಭಿವೃದ್ಧಿ ಹೊಂದಬೇಕಾದರೆ ಸರ್ವ ಸದಸ್ಯರ ಸಹಕಾರ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ನಿಸ್ವಾರ್ಥ ಸೇವೆಯನ್ನು ನೀಡಿ ಉನ್ನತಿಗೆ ಶ್ರಮಿಸುವಂತಾಗಬೇಕೆಂದರು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷೆ ಕೇಟೋಳಿರ ಶಾರದಾ ಪಳಂಗಪ್ಪ, ಮೂವೇರ ಧರಣಿ ಗಣಪತಿ, ಮಂಡೀರ ವಿಮಲಾ ಸೋಮಣ್ಣ ಅವರನ್ನು ಸನ್ಮಾನಿಸಲಾಯಿತು.
ಬೇತು ಗ್ರಾಮದ ಚೋಕಿರ ಶೈಲಾ ಮತ್ತು ಸಂಗಡಿಗರ ನೃತ್ಯ ಸೇರಿದಂತೆ ಮಹಿಳಾ ಸಮಾಜದ ಸದಸ್ಯರಿಂದ ಹಾಡು, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮುಂಡಂಡ ಕವಿತಾ ಅಯ್ಯಣ್ಣ, ಉಪಾಧ್ಯಕ್ಷೆ ಕೇಲೇಟಿರ ಮುತ್ತಮ್ಮ, ನಿರ್ದೇಶಕರಾದ ಎಂ.ಎಂ ಕವಿತಾ, ಮಣವಟ್ಟಿರ ಜಾನ್ಸಿ ತಿಮ್ಮಯ್ಯ, ಕುಟ್ಟಂಜೆಟ್ಟಿರ ಬಿನಿತಾ ಸೋಮಣ್ಣ, ಬಿದ್ದಾಟಂಡ ಗಿರಿಜಾ ಬೋಪಣ್ಣ, ಕುಲ್ಲೇಟಿರ ಹೇಮಾವತಿ ಅರುಣ, ಹೇಮಾವತಿ ರಾಮಕೃಷ್ಣ , ಕಾರ್ಯದರ್ಶಿ ರಾಜೇಶ್ವರಿ ಲೋಕೇಶ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net