ಕೇರಳ ಮೂಲದ ಶರಣ್ಯಾ (36) ಗುರುವಾರ ಚಾರಣಕ್ಕೆ ತೆರಳಿದ್ದವರು ಕಾಡಿನಲ್ಲಿ ನಿಗೂಢವಾಗಿ ನಾಪತ್ತೆ ಆಗಿದ್ದಾರೆ. ಕಬ್ಬಿನಕಾಡುವಿನ ಹೋಂಸ್ಟೇಗೆ ಬಂದು ತಂಗಿದ್ದ ಅವರು ತಡಿಯಂಡ ಮೋಳ್ ಚಾರಣಕ್ಕೆ ತೆರಳಿದ್ದರು. ಶರಣ್ಯಾ ನಾಪತ್ತೆ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ, ಕಕ್ಕಬ್ಬೆಯ 25 ಯುವಕರ ತಂಡ ಹಾಗೂ ಪೊಲೀಸ್ ಶ್ವಾನ ದಳದ ಸಹಕಾರದಿಂದ ಹುಡುಕಾಟ ನಡೆದಿದೆ. ನಾಪತ್ತೆಯಾಗಿ 24 ಗಂಟೆಯಾದರೂ ಶರಣ್ಯ ಸುಳಿವು ಸಿಕ್ಕಿಲ್ಲ. ಕೇರಳದಿಂದ ಶರಣ್ಯಾಳ ಸಹೋದರ ಶ್ಯಾಮ್ ಆಗಮಿಸಿದ್ದು, ಪೊಲೀಸರಿಗೆ ಅಗತ್ಯ ಮಾಹಿತಿ ನೀಡಿದ್ದಾರೆ.