ಮರ ಬಿದ್ದು ಮಹಿಳೆಗೆ ಗಾಯ

ಬೇಟೋಳಿ ಗ್ರಾಮದ ಮೂಲೆಅಂಗಡಿ ಸೇತುವೆ ಬಳಿ ಸಿಂಧು ಅವರ ಮೇಲೆ ಬಿದ್ದ ಬೃಹತ್ ಗಾತ್ರದ ಮರ.
ಬೇಟೋಳಿ ಗ್ರಾಮದ ಮೂಲೆಅಂಗಡಿ ಸೇತುವೆ ಬಳಿ ಸಿಂಧು ಅವರ ಮೇಲೆ ಬಿದ್ದ ಬೃಹತ್ ಗಾತ್ರದ ಮರ.
Published on

ಪ್ರಮುಖ ಮುಖ್ಯಾಂಶಗಳು

  • ಮೂಲೆಅಂಗಡಿ ಸೇತುವೆ ಬಳಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ ಅವಘಡ
  • ಅಪಾಯದಿಂದ ಪಾರು
ವಿರಾಜಪೇಟೆ: ತಾಲೂಕಿನ ಮೂಲೆಅಂಗಡಿ ಸೇತುವೆ ಬಳಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಮಹಿಳೆ ಮೇಲೆ ಸೋಮವಾರ ಮರ ಬಿದ್ದು ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
ಪೆರುಂಬಾಡಿ ನಿವಾಸಿ ಸಿಂಧು ಗಾಯಗೊಂಡವರು. ಅಂಗಡಿಯಲ್ಲಿ ಕೆಲಸ ನಿರ್ವಹಿಸಲು ಪೆರುಂಬಾಡಿ ಮನೆಯಿಂದ ಬೇಟೋಳಿ ಗ್ರಾಮದ ರಾಮನಗರಕ್ಕೆ ಬರುವ ಸಂದರ್ಭ ಬೆಳಗ್ಗೆ 9.30ರಲ್ಲಿ ಮೂಲೆ ಅಂಗಡಿ ಸೇತುವೆ ತಲುಪುವ ವೇಳೆ ನದಿ ಮೇಲ್ಬಾಗದಲ್ಲಿ ವಿರಾಜಪೇಟೆ ಕಡೆ ಸಂಚರಿಸುವಾಗ ರಸ್ತೆ ಎಡ ಭಾಗದಲ್ಲಿದ್ದ ಬೃಹತ್ ಗಾತ್ರದ ಮರ ಬುಡ ಸಮೇತ ಸ್ಕೂಟಿ ಚಾಲನೆ ಮಾಡುತ್ತಿದ್ದ ಸಿಂಧು ಮೇಲೆ ಉರುಳಿ ಬಿದ್ದಿದೆ. ಮರದ ರೆಂಬೆಗಳು ಬಲವಾಗಿ ಬಿದ್ದ ಪರಿಣಾಮ ಕಾಲು ಹಾಗೂ ಕೈಗೆ ಗಾಯವಾಗಿದೆ. ತಕ್ಷಣ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸ್ಕೂಟರ್ ಜಖಂಗೊಂಡಿದೆ. ಸುಮಾರು 2 ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು. ಗ್ರಾಮಸ್ಥರು ಸೇರಿ ಬೃಹತ್ ಗಾತ್ರದ ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net