ಪುಲಿಕೋಟು ಗ್ರಾಮದಲ್ಲಿ ಭಾರಿ ಗಾಳಿಯಿಂದ ಬಸ್ ತಂಗುದಾಣದ ಮೇಲ್ಛಾವಣಿ ಹಾರಿರುವುದು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
Wind damage
ನಾಪೋಕ್ಲು: ಇಲ್ಲಿಗೆ ಸಮೀಪದ ಪುಲಿಕೋಟು ಗ್ರಾಮದಲ್ಲಿ ಭಾರಿ ಗಾಳಿ, ಮಳೆಯಿಂದ ಬಸ್ ತಂಗುದಾಣದ ಮೇಲ್ಛಾವಣಿ ಹಾರಿ ಸಂಪೂರ್ಣ ಹಾನಿಯಾಗಿದೆ.
ಬಲ್ಲಮಾವಟಿ ಗ್ರಾಪಂ ದೊಡ್ದ ಪುಲಿಕೋಟು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿರುವ ಬಸ್ ತಂಗುದಾಣಕ್ಕೆ ಅಳವಡಿಸಿದ್ದ ಸಿಮೆಂಟ್ ಸೀಟುಗಳು ಭಾನುವಾರ ರಾತ್ರಿ ವೇಳೆಯ ವಿಪರೀತ ಗಾಳಿಗೆ ಹಾರಿವೆ.
ರಸ್ತೆ ಬದಿಯಲ್ಲಿರುವ ಬಸ್ ತಂಗುದಾಣವನ್ನು ಸ್ಥಳಾಂತರ ಮಾಡುವಂತೆ ಗ್ರಾಮಸ್ಥರು ಹಲವು ಬಾರಿ ಗ್ರಾಪಂ ಬಳಿ ಕೇಳಿಕೊಂಡರೂ ಪ್ರಯೋಜನವಾಗಿರಲಿಲ್ಲ. ಈಗ ರಿಪೇರಿ ಮಾಡುವ ಬದಲಿಗೆ ನಿಲ್ದಾಣ ಸ್ಥಳಾಂತರಿಸಲು ಗ್ರಾಮಸ್ಥರು ಆಗ್ರಹಿಸಿದ್ದಾರೆ.