ನಾಪೋಕ್ಲುವಿಗೆ ಬಂದ ಕಾಡು ಕುರಿ ರಕ್ಷಣೆ

ನಾಪೋಕ್ಲು ಮಾರುಕಟ್ಟೆ ಅಂಗಡಿಗೆ ನುಗ್ಗಿದ ಕಾಡು ಕುರಿಯನ್ನು ಉಪ ಅರಣ್ಯಾಧಿಕಾರಿ ಕಾಳೇಗೌಡರಿಗೆ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಹಸ್ತಾಂತರಿಸಿದರು.
ನಾಪೋಕ್ಲು ಮಾರುಕಟ್ಟೆ ಅಂಗಡಿಗೆ ನುಗ್ಗಿದ ಕಾಡು ಕುರಿಯನ್ನು ಉಪ ಅರಣ್ಯಾಧಿಕಾರಿ ಕಾಳೇಗೌಡರಿಗೆ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಹಸ್ತಾಂತರಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕಾನನಕ್ಕೆ ಮರಳಿ ಬಿಟ್ಟ ಅರಣ್ಯ ಇಲಾಖೆ ಸಿಬ್ಬಂದಿ
ನಾಪೋಕ್ಲು: ಸ್ಥಳೀಯ ಮಾರುಕಟ್ಟೆ ಅಂಗಡಿಗೆ ನುಗ್ಗಿದ ಕಾಡು ಕುರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿ ಕಾಡಿಗೆ ಬಿಟ್ಟಿದ್ದಾರೆ.
ಬೀದಿ ನಾಯಿಗಳಿಂದ ಇತ್ತೀಚೆಗೆ ಕಾಡು ಕುರಿ ತಪ್ಪಿಸಿಕೊಂಡು ಮಾರುಕಟ್ಟೆ ಅಂಗಡಿಗೆ ನುಗ್ಗಿದೆ. ಸುಲೇಮಾನ್ ಅವರು ಕಾಡು ಕುರಿಯನ್ನು ಹಿಡಿದು ಸ್ಥಳೀಯ ಪೊಲೀಸರಿಗೆ ಒಪ್ಪಿಸಿ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದರು.
ಆನಂತರ ಹೆಣ್ಣು ಕಾಡು ಕುರಿಯನ್ನು ಪಡೆದುಕೊಂಡ ಠಾಣಾಧಿಕಾರಿ ರಾಘವೇಂದ್ರ ಅವರು ಉಪ ಅರಣ್ಯಾಧಿಕಾರಿ ಕಾಳೇಗೌಡ, ಗಸ್ತು ಅರಣ್ಯಪಾಲಕ ಕೆ.ಎ.ಶರತ್, ಅರಣ್ಯ ವೀಕ್ಷಕ ಮುತ್ತಪ್ಪ ಮತ್ತು ಹರ್ಷಿತ್ ಸುರಕ್ಷಿತವಾಗಿ ಅರಣ್ಯ ಪ್ರದೇಶದಲ್ಲಿ ಕಾಡು ಕುರಿಯನ್ನು ಬಿಟ್ಟರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net