ನೆಲಜಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ

ನೆಲಜಿ ಗ್ರಾಮದ ಬೆಳೆಗಾರ ಚೆಟ್ಟಿನೆರವನ ಶಿವಕುಮಾರ್ ಅವರ ಗದ್ದೆಗೆ ಕಾಡಾನೆಗಳು ನುಗ್ಗಿ ಭತ್ತವನ್ನು ತುಳಿದು ಹಾಳು ಮಾಡಿರುವುದು.
ನೆಲಜಿ ಗ್ರಾಮದ ಬೆಳೆಗಾರ ಚೆಟ್ಟಿನೆರವನ ಶಿವಕುಮಾರ್ ಅವರ ಗದ್ದೆಗೆ ಕಾಡಾನೆಗಳು ನುಗ್ಗಿ ಭತ್ತವನ್ನು ತುಳಿದು ಹಾಳು ಮಾಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ನೆಲಜಿ ವ್ಯಾಪ್ತಿ
  • ಕಾಡಾನೆಗಳ ಉಪಟಳ ಅಧಿಕವಾಗಿದ್ದು, ರೈತರ ಗದ್ದೆ ಹಾಗೂ ತೋಟಗಳಿಗೆ ದಾಳಿ ಮಾಡುವ ಮೂಲಕ ನಷ್ಟವನ್ನುಂಟು ಮಾಡಿವೆ.
ನಾಪೋಕ್ಲು: ಸಮೀಪದ ನೆಲಜಿ ವ್ಯಾಪ್ತಿಯಲ್ಲಿ ಕಾಡಾನೆಗಳ ಉಪಟಳ ಅಧಿಕವಾಗಿದ್ದು, ರೈತರ ಗದ್ದೆ ಹಾಗೂ ತೋಟಗಳಿಗೆ ದಾಳಿ ಮಾಡುವ ಮೂಲಕ ನಷ್ಟವನ್ನುಂಟು ಮಾಡಿವೆ.
ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಭತ್ತದ ಬೆಳೆಗಳನ್ನು ತಿಂದು-ತುಳಿದು ನಾಶಮಾಡುವ ಮೂಲಕ ಭಯದ ವಾತಾವರಣ ಸೃಷ್ಟಿಸಿದೆ. ನೆಲಜಿ ಗ್ರಾಮದ ಬೆಳೆಗಾರರಾದ ಚೆಟ್ಟಿನೆರವನ ಶಿವಕುಮಾರ್, ಮೊನ್ನಪ್ಪ, ಕುಶಾಲಪ್ಪ, ಕರುಂಬಯ್ಯ ಸೇರಿದಂತೆ ಇತರರು ಕೊಯ್ಲು ಮಾಡಿದ್ದ ಗದ್ದೆ ಹಾಗೂ ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ನಷ್ಟವನ್ನುಂಟು ಮಾಡಿವೆ ಎಂದು ಅಳಲು ತೋಡಿಕೊಂಡಿದ್ದಾರೆ.
ನೆಲಜಿ, ಪೇರೂರು ವ್ಯಾಪ್ತಿಯಲ್ಲಿ ನಿರಂತರ ದಾಳಿಯಿಂದ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಫಿ ಕೊಯ್ಲು ಸಮಯವಾಗುತ್ತಿರುವುದರಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಬೆಳೆಗಾರರು, ಕೂಡಲೇ ನಷ್ಟ ಪರಿಹಾರದೊಂದಿಗೆ ಕಾಡಾನೆಗಳನ್ನು ಕಾಡಿಗೆ ಕಳುಹಿಸಬೇಕೆಂದು ಒತ್ತಾಯಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net