ನಾಪೋಕ್ಲು: ಸಮೀಪದ ನಾಲಡಿ ಗ್ರಾಮದಲ್ಲಿ ಮಂಗಳವಾರ ಕಾಡಾನೆ ಕಳೇಬರ ಪತ್ತೆಯಾಗಿದೆ.
ಗ್ರಾಮದ ಪರದಂಡ ಡಾಲಿ ಅವರ ಕಾಫಿ ತೋಟದಲ್ಲಿ ಕಾಡಾನೆ ಮೃತದೇಹ ಪತ್ತೆಯಾಗಿದೆ.
ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವ್ಯಾಪ್ತಿಯಲ್ಲಿ ಭಾರಿ ಮಳೆಯಿಂದ ಮರಣೋತ್ತರ ಪರೀಕ್ಷೆಗೆ ತೊಂದರೆಯಾಯಿತು. ಬಳಿಕ ಡಾ.ಮುಜುಬ್ ಖಾನ್‌ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಯಿತು.
ಅರಣ್ಯ ಇಲಾಖೆಗೆ ಸಿಎಫ್ ಸೆಂಥಿಲ್ ಕುಮಾರ್, ಡಿಎಫ್‌ಒ ನೆಹರು, ಆರ್‌ಎಫ್‌ಒ ಶಂಕರ್, ಬಿಆರ್‌ಎಫ್‌ಒ ಫಿರೋಜ್ ಖಾನ್ ಇತರು ಇದ್ದರು.