ಹಿರಿಯರಿಗೆ ಪ್ರೀತಿ ತೋರಿಸಬೇಕು

ರೋಟರಿ ಮಡಿಕೇರಿ ವುಡ್ಸ್, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ರೋರ‍್ಯಾಕ್ಟ್ ಕ್ಲಬ್ ವತಿಯಿಂದ ಆಚರಿಸಲಾದ ಹಿರಿಯ ನಾಗರಿಕರ ದಿನ ಕಾರ್ಯಕ್ರಮವನ್ನು ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಉದ್ಘಾಟಿಸಿದರು. ಪ್ರಮೀಳಾ ಶೆಟ್ಟಿ, ಡಾ. ವೇಣುಗೋಪಾಲ್, ವಸಂತ್ ಕುಮಾರ್ ಮತ್ತಿತರರು ಇದ್ದರು.
ರೋಟರಿ ಮಡಿಕೇರಿ ವುಡ್ಸ್, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ರೋರ‍್ಯಾಕ್ಟ್ ಕ್ಲಬ್ ವತಿಯಿಂದ ಆಚರಿಸಲಾದ ಹಿರಿಯ ನಾಗರಿಕರ ದಿನ ಕಾರ್ಯಕ್ರಮವನ್ನು ಆಕಾಶವಾಣಿ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಉದ್ಘಾಟಿಸಿದರು. ಪ್ರಮೀಳಾ ಶೆಟ್ಟಿ, ಡಾ. ವೇಣುಗೋಪಾಲ್, ವಸಂತ್ ಕುಮಾರ್ ಮತ್ತಿತರರು ಇದ್ದರು.
Published on
ಮಡಿಕೇರಿ:
ಹಿರಿಯರಿಗೆ ಪ್ರೀತಿ ತೋರಿಸುವ ಮೂಲಕ ನಾವೂ ಒಂದು ದಿನ ಹಿರಿಯ ನಾಗರಿಕರಾಗಲಿದ್ದೇವೆ ಎಂಬ ಸತ್ಯವನ್ನು ಅರಿತುಕೊಳ್ಳಬೇಕು ಎಂದು ಮಡಿಕೇರಿ ಆಕಾಶವಾಣಿಯ ನಿವೃತ್ತ ಉದ್ಘೋಷಕ ಸುಬ್ರಾಯ ಸಂಪಾಜೆ ಹೇಳಿದರು. ರೋಟರಿ ಮಡಿಕೇರಿ ವುಡ್ಸ್, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ರೋರ‍್ಯಾಕ್ಟ್ ಕ್ಲಬ್ ವತಿಯಿಂದ ಶುಕ್ರವಾರ ಆಚರಿಸಲಾದ ಹಿರಿಯ ನಾಗರಿಕರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಹಿರಿಯರನ್ನು ಗೌರವಿಸಿ, ಅವರ ಜೀವನದ ಸಂಧ್ಯಾಕಾಲದಲ್ಲಿ ಅವರೊಂದಿಗೆ ಇದ್ದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹಿರಿಯರಿಗೆ ಪ್ರೀತಿ ತೋರಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರೋಟರಿ ವುಡ್ಸ್ ಅಧ್ಯಕ್ಷೆ ಪ್ರಮೀಳಾ ಶೆಟ್ಟಿ, ಹಿರಿಯರು ನಡೆದು ಬಂದ ದಾರಿ ಕಿರಿಯರಿಗೆ ದಾರಿ ದೀಪದಂತಿದೆ. ಹಿರಿಯ ನಾಗರಿಕರನ್ನು ಮರದ ಆಳವಾದ ಬೇರಿಗೆ ಹೋಲಿಸಿದ ಅವರು, ಸುಮಧುರ ಗೀತೆ ಹಾಡುವ ಮೂಲಕ ಕಾರ್ಯಕ್ರಮದ ಮಹತ್ವವನ್ನು ಸಾರಿದರು.
ಸರ್ಕಾರಿ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ. ವೇಣುಗೋಪಾಲ್ ಮಾತನಾಡಿ, ಹಿರಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವಂತೆ ಕರೆ ನೀಡಿದರು.
ರೋಟರಿ ಜಿಲ್ಲೆ 3181ರ ವಲಯ 6ರ ವಲಯ ಸೇನಾನಿ ವಸಂತ್ ಕುಮಾರ್ ಮಾತನಾಡಿ, ಹಿರಿಯ ನಾಗರಿಕರ ದಿನಾಚರಣೆ ಒಂದು ದಿನಕ್ಕೆ ಮಾತ್ರ ಸೀಮಿತವಾಗಬಾರದು. ಹಿರಿಯರ ಆರೈಕೆ ನಮ್ಮ ಜವಾಬ್ದಾರಿ ಎಂಬುವುದನ್ನು ಅರಿತು ಅವರನ್ನು ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದು ಹೇಳಿದರು.
ರೋಟರಿ ವುಡ್ಸ್ ನಿಕಟಪೂರ್ವ ಅಧ್ಯಕ್ಷ ಕಿರಣ್ ಕುಂದರ್ ಹಾಗೂ ವುಡ್ಸ್ ಕಾರ್ಯದರ್ಶಿ ಸ್ಮಿತಾ ಚೆಂಗಪ್ಪ, ರೋಟರಿಯನ್ನರಾದ ಧನಂಜಯ ಶಾಸ್ತಿç, ರವಿ ಪಿ., ರವೀಂದ್ರ ಹೆಚ್., ದಿವ್ಯಾ ಲೋಕೇಶ್, ಬೋಧಕ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು.
ಹಿರಿಯ ತಲೆಮಾರು ನಡೆದು ಬಂದ ರೀತಿ, ಕೂಡು ಕುಟುಂಬದ ಸಂಭ್ರಮ ಹಾಗೂ ಆಚಾರ-ವಿಚಾರಗಳನ್ನು ಒಳಗೊಂಡ ಸಾಕ್ಷö್ಯಚಿತ್ರವನ್ನು ಪ್ರೊಜೆಕ್ಟರ್ ಮೂಲಕ ಪ್ರದರ್ಶಿಸಲಾಯಿತು. ಸಾಕ್ಷö್ಯಚಿತ್ರ ವೀಕ್ಷಿಸಿದ ಸಭಿಕರು ಭಾವುಕರಾದರು. ಬಳಿಕ ಹಿರಿಯ ನಾಗರಿಕರನ್ನು ವೇದಿಕೆಗೆ ಆಹ್ವಾನಿಸಿ ಅವರ ಜೀವನಾನುಭವಗಳನ್ನು ಹಂಚಿಕೊಳ್ಳಲು ಅವಕಾಶ ನೀಡಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಹಿರಿಯ ನಾಗರಿಕರಿಗೆ ರೋಟರಿ ವುಡ್ಸ್ ಹೆಸರಿನ ಛತ್ರಿಗಳನ್ನು ನೀಡಿ ಗೌರವಿಸಲಾಯಿತು. ಕಾಲೇಜು ಉಪನ್ಯಾಸಕಿ ರಾಖೀ ಪೂವಣ್ಣ ಮಾರ್ಗದರ್ಶನದಲ್ಲಿ ರೋಟರಾಕ್ಟ್ ಕ್ಲಬ್ ಸದಸ್ಯರು ಕಾರ್ಯಕ್ರಮ ನಿರ್ವಹಿಸಿ ಗಮನ ಸೆಳೆದರು. ಸುಬ್ರಾಯ ಸಂಪಾಜೆ ಅವರು ಹಿರಿಯ ನಾಗರಿಕರಿಗೆ ಸಂಬAಧಿಸಿದ ಪುರಾಣ ಕಥೆಗಳನ್ನು ಉಲ್ಲೇಖಿಸಿ ಯಕ್ಷಗಾನದ ಹಾಡುಗಳನ್ನು ಹಾಡಿ ನೆರೆದಿದ್ದವರನ್ನು ರಂಜಿಸಿದರು.
ಮಕ್ಕಂದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಪ್ರಯುಕ್ತ ಹಿರಿಯ ಜೀವಿಗಳಿಗೆ ಗೌರವಾರ್ಪಣೆಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ವಿಧಾನಪರಿಷತ್ ಮಾಜಿ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶಾಂತೆಯAಡ ಅಪ್ಪಣ್ಣ, ಎಲ್. ಮುತ್ತವ್ವ, ಶಾರದಾ ಪ್ರಭಾಕರ್ ಆಚಾರ್ಯ, ವೆಂಕಮ್ಮ, ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಬಾರ ಮುಖ್ಯ ಶಿಕ್ಷಕಿ ಹರಿಣಾಕ್ಷಿ, ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಆನಂತಶಯನ, ಕಾರ್ಯದರ್ಶಿ ಡಾ. ಜಿ.ಡಿ. ಚೇತನ್, ನಿರ್ದೇಶಕರಾದ ಲಿಂಗರಾಜು, ರವೀಂದ್ರ ರೈ, ಪ್ರಕಾಶ್ ಪೂವಯ್ಯ, ದಿವ್ಯಚೇತನ್, ಸುಮನಾ ಶ್ರೀಹರಿ, ಶಿಕ್ಷಕಿ ಲೀಲಾವತಿ, ರತಿಕುಮಾರಿ ಇದ್ದರು.
ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಗಾಳಿಬೀಡುವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನ ಕಾರ್ಯಕ್ರಮದಲ್ಲಿ
ಗ್ರಾಮದ ಹಿರಿಯ ನಾಗರಿಕರಾದ ಎಂ.ಬಿ. ದೇವಯ್ಯ, ರಾಮಪ್ಪ, ಚೋಂದಮ್ಮ ಅವರನ್ನ ಸನ್ಮಾನಿಸಲಾಯಿತು. ರೋಟರಿ ಮಿಸ್ಟಿ ಹಿಲ್ಸ್ ಸ್ಥಾಪಕಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿದರು. ವಲಯ ಸೇನಾನಿ ಮಧುಸೂದನ್, ನಿರ್ದೇಶಕರಾದ ಲಿಂಗರಾಜು, ಕ್ಯಾರಿ ಕಾರ್ಯಪ್ಪ, ಸ್ನೇಹಿತ್, ಜಯಂತ್ ಪೂಜಾರಿ, ಗಿರೀಶ್, ರತ್ನಾಕರ್ ರೈ, ಪಿ.ಆರ್. ರಾಜೇಶ್ ಹೆಲೆನ್ ನಿಕ್ವೇರ, ವಿನುತ, ಎಸ್.ಡಿ.ಎಂ.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪೋಷಕರು ಇದ್ದರು.
ಅತ್ತೂರಿನ ಜ್ಞಾನಗಂಗಾ ವಸತಿ ಶಾಲೆಯಲ್ಲಿ ಜ್ಞಾನ ಗಂಗಾ ಇಂರ‍್ಯಾಕ್ಟ್ ಕ್ಲಬ್ ಮತ್ತು ರೋಟರಿ ಮಿಸ್ಟಿ ಹಿಲ್ಸ್ ಮಡಿಕೇರಿ ಇವರ ಸಹಯೋಗದೊಂದಿಗೆ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಡೆಯಿತು. ಅತ್ತೂರಿನ ಹಿರಿಯ ನಾಗರಿಕರಾದ ಕೆ. ಬೋಜಮ್ಮ, ಎ.ವಿ. ಜೋಯಪ್ಪ,
ಶಂಭುಲಿAಗಪ್ಪ ಅವರನ್ನು ಸನ್ಮಾನಿಸಲಾಯಿತು.
ಶಾಲೆಯ ಕಾರ್ಯದರ್ಶಿ ಬಿ.ಎಸ್. ನಿಂಗಪ್ಪ, ಪ್ರಾಂಶುಪಾಲರಾದ ಎಸ್.ಎಂ. ಸತ್ಯ ಸುಲೋಚನ, ವಿದ್ಯಾರ್ಥಿಗಳಾದ ಗಣ್ಯ, ಸುಚೇತ್, ಶಿಶಿರ್ ಭಟ್ ಮಾತನಾಡಿದರು.
ಜ್ಞಾನಗಂಗಾ ಶಾಲೆಯ ಅಧ್ಯಕ್ಷ ಟಿ.ಕೆ. ಸುಧೀರ್, ಶಿಕ್ಷಕಿ ರತ್ನಾವತಿ, ಕನಿಷ್ಕ, ವಿಶ್ರುತ, ವಿನಿತಾ, ಮನ್ವಿತ್ ಇದ್ದರು.
ನಾಪೋಕ್ಲುವಿನ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಚರಿಸಲಾದ ವಿಶ್ವ ಹಿರಿಯರ ನಾಗರಿಕರ ದಿನ ಸಂದರ್ಭ ಹಿರಿಯರಾದ ಚೋಕಿರ ಬಿ. ಪೊನ್ನಪ್ಪ, ಕೇಟೋಳಿರ ರಾಜ ಗಣಪತಿ, ನೂರಂಬಡ ಎಸ್. ಉದಯ ಶಂಕರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾರ್ಥಿಗಳಾದ ಸುಮಿತಾ ಶಾಲ್, ಫಾತಿಮತ್ ಅಫ್ರೀನ, ಆಯಿಷಾ ಹಿರಿಯ ನಾಗರಿಕರ ದಿನಾಚರಣೆ ಮಹತ್ವದ ಬಗ್ಗೆ ಮಾತನಾಡಿದರು.
ಕೆ.ಪಿ.ಎಸ್ ಉಪ ಪ್ರಾಂಶುಪಾಲ ಎಂ.ಎಸ್. ಶಿವಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಎಸ್.ಡಿ.ಎಂ.ಸಿ. ಸದಸ್ಯರಾದ ಉಸ್ಮಾನ್, ಇಂರ‍್ಯಾಕ್ಟ್ ಕ್ಲಬ್ ಸಂಯೋಜಕ ಶಿಕ್ಷಕಿ ಕೆ.ಬಿ. ಉಷಾರಾಣಿ ರೋಟರಿ ಮಿಸ್ಟಿ ಹಿಲ್ಸ್ ಸದಸ್ಯರಾದ ಅಜಿತ್ ನಾಣಯ್ಯ, ಕ್ಯಾರಿ ಕಾರ್ಯಪ್ಪ, ನಿಶಾಂತ್ ಬೆಳ್ಳಿಯಪ್ಪ, ಶ್ರೀಹರಿ ರಾವ್, ಸುಮನ ರಾವ್, ಸುಮೇಧ, ಎಂ. ಧನಂಜಯ, ಶಿಕ್ಷಕಿಯರಾದ ಕೆ.ಆರ್. ಮಾಲಿನಿ, ಪೂರ್ಣಿಮಾ, ತಂಝಿಲಾ ರೋಶ್ನಿ ಮತ್ತಿತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net