

ಪ್ರಮುಖ ಮುಖ್ಯಾಂಶಗಳು
ಜಿಲ್ಲೆಯಲ್ಲಿ ಕೇವಲ 500ರಷ್ಟು ಮಾತ್ರ ಜನಸಂಖ್ಯೆ ಇರುವ ಪುಟ್ಟ ಸಮುದಾಯ ನಮ್ಮದು. ನಾವು ಕೂಡ ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಬೇಕು ಎನ್ನುವ ಕಾರಣದಿಂದ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದ್ದೇವೆ. ಇಂದಿನ ಸಮಾಜಕ್ಕೆ ಮಾರಕವಾಗಿರುವ ಮಾದಕ ವ್ಯಸನದ ವಿರುದ್ಧ ಜಾಗೃತಿ ಮೂಡಿಸುವುದು ಕೂಡ ನಮ್ಮ ಆದ್ಯ ಕರ್ತವ್ಯ ಆಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸಂಘಟನೆ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ನಡೆಸಲಾಗಿದೆ.
======ಕೋಟ್: ಕುಶಾಲನಗರಕ್ಕೆ ಆರ್ಯವೈಶ್ಯ ಸಮಾಜದ ಕೊಡುಗೆ ದೊಡ್ಡದಿದೆ. ಇಲ್ಲಿ ಪ್ರಾಥಮಿಕ ಶಾಲೆ, ಪಾಲಿಟೆಕ್ನಿಕ್, ಖಾಸಗಿ ಬಸ್ ನಿಲ್ದಾಣಕ್ಕೆ ಈ ಸಮಾಜದವರು ಜಾಗ ಬಿಟ್ಟು ಕೊಡುವ ಮೂಲಕ ಬಹಳ ಹಿಂದೆಯೇ ಮಾದರಿ ಕೆಲಸ ಮಾಡಿದ್ದಾರೆ. ಅವರ ತ್ಯಾಗ ಇಂದಿನ ಪೀಳಿಗೆಗೂ ಗೊತ್ತಾಗಬೇಕು. ಮಾದಕ ವ್ಯವಸನ ವಿರುದ್ಧ ಅವರ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ಪಿಡುಗು ಇಂದು ಸಮಾಜಕ್ಕೆ ಮಾರಕವಾಗಿ ಕಾಡುತ್ತಿದೆ.
ತಮ್ಮ ಸಮುದಾಯಕ್ಕೆ ಸೀಮಿತವಾಗಬಹುದಿದ್ದ ಕಾರ್ಯಕ್ರಮವೊಂದನ್ನು ಆರ್ಯ ವೈಶ್ಯ ಸಮಾಜದವರು ಊರಿನ ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದ್ದಾರೆ. ಇದರ ಜತೆಗೆ ಸಮಾಜಕ್ಕೆ ಸಂದೇಶ ನೀಡುವ ಕಾರ್ಯಕ್ರಮವನ್ನೂ ನಡೆಸಲಾಗುತ್ತಿದೆ. ಇಂದಿನ ದಿನಗಳಲ್ಲಿ ಓದುವ ಮಕ್ಕಳ ಬಗ್ಗೆ ಜಾಗ್ರತೆ ಬೇಕು. ಅವರ ಗೆಳೆಯರ ಬಳಗದ ಮೇಲೆ ಗಮನ ಇಟ್ಟಿರಬೇಕು. ಮಕ್ಕಳ ಮೇಲೆ ಪ್ರೀತಿ ಜತೆಗೆ ಅವರ ಬಗ್ಗೆ ಜವಾಬ್ದಾರಿಯೂ ಪೋಷಕರಲ್ಲಿ ಇರಬೇಕು. ಮಾದಕ ವಸ್ತು ಬಳಸುವುದಿಲ್ಲ. ಬಳಸುವವರ ಜತೆ ಸೇರುವುದಿಲ್ಲ ಎನ್ನುವ ಪ್ರತಿಜ್ಞೆಯನ್ನು ಮಕ್ಕಳು ಮಾಡಬೇಕು.
ಮಾದಕ ವಸ್ತುಗಳ ಸೇವನೆ ಚಟ ಒಮ್ಮೆ ಹತ್ತಿಸಿಕೊಂಡರೆ ಅದು ಬಿಡಲಾರದೇ ಕಾಡುತ್ತದೆ. ಹಾಗಾಗಿ ಯುವ ಜನಾಂಗ ಈ ಪಿಡುಗಿನಿಂದ ದೂರವೇ ಇರಬೇಕು. ಕುತೂಹಲಕ್ಕೂ ಇದರ ಹತ್ತಿರ ಸುಳಿಯಬಾರದು. ತಮ್ಮ ಶಾಲಾ, ಕಾಲೇಜು ವ್ಯಾಪ್ತಿಯಲ್ಲಿ ಇಂಥ ಚಟುವಟಿಕೆ ಕಂಡುಬAದರೆ ಕೂಡಲೇ ಸಂಬAಧಿಸಿದವರಿಗೆ ಮಾಹಿತಿ ಕೊಡಬೇಕು. ಪೋಷಕರು ಕೂಡ ತಮ್ಮ ಮಕ್ಕಳ ಚಲನವಲನದ ಮೇಲೆ ಗಮನ ಇಟ್ಟಿರಬೇಕು.