ಶಾಲಾ ಸಂಸತ್‌ಗೆ ಇವಿಎಂ ಆ್ಯಪ್‌ನಲ್ಲಿ ಮತದಾನ

ನಿಡ್ತ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಂಸತ್ತು ಚುನಾವಣೆಯಲ್ಲಿ ಮತದಾನದ ಪ್ರಕ್ರಿಯೆ ಜರುಗಿತು. ಮುಖ್ಯ ಶಿಕ್ಷಕಿ ಎಂ.ಸಿ.ನಳಿನಿ, ಪ್ರಿಯಾಂಕಾ, ಸಂಗೀತಾ ಇತರರು ಇದ್ದರು.
ನಿಡ್ತ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳ ಸಂಸತ್ತು ಚುನಾವಣೆಯಲ್ಲಿ ಮತದಾನದ ಪ್ರಕ್ರಿಯೆ ಜರುಗಿತು. ಮುಖ್ಯ ಶಿಕ್ಷಕಿ ಎಂ.ಸಿ.ನಳಿನಿ, ಪ್ರಿಯಾಂಕಾ, ಸಂಗೀತಾ ಇತರರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • Voting for School Parliament
ಶನಿವಾರಸಂತೆ: ಸಮೀಪದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ 2025-26ನೇ ಸಾಲಿನ ವಿದ್ಯಾರ್ಥಿಗಳ ಸಂಸತ್ತು ಚುನಾವಣೆಯನ್ನು ಸೋಮವಾರ ಆಯೋಜಿಸಲಾಗಿತ್ತು.
ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯಂತೆ ನೀತಿ ಸಂಹಿತೆ ಜಾರಿಗೊಳಿಸಿ, ಮೊಬೈಲ್‌ನಲ್ಲಿ ಇವಿಎಂ ಆ್ಯಪ್ ಮೂಲಕ ಮತದಾನದ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಶಿಕ್ಷಕಿ ಎಂ.ಸಿ.ನಳಿನಿ ಮುಖ್ಯಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಶಿಕ್ಷಕರಾದ ಪ್ರಿಯಾಂಕಾ ಚಿಪಳೂಣಕರ್ ಮೊದಲನೇ ಮತಗಟ್ಟೆ ಅಧಿಕಾರಿಯಾಗಿ, ಸಂಗೀತಾ ಎರಡನೇ ಮತಗಟ್ಟೆ ಅಧಿಕಾರಿಯಾಗಿ, ಡಿ.ಎಸ್.ಮಧುಕುಮಾರ್ ಮೂರನೇ ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಸಿದರು. ಶಿಕ್ಷಕರಾದ ರೂಪಾ, ಸಂಗೀತಾ, ನೇತ್ರಾವತಿ ಚುನಾವಣಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ್ದರು. ಚುನಾವಣೆಯಲ್ಲಿ ಆಯ್ಕೆಗೊಂಡ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net