ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅರಿವು ಕಾರ್ಯಕ್ರಮ

ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತದಾನ ಸಾಕ್ಷರತಾ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅರಿವು ಕಾರ್ಯಕ್ರಮ ನಡೆಯಿತು. ಎಂ.ಟಿ. ರಮೇಶ್, ಹಂಡ್ರAಗಿ ನಾಗರಾಜ್, ನಾಗಪ್ಪ ಯಾಲಕ್ಕಿಕಟ್ಟೆ, ರವೀಶ್, ಹನುಮರಾಜು ಮತ್ತಿತರರು ಇದ್ದರು.
ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತದಾನ ಸಾಕ್ಷರತಾ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅರಿವು ಕಾರ್ಯಕ್ರಮ ನಡೆಯಿತು. ಎಂ.ಟಿ. ರಮೇಶ್, ಹಂಡ್ರAಗಿ ನಾಗರಾಜ್, ನಾಗಪ್ಪ ಯಾಲಕ್ಕಿಕಟ್ಟೆ, ರವೀಶ್, ಹನುಮರಾಜು ಮತ್ತಿತರರು ಇದ್ದರು.
Published on
ಕುಶಾಲನಗರ
ಕೂಡಿಗೆ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮತದಾನ ಸಾಕ್ಷರತಾ ಕ್ಲಬ್ ವತಿಯಿಂದ ವಿದ್ಯಾರ್ಥಿಗಳಿಗೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅರಿವು ಕಾರ್ಯಕ್ರಮ ಗುರುವಾರ ನಡೆಯಿತು.
ರಾಜ್ಯಶಾಸ್ತ್ರ ಉಪನ್ಯಾಸಕ ಎಂ. ಟಿ. ರಮೇಶ್ ಈ ಸಂದರ್ಭ ಮಾತನಾಡಿ ಭಾರತದ ಸಂವಿಧಾನ ಮತದಾನದ ಹಕ್ಕನ್ನು ಒದಗಿಸಿದೆ. ಈ ಹಕ್ಕನ್ನು ಬಳಸಿಕೊಂಡು ಉತ್ತಮ ಸರ್ಕಾರವನ್ನು ಆಯ್ಕೆ ಮಾಡುವ ಅವಕಾಶ ನಮ್ಮ ಕೈಯಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅನರ್ಹರು ಮತದಾನ ಹಕ್ಕನ್ನು ಪಡೆದಿದ್ದಾರೆ. ಹಾಗಾಗಿ ಭಾರತದ ಚುನಾವಣಾ ಆಯೋಗ ಅರ್ಹರಾದ ಮತದಾರರಿಗೆ ನಿಜವಾದ ಹಕ್ಕು ಲಭ್ಯವಾಗಬೇಕು ಎಂಬ ಉದ್ದೇಶದಿಂದ ದೇಶಾದ್ಯಂತ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಮನೆಗಳಲ್ಲಿ ಬಿ ಎಲ್ ಓ ಗಳು ಬಂದ ಸಂದರ್ಭದಲ್ಲಿ ಸೂಕ್ತ ದಾಖಲೆಗಳೊಂದಿಗೆ ಅವರಿಗೆ ಸ್ಪಂದಿಸಿ ಮತದಾನದ ಹಕ್ಕನ್ನು ಪಡೆಯಬೇಕು ಎಂದರು.
ಪ್ರಾಂಶುಪಾಲ ಹಂಡ್ರAಗಿ ನಾಗರಾಜ್ ಮಾತನಾಡಿ ಈಗ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆ ವಿಶೇಷತೆಯಿಂದ ಕೂಡಿದ್ದು ಮುಂದಿನ ದಿನಗಳಲ್ಲಿ ಸರ್ಕಾರದ ಆಯ್ಕೆ ಹಾಗೂ ಸೌಲಭ್ಯಗಳಿಗೆ ಮತದಾರರ ಗುರುತಿನ ಚೀಟಿ ಮಾನದಂಡವಾಗಲಿದೆ. ಆದುದರಿಂದ ವಿದ್ಯಾರ್ಥಿಗಳು ನಿಮ್ಮ ಮನೆಗಳಲ್ಲಿ ನಿರ್ಲಕ್ಷö್ಯ ವಹಿಸಿದಂತೆ ಕಡ್ಡಾಯವಾಗಿ ಮತದಾರರ ಪಟ್ಟಿ ಪರಿಷ್ಕರಣೆಗೆ ಸ್ಪಂದಿಸಬೇಕು. ನೆರೆ ಹೊರೆಯವರಿಗೂ ಇದರ ಮಹತ್ವವನ್ನು ತಿಳಿಸಬೇಕು ಎಮದು ಹೇಳಿದರು.
ಉಪನ್ಯಾಸಕರಾದ ನಾಗಪ್ಪ ಯಾಲಕ್ಕಿಕಟ್ಟೆ, ರವೀಶ್, ಹನುಮರಾಜು, ಆನಂದ್. ಲಿನೆಟ್ ಸೂಸಿ, ತಂಗಚ್ಚನ್ ಹಾಗೂ ವಿದ್ಯಾರ್ಥಿಗಳು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net