ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಥ್ರೋಬಾಲ್, ಬೆಂಕಿ ರಹಿತ ಅಡುಗೆ ಹಾಗೂ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿದೆ. ಜತೆಗೆ ಕಪಲ್ ಡಾನ್ಸ್, ಮೂರು ಕಾಲಿನ ಓಟ ಹಾಗೂ ವೆಜಿಟೇಬಲ್ ಕಾರ್ವಿಂಗ್ ಸ್ಪರ್ಧೆಗಳು ವಿಶೇಷ ಆಕರ್ಷಣೆಯಾಗಿವೆ. ಮಕ್ಕಳಿಗಾಗಿ ವಿವಿಧ ವಯೋಮಾನದ ಸ್ಪರ್ಧೆಗಳು ನಡೆಯಲಿದ್ದು, 16 ವರ್ಷ ಒಳಗಿನ ಮಕ್ಕಳಿಗೆ ಕ್ರಿಕೆಟ್ ಹಾಗೂ ಓಟದ ಸ್ಪರ್ಧೆ, 9 ರಿಂದ 11 ವರ್ಷದೊಳಗಿನ ಮಕ್ಕಳಿಗೆ ಗೋಣಿಚೀಲ ಜಿಗಿತ, 6 ರಿಂದ 8 ವರ್ಷದ ಮಕ್ಕಳಿಗೆ ಬಕೆಟ್‌ಗೆ ಬಾಲ್ ಹಾಕುವ ಸ್ಪರ್ಧೆ ಹಾಗೂ 2 ರಿಂದ 4 ವರ್ಷದ ಪುಟಾಣಿಗಳಿಗೆ ಗೋಲಿ ಹೆಕ್ಕುವ ಹಾಗೂ ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.