ಸಹರಾ ಫ್ರೆಂಡ್ಸ್ ತಂಡದಿಂದ ವೃದ್ಧಾಶ್ರಮಕ್ಕೆ ತಟ್ಟೆ, ಲೋಟ ಕೊಡುಗೆ
ಸಹರಾ ಫ್ರೆಂಡ್ಸ್ ತಂಡದಿಂದ ಆರ್ಜಿ ಗ್ರಾಮದ ಶಕ್ತಿ ವೃದ್ಧಾಶ್ರಮಕ್ಕೆ ಊಟದ ಸಲಕರಣೆಗಳ ಕೊಡುಗೆ ನೀಡಲಾಯಿತು. ಕೆ.ಬಿ.ಸುಮೇಶ್, ಇ. ಮಂಜುನಾಥ್,ಲವೀಸ್, ಸಮಿಉಲ್ಲಾ, ಸಂಶು, ಲೋಕೇಶ್, ಅಜಮಲ್, ಶಿವರಾಂ ಇದ್ದರು.
Published on:
Copied
Follow Us
ವಿರಾಜಪೇಟೆ:ಸಹರಾ ಫ್ರೆಂಡ್ಸ್ ವಿರಾಜಪೇಟೆ ತಂಡದ ವತಿಯಿಂದ ವಿರಾಜಪೇಟೆಯ ಆರ್ಜಿ ಗ್ರಾಮದಲ್ಲಿರುವ ಶಕ್ತಿ ವೃದ್ಧಾಶ್ರಮಕ್ಕೆ ಇತ್ತೀಚೆಗೆ ದಾನಿಗಳ ಸಹಾಯದಿಂದ ಊಟದ ತಟ್ಟೆ, ಲೋಟ, ಇನ್ನಿತರ ಸಲಕರಣೆಗಳನ್ನು ನೀಡಲಾಯಿತು.
ಸಹರಾ ಫ್ರೆಂಡ್ಸ್ ಅಧ್ಯಕ್ಷ ಮೋಸಿನ್ ಮಾತನಾಡಿ, ಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕ ಹನುಮಂತು ಊಟದ ತಟ್ಟೆ ಇನ್ನಿತರ ಸಲಕರಣೆಗಳು ಬೇಕು ಎಂದು ಮನವಿ ಮಾಡಿದ್ದರು. ಅದರಂತೆ ದಾನಿಗಳಾದ ಅಜಮಲ್ ಮತ್ತು ಮಂಜಣ್ಣ ಅವರ ಸಹಾಯದಿಂದ ವೃದ್ಧಾಶ್ರಮ ನಿವಾಸಿಗಳಿಗೆ ಊಟದ ಸಲಕರಣೆಗಳನ್ನು ನೀಡಲು ಸಾಧ್ಯವಾಯಿತು ಎಂದರು.
ಸಂಸ್ಥೆಯ ಸಂಸ್ಥಾಪಕ ರೌಫ್ ಮಾತನಾಡಿ, ಸಹರಾ ಸಂಸ್ಥೆ ಕಳೆದ ಆರು ತಿಂಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಒಂದಿಲ್ಲೊಂದು ಕಾರ್ಯವನ್ನು ದಾನಿಗಳ ಸಹಾಯದಿಂದ ಸೇವಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ ಎಂದರು.
ಬೆಟೋಳಿ ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಆಯಿಷಾ ಮಾತಾನಾಡಿದರು. ಸಹರಾ ಫ್ರೆಂಡ್ಸ್ ಕಾರ್ಯದರ್ಶಿ ಅನಿಲ್ ಅಪ್ಪು, ಸದಸ್ಯರಾದ ಕೆ.ಬಿ.ಸುಮೇಶ್, ಇ.ಮಂಜುನಾಥ್, ಲವೀಸ್, ಸಮಿಉಲ್ಲಾ, ಸಂಶು, ಲೋಕೇಶ್, ದಾನಿಗಳಾದ ಅಜಮಲ್, ಶಿವರಾಂ ಹಾಜರಿದ್ದರು.