ಉಮ್ಮತ್ತಾಟ್ ಪ್ರದರ್ಶನ, ಆಟೋಟ ಸ್ಪರ್ಧೆ, ಹಬ್ಬಗಳನ್ನು ಆಚರಿಸುವುದು ಹಾಗೂ ವಿರಾಜಪೇಟೆ ಕೊಡವ ಸಮಾಜವು ಒಕ್ಕೂಟಕ್ಕೆ ನೀಡುತ್ತಿರುವ ಸಹಕಾರವನ್ನು ಶ್ಲಾಘಿಸಲಾಯಿತು. ಒಕ್ಕೂಟದ ಬೈಲ, ವಂತಿಕೆಯ ಬಗ್ಗೆ ಹಾಗೂ ಸಮಾಜ ಸೇವೆಯಲ್ಲಿ ಒಕ್ಕೂಟದ ಪಾಲ್ಗೊಳ್ಳುವಿಕೆಯ ಕುರಿತು ಚರ್ಚೆ ಮಾಡಲಾಯಿತು. ಮೃತರಾದ ಒಕ್ಕೂಟದ ಸದಸ್ಯರಾದ ಬೊವ್ವೇರಿಯಂಡ ಆಶಾ ಸುಬ್ಬಯ್ಯ ಹಾಗೂ ನಾಯಕಂಡ ಬೇಬಿ ಚಿಣ್ಣಪ್ಪ ಅವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.