ಸಂಜೀವಿನಿ ಒಕ್ಕೂಟ ಬೇಟೋಳಿ ಇದರ ಸಹಯೋಗದಲ್ಲಿ 2025-26ನೇ ಸಾಲಿನ ದ್ವಿತೀಯ ಸಂತೆ ಮೇಳ ಕಾರ್ಯಕ್ರಮವನ್ನು ಪಿಡಿಒ ಬಿ.ಮಣಿ ಉದ್ಘಾಟಿಸಿದರು. ಪ್ರಮೀಳಾ, ತುಳಸಿ, ವಿದ್ಯಾ, ಶೋಭಾ, ಮುತ್ತಮ್ಮ ಇತರರಿದ್ದರು.
Published on:
Copied
Follow Us
ವಿರಾಜಪೇಟೆ: ಕೊಡಗು ಜಿಲ್ಲಾ ಪಂಚಾಯಿತಿ, ಬೇಟೋಳಿ ಗ್ರಾಮ ಪಂಚಾಯಿತಿ, ಸಂಜೀವಿನಿ ಒಕ್ಕೂಟ ಬೇಟೋಳಿ ಸಹಯೋಗದಲ್ಲಿ ಬುಧವಾರ 2025-26ನೇ ಸಾಲಿನ ದ್ವಿತೀಯ ಸಂತೆ ಮೇಳ ಕಾರ್ಯಕ್ರಮವನ್ನು ಬೇಟೋಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಬೇಟೋಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ.ಮಣಿ ಉದ್ಘಾಟಿಸಿದರು.
ಬಿ.ಮಣಿ ಮಾತನಾಡಿ, ಸಂಜೀವಿನಿ ಒಕ್ಕೂಟದ ವತಿಯಿಂದ ಎರಡನೇ ಬಾರಿ ಮಾಸಿಕ ಸಂತೆ ಮೇಳ ಹಮ್ಮಿಕೊಂಡಿರುವುದು ಸಂತಸದ ವಿಚಾರವಾಗಿದೆ. ಯಾವುದೇ ಕೆಲಸವನ್ನು ನಾವು ಮಾಡಬೇಕಾದಲ್ಲಿ ನಮ್ಮಲ್ಲಿ ಆತ್ಮ ವಿಶ್ವಾಸವಿರಬೇಕು. ಹುರುಪು ಹಾಗೂ ದೃಢ ಸಂಕಲ್ಪದಿಂದ ಯಶಸ್ಸನ್ನು ಕಾಣಬಹುದು ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಉದ್ದೇಶವೆಂದರೆ ಮಹಿಳೆಯರು ಸ್ವ ಉದ್ಯೋಗದಿಂದ ಸಮಾಜದ ಮುಖ್ಯ ವಾಹಿನಿಗೆ ಬಂದು ಸ್ವಾವಲಂಬಿ ಜೀವನ ನಡೆಸುವುದಾಗಿದೆ ಎಂದರು. ಸಂತೆ ಮೇಳದಲ್ಲಿ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವ್ಯ ಸ್ವ ಸಹಾಯ ಸಂಘ ಹೆಗ್ಗಳ, ವಿದ್ಯಾ ಸ್ವ ಸಹಾಯ ಸಂಘ ಬೇಟೋಳಿ, ವಿನಯ ಸ್ವ ಸಹಾಯ ಸಂಘ ಬೇಟೋಳಿ, ಶ್ರೀಲಕ್ಷ್ಮೀ ಸ್ವ ಸಹಾಯ ಸಂಘ ಬೇಟೋಳಿ, ನಂದಾದೀಪ ಸ್ವ ಸಹಾಯ ಸಂಘ ರಾಮನಗರ, ಕೀರ್ತಿ ಸ್ವ ಸಹಾಯ ಸಂಘ ರಾಮನಗರ ಹಾಗೂ ಇನ್ನಿತರ ಸ್ವ ಸಹಾಯ ಸಂಘಗಳು ಭಾಗವಹಿಸಿದ್ದವು.
ಸಂತೆಯಲ್ಲಿ ಸೀರೆ, ತರಕಾರಿ, ಹಣ್ಣು-ಹಂಪಲುಗಳು, ಮಸಾಲ ಪದಾರ್ಥಗಳು, ಪಾನಿಪೂರಿ, ಸಿಹಿ ತಿಂಡಿಗಳು ಹಾಗೂ ಆರೋಗ್ಯ ವರ್ಧಕ ಉತ್ಪನ್ನಗಳ ವ್ಯಾಪಾರ ನಡೆಯಿತು.
ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರಮೀಳಾ, ಕಾರ್ಯದರ್ಶಿ ತುಳಸಿ, ವಿದ್ಯಾ, ಶೋಭಾ, ಮುತ್ತಮ್ಮ, ಬೇಟೋಳಿ ಗ್ರಾಮ ಪಂಚಾಯಿತಿ ಗ್ರಾಮೀಣ ಮರು ವಸತಿ ಕಾರ್ಯಕರ್ತೆ ಆಯಿಷಾ, ಸಂಜೀವಿನಿ ಒಕ್ಕೂಟದ ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.