ಮಕ್ಕಳಿಗೆ ಸಾಮರಸ್ಯದ ಪಾಠ ಕಲಿಸಬೇಕು

ವಿರಾಜಪೇಟೆಯ ಗುರುಕುಲಂ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಜೀವನ ಜ್ಯೋತಿ ಸಂಸ್ಥೆಯ ಸ್ಥಾಪಕರಾದ ಅಜಯ್ ನಾರಾಯಣ ರಾವ್ ಅವರನ್ನು ಸನ್ಮಾನಿಸಲಾಯಿತು. ಅಕ್ಕಮ್ಮ ಧನುಕುಮಾರ್ , ಪ್ರವೀಣ್ ಉತ್ತಪ್ಪ  ಇತರರು ಇದ್ದರು.
ವಿರಾಜಪೇಟೆಯ ಗುರುಕುಲಂ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಜೀವನ ಜ್ಯೋತಿ ಸಂಸ್ಥೆಯ ಸ್ಥಾಪಕರಾದ ಅಜಯ್ ನಾರಾಯಣ ರಾವ್ ಅವರನ್ನು ಸನ್ಮಾನಿಸಲಾಯಿತು. ಅಕ್ಕಮ್ಮ ಧನುಕುಮಾರ್ , ಪ್ರವೀಣ್ ಉತ್ತಪ್ಪ ಇತರರು ಇದ್ದರು.
Published on
ವಿರಾಜಪೇಟೆ : ಮಕ್ಕಳಿಗೆ ಒಟ್ಟು ಕುಟುಂಬದಲ್ಲಿ ಬದುಕುವಂತೆ ಸಾಮರಸ್ಯದ ಪಾಠ ಕಲಿಸಬೇಕು ಎಂದು ಜೀವನ ಜ್ಯೋತಿ ಸಂಸ್ಥೆಯ ಸ್ಥಾಪಕ ಅಜಯ್ ನಾರಾಯಣ ರಾವ್ ಹೇಳಿದರು.
ದೈವಜ್ಞ ಬ್ರಾಹ್ಮಣರ ಸಮಾಜದ ಸಭಾಂಗಣದಲ್ಲಿ ವಿಜಯನಗರದ ಚೋಟಾ ಚಾಂಪ್ಸ್ ಗುರುಕುಲಂ ಶಾಲೆ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು. ಕೂಡು ಕುಟುಂಬದ ವ್ಯವಸ್ಥೆ ಇದ್ದಾಗ ಮಕ್ಕಳಿಗೆ ಗುರು ಹಿರಿಯರು ಸಂಸ್ಕಾರ ಹೇಳಿಕೊಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಕೂಡು ಕುಟುಂಬ ಮಾಯವಾಗಿದೆ. ಹಾಗಾಗಿ ವೃದ್ಧಾಶ್ರಮಗಳು ಜಾಸ್ತಿಯಾಗುತ್ತಿದೆ ಎಂದರು. ಕುಟುಂಬದಲ್ಲಿ ಸಾಮರಸ್ಯ ಇಲ್ಲದ ಕಾರಣ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಮಕ್ಕಳಿಗೆ ಮುಖ್ಯವಾಗಿ ಸಂಸ್ಕಾರ ಬೇಕಾಗುತ್ತದೆ. ಹಾಗಾಗಿ ಅವರಿಗೆ ನಮ್ಮ ಸಂಸ್ಕೃತಿ ಕಲಿಸಬೇಕು. ಒಳ್ಳೆಯತನ ಕಲಿತಲ್ಲಿ ಸಮಾಜಕ್ಕೆ ಒಳಿತನ್ನು ನೀಡಬಹುದು ಎಂದರು.
ಸಮಾಜ ಸೇವಕ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಮಾತನಾಡಿ, ಮಕ್ಕಳಿಗೆ ಜಾತಿ ಅಥವಾ ರಾಜಕೀಯ ವಿಷಯಗಳ ಬಗ್ಗೆ ವಿಷ ಬೀಜಗಳನ್ನು ಬಿತ್ತಬಾರದು. ಆಚಾರ ವಿಚಾರ, ಸಂಸ್ಕೃತಿ, ಸಂಸ್ಕಾರವನ್ನು ಕಲಿಸಬೇಕು. ಮಕ್ಕಳ ಮುಂದೆ ಪಾಲಕರು ಜಗಳ ಆಡಬಾರದು. ಮಕ್ಕಳು ವಿಭಿನ್ನ ಕೌಶಲಗಳನ್ನು ಹೊಂದಿರುತ್ತಾರೆ. ಅವರನ್ನು ಪ್ರೋತ್ಸಾಹಿಸಬೇಕು ಎಂದರು.ಗುರುಕುಲಂನ ಮುಖ್ಯಸ್ಥ ಧನು ಕುಮಾರ್ ಮಾತನಾಡಿದರು. ಪ್ರಾಂಶುಪಾಲರಾದ ಚಂಗೇಟೀರ ಅಕ್ಕಮ್ಮ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ಹಳೆಯ ಕಾಲದ ನೋಟುಗಳು ಹಾಗೂ ನಾಣ್ಯಗಳ ಸಂಗ್ರಹಕಾರ ಅಜಯ್ ಅವರಿಗೆ ಸನ್ಮಾನಿಸಲಾಯಿತು. ಪುಟ್ಟ ಮಕ್ಕಳ ನೃತ್ಯ ಪ್ರದರ್ಶನ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net