ವಿದ್ಯೆಗಿಂತ ಮಿಗಿಲಾದ ದೇಣಿಗೆ ಮತ್ತೊಂದಿಲ್ಲಾ

ನೂತನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಂಕುಸ್ಥಾಪನೆ  ಶಾಸಕ ಎ ಎನ್ ಪೊನ್ನಣ್ಣ ನೆರೆವೆರಿಸಿದರು.  ಪರಮೇಶ್ವರ  , ರಂಜಿ ಪೂಣಚ್ಚ  , ರಾಮಯ್ಯ , ಮೀನಾಕ್ಷಿ  , ದಿಲನ್ ,ಜಯಂತಿ ಇದ್ದರು.
ನೂತನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಂಕುಸ್ಥಾಪನೆ ಶಾಸಕ ಎ ಎನ್ ಪೊನ್ನಣ್ಣ ನೆರೆವೆರಿಸಿದರು. ಪರಮೇಶ್ವರ , ರಂಜಿ ಪೂಣಚ್ಚ , ರಾಮಯ್ಯ , ಮೀನಾಕ್ಷಿ , ದಿಲನ್ ,ಜಯಂತಿ ಇದ್ದರು.
Published on
ವಿರಾಜಪೇಟೆ : ಮನುಜನ ಜೀವನದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಸರ್ವರೂ ಶಿಕ್ಷಿತರಾಗಬೇಕು ಶಿಕ್ಷಿತ ಸಮಾಜ ನಿರ್ಮಾಣವಾಗಬೇಕು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಬದ್ದವಾಗಿದೆ ಎಂದು ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕ ಸರ್ಕಾರ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು, ವತಿಯಿಂದ ವಿರಾಜಪೇಟೆ ತಾಲೂಕು ಕೆದಮುಳ್ಳೂರು ತೋರ ಗ್ರಾಮ ಸರ್ವೆ ಸಂಖ್ಯೆ ೫೧೧/೧ ೫. ಎಕ್ರೆ ೨೦ ಸೆಂಟು ಸ್ಥಳದಲ್ಲಿ ೧೬ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಂಕುಸ್ಥಾಪನೆ ಕಾರ್ಯಕ್ರಮ ಶನಿವಾರ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿ ಶಾಸಕರು. ಶಿಕ್ಷಣ ಜೀವನ ಸುಧಾರಣೆಯ ಘಟ್ಟವಾಗಿದೆ. ಶಿಕ್ಷಣದಿಂದ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳಿಗೆ ಉತ್ತಮ ವಿಧ್ಯಾಬ್ಯಾಸ ನೀಡುವ ಚಿಂತನೆಯಲ್ಲಿ ಸರ್ಕಾರವು ಏಕಲವ್ಯ ವಸತಿ ಶಾಲೆ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪ್ರಾರಂಭಿಸಿತು. ತಿತಿಮತಿ ಹೋಬಳಿಯ ಹುದಿಕೇರಿ ಮತ್ತು ವಿರಾಜಪೇಟೆ ಎರಡು ವಸತಿ ಶಾಲೆಗೆ ಬೇಡಿಕೆಯನ್ನು ಇಟ್ಟಿದ್ದೇವು. ಸುಸಜ್ಜಿತ ಕಟ್ಟಡ ನಿರ್ಮಾಣವಾಗುವ ವರೆಗೆ ಸರ್ವೋದಯ ಶಾಲಾ ಕಟ್ಟಡದಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ ಇದನ್ನು ಮನಗಂಡು ಸಮಾಜ ಕಲ್ಯಾಣ ಸಚಿವರಾಗಿರುವ ಹೆಚ್.ಸಿ. ಮಹದೇವಪ್ಪ ಅವರಲ್ಲಿ ಮನವಿ ಸಲ್ಲಿಸಲಾಗಿತ್ತು. ಮನವಿ ಮೇರೆಗೆ ಶಾಲಾ ಕಟ್ಟಡಕ್ಕೆ ಅನುಧಾನ ಬಿಡುಗಡೆಗೊಳಿಸಿದ್ದಾರೆ. ಒತ್ತುವರಿಯಾಗಿದ್ದ ಸರ್ಕಾರಿ ಸ್ಥಳವನ್ನು ಗುರುತಿಸಿ ಒತ್ತುವರಿ ತೆರವುಗೊಳಿಸಿ ಪ್ರಸ್ತುತ ಸ್ಥಳದಲ್ಲಿ ೧೬ ಕೋಟಿ ವೆಚ್ಚದ ವಸತಿ ಶಾಲೆ ಕಟ್ಟಡ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರೆವೆರಿಸಲಾಗಿದೆ. ಎಂದು ಹೇಳಿದರು. ಒತ್ತುವರಿ ಸ್ಥಳ ತೆರವುಗೊಳಿಸಲು ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಕೆ.ಡಿ.ಪಿ ಸದಸ್ಯರಾದ ಪ್ರಶಾಂತ್ ಉತ್ತಪ್ಪ ಮತ್ತು ವಿಜಯ್ ಹಾಗೂ ಇತರರ ಶ್ರಮದಿಂದ ಸಾಧ್ಯವಗಿರುವುದು ಶ್ಲಾಘನೀಯ ಎಂದು ಹೇಳಿದರು. ಗುಣಮಟ್ಟದ ಕಾಮಗಾರಿ ನಡೆದು ಉತ್ತಮ ಕಟ್ಟಡ ನಿರ್ಮಾಣ ಮಾಡುವಂತೆ ಆಭಿಯಂತರರು ಮತ್ತು ಗುತ್ತಿಗೆಧಾರರಿಗೆ ಹೇಳಿದರು.
ಕಾರ್ಯಕ್ರಮ ಉದ್ದೇಶಿಸಿ ಕೆದಮುಳ್ಳೂರು ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಕೆ.ಡಿ.ಪಿ ಸದಸ್ಯರಾದ ಮಾಳೇಟಿರ ಪ್ರಶಾಂತ್ ಉತ್ತಪ್ಪ ಅವರು ಮಾತನಾಡಿ ಜಿಲ್ಲೆಯಲ್ಲೇ ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ಗ್ರಾಮ ಕೆದಮುಳ್ಳೂರು ಗ್ರಾಮ ಪಂಚಾಯಿತಿ, ತೋರ ಗ್ರಾಮದಲ್ಲಿ ೨೦೧೯ ರಲ್ಲಿ ಸಂಭವಿಸಿದ ಜಲಪ್ರಳಯದಿಂದ ತೋರ ಗ್ರಾಮ ಬೆಳಕಿಗೆ ಬಂದಿತು. ಕುಗ್ರಾಮ ಹೆಸರು ಹೊಂದಿದ್ದ ಗ್ರಾಮ ಇಂದು ಶಾಸಕರ ಮನೋಭಿಲಾಶೆಯಿಂದ ಅಭಿವೃದ್ದಿಪಥದಲ್ಲಿರುವ ಗ್ರಾಮ ಎಂದಿನಿಸಿಕೊಂಡಿದೆ. ವಸತಿ ಶಾಲೆ ಕಟ್ಟಡಕ್ಕೆ ಅನುಧಾನ ಒದಗಿಸಿ ಗ್ರಾಮಸ್ಥರ ಕನಸು ನನಸಾಗಿಸುತ್ತಿರುವ ಶಾಸಕರಿಗೆ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಗ್ಯಾರೇಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷರಾದ ತೀತಿರ ಧರ್ಮಜಾ ಉತ್ತಪ್ಪ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಉಪದ್ಯಕ್ಷರಾದ ಎಂ.ಎಂ ಪರಮೇಶ್ವರ, ಸದಸ್ಯರಾದ ಕೆ.ರಾಮಯ್ಯ, ಮೀನಾಕ್ಷಿ, ಪಿ.ಜಯಂತಿ, ವಿರಾಜಪೇಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಪಟ್ಟಡ ರಂಜಿ ಪೂಣಚ್ಚ, ಉಪ ಕಾರ್ಯನಿರ್ವಾಹಕ ಅಭಿಯಂತರ ಲಿಂಗರಾಜ್, ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net