ಸನಾತನ ಧರ್ಮವೆಂಬುದು ನಿತ್ಯ ನೂತನ ಧರ್ಮ .

  ವಿರಾಜಪೇಟೆಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಹರೀಶ್ ಸರಳ ಮಾತನಾಡಿದರು . ಅಂಜಪರವಂಡ ಅನೀಲ್ ಮಂದಣ್ಣ , ಪಟ್ಟಡ ರೀನಾ ಪ್ರಕಾಶ್,   ಸಹ ಸಂಯೋಜಕ ಅಜಯ್ ರಾವ್, ಪ್ರದೀಪ್ ರೈ, ಕೂತಂಡ ಸಚಿನ್, ಸುರೇಶ್ ಚಾಮಿ, ಸಹ ಸಂಚಾಲಕ ಹೇಮಂತ್,  ಅಮ್ಮಣಿ ಚಂಡ ರಂಜನ್ ನಂಜಪ್ಪ, ಸಹ ಖಜಾಂಚಿ ವಿನೋದ್, ಕೋಶಾಧ್ಯಕ್ಷ ದುಶ್ಯಂತ್ ರಾವ್ ಇದ್ದರು.
ವಿರಾಜಪೇಟೆಯಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮವನ್ನು ಉದ್ದೇಶಿಸಿ ಹರೀಶ್ ಸರಳ ಮಾತನಾಡಿದರು . ಅಂಜಪರವಂಡ ಅನೀಲ್ ಮಂದಣ್ಣ , ಪಟ್ಟಡ ರೀನಾ ಪ್ರಕಾಶ್, ಸಹ ಸಂಯೋಜಕ ಅಜಯ್ ರಾವ್, ಪ್ರದೀಪ್ ರೈ, ಕೂತಂಡ ಸಚಿನ್, ಸುರೇಶ್ ಚಾಮಿ, ಸಹ ಸಂಚಾಲಕ ಹೇಮಂತ್, ಅಮ್ಮಣಿ ಚಂಡ ರಂಜನ್ ನಂಜಪ್ಪ, ಸಹ ಖಜಾಂಚಿ ವಿನೋದ್, ಕೋಶಾಧ್ಯಕ್ಷ ದುಶ್ಯಂತ್ ರಾವ್ ಇದ್ದರು.
Published on
ವಿರಾಜಪೇಟೆ ಹಿಂದೂ ಧರ್ಮವು ಸನಾತನ ಧರ್ಮವಾಗಿದ್ದು ಇದನ್ನು ಎಂದಿಗೂ ಯಾರಿಂದಲೂ ನಾಶಪಡಿಸಲು ಸಾಧ್ಯವಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗೋ ಸೇವಾ ಪ್ರಮುಖ್ ಹರೀಶ್ ಸರಳಾಯರವರು ಹೇಳಿದರು. ವಿರಾಜಪೇಟೆ ತಾಲೂಕು ಮೈದಾನದಲ್ಲಿ ಬುಧವಾರ ಜರುಗಿದ ಹಿಂದೂ ಸಂಗಮ ಪ್ರಯುಕ್ತದ ಬೃಹತ್ ಶೋಭಾಯಾತ್ರೆ ಪ್ರಯುಕ್ತದ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ನಮ್ಮ ದೇಶದ ಮೇಲೆ ಸಂಸ್ಕೃತಿಯ ಮೇಲೆ ಆದೆಷ್ಟೋ ಪರಕೀಯರು ದಾಳಿ ನಡೆಸಿದರೂ ಈ ಧರ್ಮವನ್ನು ಎಂದಿಗೂ ನಾಶಮಾಡಲಾಗಲಿಲ್ಲ. ನಿತ್ಯ ನೂತನವಾದ ಧರ್ಮ ನಮ್ಮದು.
ಹಿಂದೂಗಳಲ್ಲಿ ಹಿಂದುತ್ವ ಹಾಗೂ ಹಿಂದೂ ಧರ್ಮದ ಕುರಿತ ಅಜ್ಞಾನವಿದೆ .ಈ ಅಜ್ಞಾನವನ್ನು ಹೋಗಲಾಡಿಸುವುದರೊಂದಿಗೆ ಎಲ್ಲರಲ್ಲಿಯೂ ಧರ್ಮ ಹಾಗೂ ದೇಶದ ಕುರಿತ ಅಭಿಮಾನವನ್ನು ಬೆಳೆಸಬೇಕು .ನಮ್ಮಲ್ಲಿ ಮರೆತು ಹೋದ ಸಮಾಜದ ಅಂಗವಾದ ಹಿಂದುತ್ವವನ್ನು ಬೆಳೆಸಬೇಕು. ಇದರೊಂದಿಗೆ ರಾಷ್ಟ್ರಭಕ್ತಿಯು ಕೊಡಗಿನ ಜನರ ರಕ್ತದ ಕಣಕಣದಲ್ಲಿದ್ದು ಇದು ಇನ್ನಷ್ಟು ಇಮ್ಮಡಿಗೊಳ್ಳಲಿ ಎಂದರು
ಮೈಸೂರಿನ ಬೃಂದಾವನ ಆಸ್ಪತ್ರೆಯ ವೈದ್ಯರಾದ ಡಾ.ಮಾತಂಡ ಅಯ್ಯಪ್ಪನವರು ಮಾತನಾಡಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ನೂರು ವರ್ಷಗಳಿಂದ ಸುದೀರ್ಘವಾಗಿ ಬೆಳೆದು ಬಂದ ಹಾದಿಯನ್ನು ವಿವರಿಸಿ ಹಿಂದೂಗಳು ಜಾಗೃತರಾಗಿ ಕೂಡಿ ದೇಶ ಕಟ್ಟುವ ಕೆಲಸವನ್ನು ಮಾಡಬೇಕು. ನಾವೆಲ್ಲರೂ ಹಿಂದುತ್ವಕ್ಕಾಗಿ ಹೋರಾಟವನ್ನು ನಡೆಸಬೇಕು. ಇಂದಿನ ಹಿಂದೂ ಸಂಗಮ ಕಾರ್ಯಕ್ರಮದ ಆಯೋಜನೆಯು ಯಾರನ್ನು ವಿರೋಧಿಸುವ ಉದ್ದೇಶದಿಂದ ನಡೆಯುತ್ತಿಲ್ಲ. ಬದಲಿಗೆ ನಮ್ಮನ್ನು ನಾವು ಜಾಗೃತಗೊಳಿಸುವುದರೊಂದಿಗೆ, ಹಿಂದುಗಳನ್ನು ಒಗ್ಗೂಡಿಸುವುದರೊಂದಿಗೆ ನಮ್ಮಲ್ಲಿರುವ ಕೀಳು ಮನಸ್ಥಿತಿಯನ್ನು ಹೋಗಲಾಡಿಸುವ ಉದ್ದೇಶದಿಂದಾಗಿ ಈ ವಿರಾಟ್ ಹಿಂದೂ ಸಂಗಮ ಆಯೋಜನೆಗೊಂಡಿದೆ . ನಮ್ಮ ಹಿಂದಿನವರು ಮಾಡಿದ ಲೋಪದೋಷಗಳನ್ನು ಅರಿತು ಇನ್ನು ಮುಂದಾದರೂ ಜಾತಿ ಮತ ಭೇದವಿಲ್ಲದೆ ನಾವೆಲ್ಲಾ ಹಿಂದುಗಳು ಎಂದು ಒಗ್ಗೂಡಬೇಕಿದೆ ಎಂದರು.
ಹಿಂದೂ ಸಂಗಮ ಆಯೋಜನಾ ಸಮಿತಿ ವಿರಾಜಪೇಟೆ ತಾಲೂಕು ಅಧ್ಯಕ್ಷ ಕುಪ್ಪಂಡ ರಾಜೀವ್ ಕಾರ್ಯಪ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಆಯೋಜನ ಸಮಿತಿಯ ತಾಲೂಕು ಉಪಾಧ್ಯಕ್ಷರಾದ ಚೇಂದಿರ ಬೋಪಣ್ಣ ಮಾತನಾಡಿ ಹಿಂದುತ್ವ ಮತ್ತು ರಾಷ್ಟ್ರಭಕ್ತಿಯ ವಿಚಾರಗಳು ಮನೆಗಳಿಂದ ಆರಂಭವಾದಾಗ ಮನಗಳಲ್ಲಿ ಸುದೀರ್ಘವಾಗಿ ಉಳಿಯಲು ಸಾಧ್ಯ. ನಮ್ಮಲ್ಲಿ ಪಂಚ ಪರಿವರ್ತನೆಗಳನ್ನು ಅಳವಡಿಸಿಕೊಂಡು ಭೇದಭಾವ ಮರೆತು ನಮ್ಮಲ್ಲಿ ಸಮಾನತೆ ತರಬೇಕು. ಪಾಶ್ಚಾತ್ಯ ಸಂಸ್ಕೃತಿ ಪ್ರಭಾವಕ್ಕೆ ಒಳಗಾಗದೆ ನಮ್ಮ ಆಚಾರ, ವಿಚಾರ ಸಂಸ್ಕೃತಿಯನ್ನು ಪಾಲಿಸುವುದರೊಂದಿಗೆ ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ನಮ್ಮಿಂದ ಆಗಬೇಕಿದೆ ಎಂದರು .
ವೇದಿಕೆಯಲ್ಲಿ ಹಿಂದೂ ಸಂಗಮ ಕಾರ್ಯಕ್ರಮದ ಸಂಯೋಜಕಿ ಮನೆಯಪಂಡ ಕಾಂತಿ ಸತೀಶ್ , ಸಂಯೋಜಕ ಅಂಜಪರವಂಡ ಅನೀಲ್ ಮಂದಣ್ಣ
ಪಟ್ಟಡ ರೀನಾ ಪ್ರಕಾಶ್, ಸಹ ಸಂಯೋಜಕ ಅಜಯ್ ರಾವ್, ಪ್ರದೀಪ್ ರೈ, ಕೂತಂಡ ಸಚಿನ್, ಸುರೇಶ್ ಚಾಮಿ, ಸಹ ಸಂಚಾಲಕ ಹೇಮಂತ್, ಖಜಾಂಚಿ ಅಮ್ಮಣಿ ಚಂಡ ರಂಜನ್ ನಂಜಪ್ಪ, ಸಹ ಖಜಾಂಚಿ ವಿನೋದ್, ಕೋಶಾಧ್ಯಕ್ಷ ದುಶ್ಯಂತ್ ರಾವ್, ಮತ್ತಿತರರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ತೆಲುಗರ ಬೀದಿಯ ಮಾರಿಯಮ್ಮ ಗುಡಿಯಿಂದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳಿಂದ ಉಮ್ಮತಾಟ್ , ಭಜನೆ ಕುಣಿತ , ಹನುಮಂತನ ಸ್ತಬ್ದ ಚಿತ್ರ, ವಾದ್ಯಗೋಷ್ಠಿ ಯೊಂದಿಗೆ ಶೋಭಾಯಾತ್ರೆಯು ಆರಂಭವಾಯಿತು .ಅದೇ ಸಮಯಕ್ಕೆ ಮೀನುಪೇಟೆ ಮುತ್ತಪ್ಪ ದೇವಾಲಯದಿಂದ ಒಂದು ತಂಡ, ಪಂಜರುಪೇಟೆ ಸರ್ವೋದಯ ಕಾಲೇಜಿನಿಂದ ಮತ್ತೊಂದು ತಂಡ ಏಕಕಾಲದಲ್ಲಿ ಹೊರಟು ಮೀನುಪೇಟೆ ಶೋಭಾಯಾತ್ರೆ ಮತ್ತು ಪಂಜರುಪೇಟೆ ಶೋಭಾಯಾತ್ರೆಗಳು ಪಟ್ಟಣದ ಮಟನ್ ಮಾರ್ಕೆಟ್ ಬಳಿ ಸಮಾಗಮಗೊಂಡಿತು. ಮೂರು ಕಡೆಗಳಿಂದ ಹೊರಟ ಶೋಭಾಯಾತ್ರೆ ಡೊಡಟ್ಟಿ ಚೌಕಿ ಬಳಿ ಮಹಾ ಸಂಗಮಗೊಂಡು ಎಫ್‍ಎಂಸಿ ರಸ್ತೆಯ ಮೂಲಕ ತಾಲೂಕು ಮೈದಾನದಲ್ಲಿ ಸಹಸ್ರಾರು ಜನರು ಹಿಂದು ಬಾಂಧವರು ಪಾಲ್ಗೊಂಡಿದ್ದರು. ಸಹಸ್ರಾರು ಹಿಂದೂ ಬಾಂಧವರು ಕೇಸರಿ ಧ್ವಜಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net