ವಿಬಿ ಜಿ ರಾಮ್ ಜಿ ತರಬೇತಿ ಕಾರ್ಯಗಾರ

ವಿಬಿ ಜಿ ರಾಮ್ ಜಿ ಯೋಜನೆಯ ಬಗ್ಗೆ ನಡೆದ ತರಬೇತಿ ಕಾರ್ಯಗಾರದಲ್ಲಿ ಮಾಸ್ಟರ್ ಟ್ರೈನರ್ ಸುಮೇಶ್ ಯೋಜನೆಯ ಮಾಹಿತಿ ನೀಡಿದರು. ರಾಕೇಶ್, ವಿವಿಧ ಪಂಚಾಯಿತಿಗಳ ಪಿಡಿಒ, ಡಾಟಾ ಎಂಟ್ರಿ ಅಪರೇಟರ್ಸ್, ನರೇಗಾ ತಾಂತ್ರಿಕ ಸಹಾಯಕರು, ನರೇಗಾ ಸಿಬ್ಬಂದಿ ಇದ್ದರು.

Published on
ಕುಶಾಲನಗರ:
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಗೆ ಪರ್ಯಾಯವಾಗಿ ಹೊಸ ಯೋಜನೆ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಾರ್ ಅಂಡ್ ಅಜೀವಿಕ್ ಮಿಷನ್ (ವಿಬಿ ಜಿ ರಾಮ್ ಜಿ) ಜುಲೈ 1 ರಿಂದ ಆರಂಭವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕುಶಾಲನಗರ ತಾಲೂಕು ಕೂಡುಮಂಗಳೂರು ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಒಂದು ದಿನದ ತರಬೇತಿ ಕಾರ್ಯಗಾರ ಏರ್ಪಡಿಸಲಾಗಿತ್ತು.
ಮಾಸ್ಟರ್ ಟ್ರೈನರ್‌ಗಳಾದ ಕುಶಾಲನಗರ ತಾಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ರಾಕೇಶ್ ಮತ್ತು ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಯೋಜನೆಯ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಕುಶಾಲನಗರ ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಡಾಟಾ ಎಂಟ್ರಿ ಅಪರೇಟರ್ಸ್, ಸಂಬAಧಪಟ್ಟ ನರೇಗಾ ತಾಂತ್ರಿಕ ಸಹಾಯಕರುಗಳು ಹಾಗೂ ನರೇಗಾ ಸಿಬ್ಬಂದಿ ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net