ಶನಿವಾರಸಂತೆ ವಿವಿದೆಢೆ ಸ್ವಾತಂತ್ರೃದಿನ

ಶನಿವಾರರಸಂತೆ ಆಟೋ ಚಾಲಕರ ಸಂಘದಿಂದ ಸ್ವಾತಂತ್ರೃ ದಿನ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಸದಸ್ಯ ಆದಿತ್ಯ ಗೌಡ ಧ್ವಜರೋಹಣ ಮಾಡಿದರು.
ಶನಿವಾರರಸಂತೆ ಆಟೋ ಚಾಲಕರ ಸಂಘದಿಂದ ಸ್ವಾತಂತ್ರೃ ದಿನ ದಿನಾಚರಣೆ ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಸದಸ್ಯ ಆದಿತ್ಯ ಗೌಡ ಧ್ವಜರೋಹಣ ಮಾಡಿದರು.
Published on

ಶನಿವಾರಸಂತೆ:

ಶನಿವಾರಸಂತೆ ಗ್ರಾಪಂ ಮತ್ತು ಪಟ್ಟಣದ ವಿವಿಧ ಸರ್ಕಾರಿ ಶಾಲಾ ಕಾಲೇಜು ಸೇರಿದಂತೆ ಖಾಸಗಿ ವಿದ್ಯಾಸಂಸ್ಥೆಗಳು ಹಾಗೂ ವಿವಿಧಡೆ ಶನಿವಾರ ಸ್ವಾತಂತ್ರೃದಿನ ಆಚರಿಸಲಾಯಿತು.

ಪಟ್ಟಣದ ವಿಘ್ನೇಶ್ವರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗ್ರಾಪಂ ಸದಸ್ಯ ಆದಿತ್ಯಗೌಡ ಧ್ವಜರೋಹಣ ನೆರವೇರಿದರು. ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಎನ್.ರಘು ಮಾತನಾಡಿದರು. ಆಟೋ ಚಾಲಕರ ಸಂಘದ ಅಧ್ಯಕ್ಷ ರವಿಕುಮಾರ್, ಸಂಘದ ಪ್ರಮುಖರಾದ ಚಂದ್ರು, ದುಂಡಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಸಿ.ಜೆ.ಗಿರೀಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಹರೀಶ್ ಇದ್ದರು.
ಸಕ್ರೆಡ್ ಹಾರ್ಟ್ ಶಾಲೆ: ಸಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರೋತ್ಸವ ಜರುಗಿತು. ಮಾಜಿ ಯೋಧ ಸತೀಶ್‌ಕುಮಾರ್ ಧ್ವಜರೋಹಣ ನೆರವೇರಿಸಿದರು.
ವಿದ್ಯಾಸಂಸ್ಥೆ ಪ್ರಾಂಶುಪಾಲ ರೆರೆಂಡ್ ಫಾದರ್ ಜಿಬಿ ಥಾಮಸ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಸಮಾರಂಭದಲ್ಲಿ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಫಾ.ಶಿಬಿನ್ ಮ್ಯಾಥ್ಯು, ಫಾ.ಜೇಮ್ಸ್ ವಿದ್ಯಾಸಂಸ್ಥೆ ಉಪನ್ಯಾಸಕರು, ಶಿಕ್ಷಕರು ಹಾಜರಿದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಊರುಗುತ್ತಿ ಶಾಲೆ: ಕೊಡ್ಲಿಪೇಟೆ ಸಮಿಪದ ಊರುಗುತ್ತಿ ಕ್ಯಾತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ ದಿನ ಆಚರಿಸಲಾಯಿತು. ಬ್ಯಾಡಗೊಟ್ಟ ಗ್ರಾಪಂ ಮಾಜಿ ಅಧ್ಯಕ್ಷ ಗಣೇಶ್ ಧ್ವಜರೋಹಣ ನೆರವೇರಿಸಿದರು. ಗ್ರಾಪಂ ಮಾಜಿ ಉಪಾಧ್ಯಕ್ಷೆ ದಾಕ್ಷಾಯಣಿ ಕಾಂತರಾಜ್, ಎಸ್‌ಡಿಎಂಸಿ ಉಪಾಧ್ಯಕ್ಷ ಜೀವನ್, ಗ್ರಾಮದ ಪ್ರಮುಖರಾದ, ಶಿವಗಣೇಶ್, ಶಾಲಾ ಮುಖ್ಯಶಿಕ್ಷಕಿ ರಾಧಾ, ಸಹ ಶಿಕ್ಷಕರಾದ ಚಂದ್ರಕಲಾ, ಅಶೋಕ್ ಎಸ್‌ಡಿಎಂಸಿ ಸದಸ್ಯರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net