ಕೊಡಗು ಕಲಾವಿದರ ಸಂಘದ ಸಾಮಾನ್ಯ ಸಭೆ ಮತ್ತು 2026-30ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ವಿರಾಜಪೇಟೆಯಲ್ಲಿ ಸೋಮವಾರ ನಡೆಯಿತು. ಅಧ್ಯಕ್ಷರಾಗಿ ಕಲಾವಿದ ವಾಂಚಿರ ವಿಠಲ್ ನಾಣಯ್ಯ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಈರಮಂಡ ಹರಿಣಿ ವಿಜಯ್, ಕಾರ್ಯದರ್ಶಿಯಾಗಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಖಜಾಂಚಿಯಾಗಿ ಕಾಡ್ಯಮಡ ಸುಮನ್, ಸಹ ಕಾರ್ಯದರ್ಶಿಯಾಗಿ ಮಲ್ಲಮಾಡ ಶ್ಯಾಮಲ ಸುನಿಲ್, ನಿರ್ದೇಶಕರುಗಳಾಗಿ ಸೋಮೆಯಂಡ ಎಸ್. ಬೆಳ್ಯಪ್ಪ, ಬಿದ್ದಂಡ ಉತ್ತಮ್ ಪೊನ್ನಪ್ಪ, ಕಾಳಮಂಡ ಜಗತ್, ಟಿ.ಡಿ.ಮೋಹನ್, ಚೇನಂಡ ಗಿರೀಶ್ ಪೂಣಚ್ಚ, ಪಟ್ಟಡ ಸಿ.ಧನು ರಂಜನ್ ಹಾಗೂ ಜಾದುಗಾರ್ ವಿಕ್ರಂ ಶೆಟ್ಟಿ ಆಯ್ಕೆಯಾದರು.