

ಪ್ರಮುಖ ಮುಖ್ಯಾಂಶಗಳು
ವಡ್ಡರಮಾಡು ಕೆರೆಯನ್ನು ಸಣ್ಣ ನೀರಾವರಿ ಇಲಾಖೆಯವರು ಸಂಪೂರ್ಣ ನಿರ್ಲಕ್ಷö್ಯ ಮಾಡಿದ್ದಾರೆ. ಕೆರೆ ಏರಿ ಮೇಲೆ ಬೆಳೆದಿರುವ ಕುರುಚಲು ಕಾಡು ತೆರವು ಮಾಡುವಂತೆ ಮನವಿ ಮಾಡಿದರೂ ಅದಕ್ಕೆ ಸ್ಪಂದಿಸುತ್ತಿಲ್ಲ. ಅಲ್ಲಿ ಈಗ ದಟ್ಟ ಕಾಡು ಬೆಳೆದು ಕಾಡು ಪ್ರಾಣಿಗಳಿಗೆ ವಾಸ ಸ್ಥಾನ ನಿರ್ಮಾಣ ಆಗಿದೆ. ಕರಡಿ, ಹುಲಿಗಳಿ ಅಲ್ಲಿ ತಿರುಗಾಡುತ್ತಿವೆ. ಸೋಮವಾರ ಕಾಡಾನೆಗಳೂ ಬಂದಿವೆ. ಕಳೆದ 3 ವರ್ಷಗಳಿಂದ ಗೇಟ್ ಕೂಡ ಸೋರುತ್ತಿದೆ. ಇದರಿಂದ ಕಟ್ಟೆ ಒಡೆದು ಹೋಗಬಹುದು. ನಮಗೆ ಇಲ್ಲಿರಲು ಭಯ ಆಗುತ್ತಿದೆ. ಮಾಹಿತಿ ಕೇಳಿದರೆ ಅಧಿಕಾರಿಗಳು ಬರೇ ಸುಳ್ಳು ಹೇಳುತ್ತಿದ್ದಾರೆ.
ವಡ್ಡರಮಾಡು ಕೆರೆ ಗೇಟ್ ಹಾಳಾಗಿರುವುದು ಗಮನಕ್ಕೆ ಬಂದ ಕೂಡಲೇ ತಾತ್ಕಾಲಿಕವಾಗಿ ದುರಸ್ತಿ ಮಾಡಿ ನೀರು ನಿಲ್ಲುವಂತೆ ಮಾಡಲಾಗಿದೆ. ಉಳಿದಂತೆ ಮಳೆಗಾಲ ಮುಗಿದು ಕೆರೆಯಲ್ಲಿ ನೀರು ಕಡಿಮೆ ಆದ ನಂತರ ಶಾಶ್ವತ ಕಾಮಗಾರಿ ನಡೆಸಿ ಗೇಟ್ ದುರಸ್ತಿ ಮಾಡÀಲಾಗುವುದು. ಕೆರೆ ಏರಿ ಮೇಲಿನ ಕುರುಚಲು ಕಾಡನ್ನು ಆಗಾಗ್ಗೆ ತೆರವು ಮಾಡಲಾಗುತ್ತಿರುತ್ತದೆ. ಅಲ್ಲಿ ಆಗಾಗ್ಗೆ ಕುರುಚಲು ಕಾಡು ಬರುತ್ತಲೇ ಇರುತ್ತದೆ. ಈ ವರ್ಷ ಅಲ್ಲಿ ಮೂರು ಬಾರಿ ಕಾಡು ಕಡಿಸಲಾಗಿದೆ. ಮತ್ತೆ ಕೂಡ ತೆರವು ಮಾಡಲಾಗುವುದು.