ಚಿಕ್ಕತ್ತೂರು : ಕುಶಾಲನಗರ ಸಮೀಪ ಚಿಕ್ಕತ್ತೂರು ಸರ್ಕಾರಿ ಶಾಲೆಯಲ್ಲಿ ನೂರಕ್ಕೂ ಹೆಚ್ಚು ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡಲಾಯಿತು. ಬೆಳಗ್ಗೆ ಎಂಟರಿಂದ ಸಂಜೆ ಐದರವರೆಗೆ ನಡೆದ ಈ ಕಾರ್ಯಕ್ರಮದಲ್ಲಿ ಚಿಕ್ಕತ್ತೂರು ಮತ್ತು ಸುಂದರನಗರ ಗ್ರಾಮದ ಪಾಲಕರು ಮಕ್ಕಳ ಸಮೇತ ಹಾಜರಿದ್ದು ಲಸಿಕೆ ಕೊಡಿಸಿದರು. ಚಿಕ್ಕತ್ತೂರು ವಾರ್ಡ್ ಸದಸ್ಯ ದಿನೇಶ್, ಸುಂದರ ನಗರ ವಾರ್ಡ್ ಸದಸ್ಯ ಕೆ. ಬಿ . ಶಂಷುದ್ದೀನ್, ಸುಂದರ ನಗರ ಟಿ .ಎಚ್.ಒ.ಸೌಮ್ಯಾ, ಅಂಗನವಾಡಿ ಶಿಕ್ಷಕಿ ಬೋಜಮ್ಮ, ಚಿಕ್ಕತ್ತೂರು ಅಂಗನವಾಡಿ ಶಿಕ್ಷಕಿ ಸುಶೀಲಾ, ಆಶಾ ಕಾರ್ಯಕರ್ತೆ ಸುಮಿತ್ರಾ ಭಾಗವಹಿಸಿದ್ದರು.