ಕಾರ್ಯಕ್ರಮದ ಆರಂಭದಲ್ಲಿ ಅತಿಥಿಗಳು ಮಧುವನ, ಪಾಲಿಹೌಸ್ ಹಾಗೂ ತೆರೆದ ಸಭಾಂಗಣ ಉದ್ಘಾಟಿಸಿದರು. ಕೇಂದ್ರದಲ್ಲಿ ಬೆಳೆದ ಅರ್ಕಾ ಸುಪ್ರೀಮ್, ಅರ್ಕಾ ಕೂರ್ಗ್ ಬಟರ್‌ಫ್ರೂಟ್ ಸೇರಿದಂತೆ ವಿವಿಧ ಹಣ್ಣು-ಹಂಪಲುಗಳು, ಕೃಷಿಯನ್ನು ಬಾಧಿಸುವ ವಿವಿಧ ಕೀಟಗಳು, ಸಾವಯವ ಗೊಬ್ಬರಗಳು, ಪೋಷಕಾಂಶಗಳು, ಹಣ್ಣಿನ ಗಿಡಗಳು ಹಾಗೂ ಕೃಷಿಕರ ತಾಜಾ ಜೇನು ಪ್ರದರ್ಶನಕ್ಕಿಡಲಾಗಿತ್ತು.