ಉ.ರಾ.ನಾಗೇಶ್‌ಗೆ ಸ್ಪಾರ್ಕ್ ನಿರೂಪಣಾ ರತ್ನ ಪ್ರಶಸ್ತಿ

ಉ.ರಾ. ನಾಗೇಶ್
ಉ.ರಾ. ನಾಗೇಶ್
Published on
ಕುಶಾಲನಗರ: ಲಕ್ಷ್ಮೀ ಕೆರಿಯರ್ ಅಕಾಡೆಮಿ, ಸ್ಪಾರ್ಕ್ ಅಕಾಡೆಮಿ ಹಾಗೂ ಸೂರ್ಯ ಫೌಂಡೇಷನ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕುಶಾಲನಗರದ ನಿವೃತ್ತ ಚಿತ್ರಕಲಾ ಶಿಕ್ಷಕ ಉ.ರಾ. ನಾಗೇಶ್ ಅವರಿಗೆ ‘ಸ್ಪಾರ್ಕ್ ನಿರೂಪಣಾ ರತ್ನ’ ಪ್ರಶಸ್ತಿ ನೀಡಲಾಯಿತು. ಜಿಲ್ಲೆಯ ಬಹುತೇಕ ಸಭೆ, ಸಮಾರಂಭಗಳಲ್ಲಿ ತಮ್ಮ ಕಂಚಿನ ಕಂಠಸಿರಿ, ನಿರರ್ಗಳ ವಾದ, ಆಯ್ದ ಶಬ್ದಗಳ ಪದಸಿರಿ ಸಂಪತ್ತಿನಿಂದ ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮಗಳನ್ನು ನಿರೂಪಿಸಿ, ನಿರ್ವಹಿಸಿ ವೇದಿಕೆಗಳಲ್ಲಿ ನಿರೂಪಣೆಯ ಸೊಬಗನ್ನು ಹೆಚ್ಚಿಸಿದ ಹಾಗೂ ಅದಕ್ಕೆ ಮೆರುಗು ತಂದುಕೊಟ್ಟಂತಹ ಅವರ ಕೌಶಲವನ್ನು ಪರಿಗಣಿಸಿ ಅವರಿಗೆ 2026ನೇ ಸಾಲಿನ ಪ್ರಶಸ್ತಿಯನ್ನು ಬೆಂಗಳೂರಿನ ಕಾಳತಮ್ಮನಹಳ್ಳಿಯಲ್ಲಿರುವ ಲಕ್ಷ್ಮೀ ಕೆರಿಯರ್ ಅಕಾಡೆಮಿ ಸಭಾಂಗಣದಲ್ಲಿ ನೀಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net