ಸಮುದಾಯದ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ

ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸುರೇಶ್ ಮಾತನಾಡಿದರು. ವಿ.ಎಸ್.ಬಸವರಾಜು, ವಿ.ವಿ.ಉಲ್ಲಾಸ್, ಕೆ.ಕೆ.ಮಂಜುನಾಥ್, ವಿ.ಆರ್.ಸತೀಶ್, ವಿ.ಟಿ.ತಮ್ಮಯ್ಯ, ವಿ.ಆರ್. ಗೌರಮ್ಮ, ವಿ.ಆರ್. ಸರಸ್ವತಿ, ವಿ.ಯು. ಜೈಯಿಶ್ ಇದ್ದರು.
ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಸುರೇಶ್ ಮಾತನಾಡಿದರು. ವಿ.ಎಸ್.ಬಸವರಾಜು, ವಿ.ವಿ.ಉಲ್ಲಾಸ್, ಕೆ.ಕೆ.ಮಂಜುನಾಥ್, ವಿ.ಆರ್.ಸತೀಶ್, ವಿ.ಟಿ.ತಮ್ಮಯ್ಯ, ವಿ.ಆರ್. ಗೌರಮ್ಮ, ವಿ.ಆರ್. ಸರಸ್ವತಿ, ವಿ.ಯು. ಜೈಯಿಶ್ ಇದ್ದರು.
Published on
ವಿರಾಜಪೇಟೆ: ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಒಕ್ಕಲಿಗ ಸಮುದಾಯ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಪರಸ್ಪರ ಒಗ್ಗಟ್ಟಿನ ಅಗತ್ಯವಿದೆ. ಇದರಿಂದ ಸಾಮಾಜಿಕ ಬಾಂಧವ್ಯ ಬಲವರ್ಧನೆಗೊಳ್ಳಲಿದೆ ಎಂದು ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸುರೇಶ್ ಅಭಿಪ್ರಾಯಪಟ್ಟರು.
ಕೊಡಗಿನ ಕೋತೂರು ಗ್ರಾಮದ ಮಲೆ ಮಹದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಮುದಾಯದವರ ಒಗ್ಗಟ್ಟು ವಿಶೇಷವಾಗಿ ದುರ್ಬಲರಿಗೆ ಸಹಾಯ ಮಾಡಲು, ಆರ್ಥಿಕ ಹೊರೆ ಕಡಿಮೆ ಮಾಡಲು ಮತ್ತು ಸಮುದಾಯದ ಅಭಿವೃದ್ಧಿಗೆ ಸಹಭಾಗಿತ್ವದ ಚಟುವಟಿಕೆಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅಲ್ಲದೆ ಇದು ಬಹುಮುಖ್ಯವಾಗಿ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತದೆ. ಜತೆಗೆ ಬಹಳಷ್ಟು ಸಮಸ್ಯೆಗಳನ್ನೂ ಪರಿಹರಿಸಿಕೊಳ್ಳಬಹುದಾಗಿದೆ ಎಂದರು.
ಕಳೆದ ಹತ್ತು ವರ್ಷಗಳ ಹಿಂದೆ ಸ್ಥಾಪನೆಯಾದ ಕೋತೂರು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಸ್ಥಳೀಯವಾಗಿ ಸಮುದಾಯದ ಸಾಮಾಜಿಕ ಪ್ರಗತಿಗಾಗಿ ಸಾಕಷ್ಟು ಶ್ರಮವಹಿಸುತ್ತಿದೆ. ಈಗಾಗಲೇ ಸಂಘದ ವತಿಯಿಂದ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕಾಗಿ ಕೋತೂರಿನಲ್ಲಿ ನಿವೇಶನವನ್ನು ಖರೀದಿಸಲಾಗಿದೆ. ಈ ಸ್ಥಳದಲ್ಲಿ ಉದ್ದೇಶಿತ ಸುಸಜ್ಜಿತವಾದ ಒಳಾಂಗಣ ಕ್ರೀಡಾಂಗಣ ಮತ್ತು ಸಮುದಾಯ ಭವನ ನಿರ್ಮಾಣ ಯೋಜನೆಯನ್ನು ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಾಗುವುದು. ಇದಕ್ಕಾಗಿ ಅಗತ್ಯವಿರುವ ಅನುದಾನವನ್ನು ಸರ್ಕಾರದಿಂದ ಮತ್ತು ದಾನಿಗಳಿಂದ ಪಡೆಯುವ ಪ್ರಕ್ರಿಯೆಗಳನ್ನು ಮುಂದಿನ ತಿಂಗಳಿನಿಂದ ಆರಂಭಿಸಲಾಗುವುದು ಎಂದರು.
ಸಂಘದ ಗೌರವ ಕಾರ್ಯದರ್ಶಿ ವಿ.ವೈ.ಗಣೇಶ್ ಆಡಳಿತ ಮಂಡಳಿ ವರದಿಯನ್ನು ಮಹಾಸಭೆಗೆ ಮಂಡಿಸಿದರು. ಸಂಘದ ನಿರ್ದೇಶಕರಾದ ವಿ.ಎಸ್.ಬಸವರಾಜು, ವಿ.ವಿ.ಉಲ್ಲಾಸ್, ಕೆ.ಕೆ.ಮಂಜುನಾಥ್, ವಿ.ಆರ್.ಸತೀಶ್, ವಿ.ಟಿ.ತಮ್ಮಯ್ಯ, ವಿ.ಆರ್. ಗೌರಮ್ಮ, ವಿ.ಆರ್.ಸರಸ್ವತಿ, ವಿ.ಯು. ಜೈಯಿಶ್, ವಿ. ಆರ್. ಪರಮೇಶ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net