ನಾಪೋಕ್ಲುವಿನಲ್ಲಿ ಮೇ 2 ರಂದು ನಡೆಯಲಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಪೈನಲ್‌ಗೆ ಬರಲು ಕೇಂದ್ರ ಕ್ರೀಡಾ ಸಚಿವ ಡಾ. ಮಾನ್ಸೂಕ್ ಲಕ್ಷ್ಮಣ ಭಾಯ್ ಮಾಂಡವೀಯ ಅವರನ್ನು ಆಹ್ವಾನಿಸಲಾಯಿತು. ಯದುವೀರ್, ಸಿ.ಪಿ. ಕರುಂಬಯ್ಯ, ದೀನಾ ಚೇನಂಡ, ವಿವೇಕ್ ಪೂಣಚ್ಚ, ಬ್ರಿಗೇಡಿಯರ್ ಸಿ.ಎನ್. ಚೀಯಣ್ಣ, ವಿಶುಕುಟ್ಟಪ್ಪ ಇದ್ದರು.
Published on:
Copied
Follow Us
ಮಡಿಕೇರಿ:
ನಾಪೋಕ್ಲುವಿನಲ್ಲಿ ಮೇ 2 ರಂದು ನಡೆಯಲಿರುವ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಪೈನಲ್‌ಗೆ ಬರಲು ಕೇಂದ್ರ ಕ್ರೀಡಾ ಸಚಿವ ಡಾ. ಮಾನ್ಸೂಕ್ ಲಕ್ಷ್ಮಣ ಭಾಯ್ ಮಾಂಡವೀಯ ಸಮ್ಮತಿ ಸೂಚಿಸಿದ್ದಾರೆ. ಚೇನಂಡ ಕೊಡವ ಹಾಕಿ ಪಂದ್ಯಾವಳಿ ಸಮಿತಿಯ ಪ್ರಮುಖ ನಿಯೋಗ ಸೋಮವಾರ ಬೆಂಗಳೂರಿನಲ್ಲಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ನೇತೃತ್ವದಲ್ಲಿ ಕೇಂದ್ರ ಕ್ರೀಡಾ ಸಚಿವ ಮಾನ್ಸೂಕ್ ಮಾಂಡವೀಯ ಅವರನ್ನು ಭೇಟಿಯಾಗಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಬರುವಂತೆ ಆಹ್ವಾನ ನೀಡಿದ ಸಂದರ್ಭ ಇದಕ್ಕೆ ಸಚಿವರು ಸಮ್ಮತಿ ಸೂಚಿಸಿದ್ದಾರೆ. ಕೊಡವ ಕುಟುಂಬಗಳ ನಡುವಿನ 26 ನೇ ವರ್ಷದ ಹಾಕಿ ಪಂದ್ಯಾವಳಿಗೆ ಖಂಡಿತಾ ಬರುವುದಾಗಿ ಹೇಳಿದ ಸಚಿವರು, ಕುಟುಂಬಗಳ ನಡುವೆ ಹಾಕಿ ಪಂದ್ಯಾವಳಿಯನ್ನು ಒಗ್ಗಟ್ಟಿನ ಬೆಸುಗೆಯಾಗಿ ರೂಪಿಸಿರುವುದು ಮಾದರಿಯಾಗಿದೆ ಎಂದು ಹೇಳಿದರು. ಇದೇ ಸಂದರ್ಭ ಚೇನಂಡ ಹಾಕಿ ಪಂದ್ಯಾವಳಿಯ ಬ್ರೋಷರ್ ಕೂಡ ಸಚಿವರಿಗೆ ನೀಡಲಾಯಿತು.
ಕೊಡವ ಕೌಟುಂಬಿಕ ಹಾಕಿ ಕ್ರೀಡೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ ಸಚಿವರು .ಕೌಟುಂಬಿಕ ಹಾಕಿ ಕ್ರೀಡಾ ಪಂದ್ಯಾಟದ ಯಶಸ್ವಿ ಯೋಜನೆಗೆ ಶುಭ ಹಾರೈಸಿದರು.
ರಾಜ್ಯ ಸಭಾ ಸದಸ್ಯ ಅಜಯ್ ಮಖಾನ್ ಅವರನ್ನು ಕೂಡ ಭೇಟಿಯಾದ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಪ್ರಮುಖರು ಪೈನಲ್ ಪಂದ್ಯಾಟಕ್ಕೆ ಸಂಸದರನ್ನು ಆಹ್ವಾನಿಸಿದರು. 10 ವರ್ಷಗಳ ಹಿಂದೆಯೇ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಉದ್ದೇಶವನ್ನು ಶ್ಲಾಘಿಸಿ ಕೊಡಗಿನಲ್ಲಿ ಕ್ರೀಡೆಗೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿದೆ ಹೇಳಿದ್ದನ್ನು ಸ್ಮರಿಸಿಕೊಂಡ ಅಜಯ್ ಮಖಾನ್. ಈ ಬಾರಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಬರುವುದಾಗಿದೆ. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಸಹಕಾರದಲ್ಲಿ ರಾಜ್ಯ ಸಭಾ ಸದಸ್ಯ ಅಜಯ್ ಮಖಾನ್ ಅವರನ್ನು ಇತ್ತೀಚೆಗೆ ಚೇನಂಡ ಕುಟುಂಬಸ್ಥರ ನಿಯೋಗ ಭೇಟಿ ಮಾಡಿತ್ತು.
ನಿಯೋಗದಲ್ಲಿ ಚೇನಂಡ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಸಮಿತಿ ಅಧ್ಯಕ್ಷ ಸಿ.ಪಿ. ಕರುಂಬಯ್ಯ, ಕಾರ್ಯಾಧ್ಯಕ್ಷ ದೀನಾ ಚೇನಂಡ, ವಿವೇಕ್ ಪೂಣಚ್ಚ, ಬ್ರಿಗೇಡಿಯರ್ ಸಿ.ಎನ್. ಚೀಯಣ್ಣ, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ವಿಶುಕುಟ್ಟಪ್ಪ ಇಬ್ಬರು.