ಚಿತ್ರೋತ್ಸವಕ್ಕೆ ಉಮ್ಮತಾಟ್ ಆಯ್ಕೆ

ಉಮ್ಮತ್ತಾಟ್ ದಿ ರಿದಮ್ ಆಫ್ ಕೊಡವ ಸಾಕ್ಷ್ಯಚಿತ್ರದ ಪೋಸ್ಟರ್
ಉಮ್ಮತ್ತಾಟ್ ದಿ ರಿದಮ್ ಆಫ್ ಕೊಡವ ಸಾಕ್ಷ್ಯಚಿತ್ರದ ಪೋಸ್ಟರ್
Published on
ಮಡಿಕೇರಿ:
ಶ್ರೀಮಂತ ಕೊಡವ ಸಂಸ್ಕೃತಿಯಲ್ಲಿ ಉಮ್ಮತಾಟ್ ನೃತ್ಯ ಪ್ರಕಾರಕ್ಕೆ ದೊಡ್ಡದಾದ ಪ್ರಾಮುಖ್ಯತೆ ಇದೆ. ಇದೀಗ ಇದೇ ವಿಷಯವನ್ನಾಧರಿಸಿ ನಿರ್ಮಾಣ ಆಗಿರುವ ಸಾಕ್ಷö್ಯ ಚಿತ್ರ ಅಂತಾರಾಷ್ಟಿçÃಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ. ಕೊಡವ ಸಮುದಾಯದ ಐತಿಹಾಸಿಕ ಪರಂಪರೆಯನ್ನು ಬಿಂಬಿಸುವ ಉಮ್ಮತ್ತಾಟ್ ದಿ ರಿದಮ್ ಆಫ್ ಕೊಡವ ಸಾಕ್ಷ್ಯಚಿತ್ರ ಪ್ರತಿಷ್ಠಿತ 19ನೇ ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿದ್ದು ಜೂನ್ 15 ರಿಂದ ಜೂನ್ 22ರ ತನಕ ನಡೆಯಲಿರುವ ಈ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ರಾಷ್ಟç ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕ ಪ್ರಕಾಶ್ ಕೆ. ಕಾರ್ಯಪ್ಪ ಈ ಸಾಕ್ಷö್ಯಚಿತ್ರ ನಿರ್ದೇಶನ ಮಾಡಿದ್ದಾರೆ. ರಾಷ್ಟçಪ್ರಶಸ್ತಿ ಪುರಸ್ಕೃತ ಕೊಡಗಿನ ಪ್ರಥಮ ನಿರ್ದೇಶಕಿ ಹೆಗ್ಗಳಿಕೆಯನ್ನೂ ಹೊಂದಿರುವ ಕೆ. ಯಶೋದಾ ಪ್ರಕಾಶ್ ತಮ್ಮ ಸ್ವಸ್ತಿಕ್ ಎಂಟರ್‌ಟೈನ್‌ಮೆAಟ್ ಬ್ಯಾನರ್ ಅಡಿಯಲ್ಲಿ 'ಉಮ್ಮತ್ತಾಟ್ ದಿ ರಿದಮ್ ಆಫ್ ಕೊಡವ' ಸಾಕ್ಷö್ಯ ಚಿತ್ರ ನಿರ್ಮಿಸಿದ್ದಾರೆ.
ಕೊಡವ ಸಮುದಾಯದ ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಸಂರಕ್ಷಿಸಿ ದಾಖಲೀಕರಣಗೊಳಿಸುವ ಉದ್ದೇಶದಿಂದ ಉಮ್ಮತಾಟ್ ಬಗ್ಗೆ ಸಾಕ್ಷö್ಯ ಚಿತ್ರ ನಿರ್ಮಾಣಕ್ಕೆ ಕೊಡಗಿನ ಈ ಪ್ರತಿಭಾವಂತ ಜೋಡಿ ಮುಂದಾಯಿತು. ನಂತರ ಇದು 40 ನಿಮಿಷ ಅವಧಿಯ ಸಾಕ್ಷö್ಯಚಿತ್ರದ ರೂಪದಲ್ಲಿ ನಿರ್ಮಾಣ ಕಂಡಿತು. 2025ರಲ್ಲಿ ನಿರ್ಮಾಣವಾದ ಸಾಕ್ಷö್ಯಚಿತ್ರ ಈಗ ಅಂತಾರಾಷ್ಟಿçÃಯ ಚಲನಚಿತ್ರೋತ್ಸವಗಳಲ್ಲಿ ಭಾಗವಹಿಸುವ ಅರ್ಹತೆ ಪಡೆದುಕೊಂಡಿದೆ.
ಗೋವಾದಲ್ಲಿ ನಡೆದಿದ್ದ 56ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಇಂಡಿಯನ್ ಪನೋರಮಾ ನಾನ್-ಫೀಚರ್ ವಿಭಾಗದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಈ ಸಾಕ್ಷ್ಯಚಿತ್ರಕ್ಕೆ ಮೊದಲ ಬಾರಿಗೆ ರಾಷ್ಟ್ರೀಯ ಮನ್ನಣೆ ಸಿಕ್ಕಿತ್ತು.
ಈಗ ಮುಂಬೈ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುವ ಮೂಲಕ ರಾಷ್ಟ್ರೀಯ ಮತ್ತು ಅಂತಾರಾಷ್ಟಿçÃಯ ಮಟ್ಟದಲ್ಲಿ ಕೊಡವ ಸಾಂಸ್ಕೃತಿಕ ಪ್ರಾತಿನಿಧ್ಯಕ್ಕೆ ಮಹತ್ವದ ಮೈಲಿಗಲ್ಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮ ಯೋಜಿಸುವ ಸಾಕ್ಷ್ಯಚಿತ್ರಗಳು, ಕಿರುಚಿತ್ರಗಳು ಮತ್ತು ಅನಿಮೇಷನ್ ಚಿತ್ರಗಳಿಗಾಗಿ ದೇಶದಲ್ಲೇ ನಡೆಯುವ ಪ್ರಮುಖ ದ್ವೆöÊವಾರ್ಷಿಕ ಚಲನಚಿತ್ರೋತ್ಸವಗಳಲ್ಲಿ ಇದು ಒಂದಾಗಿದ್ದು ಮುಂಬೈನ ಪೆದ್ದರ್ ರಸ್ತೆಯಲ್ಲಿರುವ 'ಎನ್‌ಎಫ್‌ಡಿಸಿ ಫಿಲ್ಮ್ಸ್ ಡಿವಿಷನ್ ಕಾಂಪ್ಲೆಕ್ಸ್ನಲ್ಲಿ ಈ ಚಲನಚಿತ್ರೋತ್ಸವ ನಡೆಯಲಿದೆ. ಭಾರತ ಸೇರಿದಂತೆ ವಿಶ್ವದಾದ್ಯಂತ ಪ್ರಶಂಸೆ ಪಡೆದ ಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.
"

ಕೊಡಗಿನಲ್ಲಿ ಚಲನಚಿತ್ರ ಕ್ಷೇತ್ರಕ್ಕೆ ಇರುವ ಸೀಮಿತ ಅವಕಾಶಗಳ ಮಧ್ಯೆ ನಾವು ಕೊಡವ ಸಿನಿಮಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇವೆ. ಸಿನಿಮಾ ನಿರ್ಮಾಣ, ನಿರ್ದೇಶನ ನಮ್ಮ ಹವ್ಯಾಸ. ಈ ಮೂಲಕ ಕೊಡಗಿನಲ್ಲಿ ಸಿನಿಮಾ ಚಟುವಟಿಕೆಗಳನ್ನು ಜೀವಂತವಾಗಿ ಇಡುವ ಪ್ರಯತ್ನದಲ್ಲಿ ಉಮ್ಮತ್ತಾಟ್ ದಿ ರಿದಮ್ ಆಫ್ ಕೊಡವ ಸಿನಿಮಾ ಅಂತಾರಾಷ್ಟಿçÃಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗುವ ಮೂಲಕ ನಮ್ಮ ಶ್ರಮಕ್ಕೆ ಬೆಲೆ ಸಿಕ್ಕಂತೆ ಆಗಿದೆ. ಅಲ್ಲಿ ಒಟ್ಟು 2 ಪ್ರದರ್ಶನ ಇರಲಿದೆ. ಒಂದು ಪ್ರದರ್ಶನ ಜೂ. 16ಕ್ಕೆ ಇದ್ದು, ಮತ್ತೊಂದು ಪ್ರದರ್ಶನದ ದಿನಾಂಕ ಇನ್ನಷ್ಟೇ ನಿಗದಿ ಆಗಬೇಕಿದೆ.

— ಪ್ರಕಾಶ್ ಕೆ. ಕಾರ್ಯಪ್ಪ, ನಿರ್ದೇಶಕ, ಉಮ್ಮತ್ತಾಟ್ ದಿ ರಿದಮ್ ಆಫ್ ಕೊಡವ ಸಾಕ್ಷ್ಯಚಿತ್ರ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net